HBD Rakshith Shetty: ಸಪ್ತಸಾಗರದಾಚೆಗೆ ರಕ್ಷಿತ್ ಶೆಟ್ಟಿ ಬರ್ತಡೇ; ಚಾರ್ಲಿ ಜೊತೆ ಸೆಲಬ್ರೇಶನ್ ಜೋರು

ಇನ್ನು, ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಅಭಿಮಾನಿಗಳು ಕಾಮನ್​ ಡಿಪಿಯನ್ನು ಲಾಂಚ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ರಕ್ಷಿತ್​ ಶೆಟ್ಟಿ ಬರ್ತ್​ ಡೇ ಗೆ ಕಾಮನ್ ಡಿಪಿ

ರಕ್ಷಿತ್​ ಶೆಟ್ಟಿ ಬರ್ತ್​ ಡೇ ಗೆ ಕಾಮನ್ ಡಿಪಿ

 • Share this:
  ಇಂದು ಸಿಂಪಲ್ ಸ್ಟಾರ್​ ರಕ್ಷಿತ್​ ಶೆಟ್ಟಿಗೆ 38ನೇ ಹುಟ್ಟುಹಬ್ಬದ ಸಂಭ್ರಮ. ಈ ಎರಡು ವಿಶೇಷಗಳು ಈ ದಿನದ ಸಂಭ್ರಮವನ್ನು ದುಪ್ಪಟ್ಟಾಗಿಸುತ್ತಿವೆ. ಮೊದಲನೆಯದಾಗಿ ಇಂದು ‘777 ಚಾರ್ಲಿ‘ ಸಿನಿಮಾದ ಟೀಸರ್​​ ರಿಲೀಸ್ ಆಗುತ್ತಿದೆ. ಎರಡನೆಯದು ‘ಸಪ್ತ ಸಾಗರದಾಚೆ ಎಲ್ಲೋ‘ ಚಿತ್ರ ತಂಡ ಇಂದು ಹೊಸ ಪೋಸ್ಟರ್​ ಬಿಡುಗಡೆ ಮಾಡುತ್ತಿದೆ.

  ಇನ್ನು, ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರ ಅಭಿಮಾನಿಗಳು ಕಾಮನ್​ ಡಿಪಿಯನ್ನು ಲಾಂಚ್ ಮಾಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.  ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು‘ ಚಿತ್ರ ತಂಡ ‘ಸಪ್ತ ಸಾಗರದಾಚೆ ಎಲ್ಲೋ‘ ಸಿನಿಮಾವನ್ನು ಚಿತ್ರೀಕರಿಸಿದೆ. ರಕ್ಷಿತ್​ ಶೆಟ್ಟಿ ಜೊತೆ ರುಕ್ಮಿಣಿ ವಾಸಂತ್ ತೆರೆ ಹಂಚಿಕೊಂಡಿದ್ದಾರೆ.  ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಂಪಲ್​ ಸ್ಟಾರ್​ ಎಂದೇ ಹೆಸರು ಪಡೆದಿರುವ ರಕ್ಷಿತ್​ ಶೆಟ್ಟಿಯ ಖ್ಯಾತಿ ಪರಭಾಷೆಗಳಿಗೂ ವಿಸ್ತರಿಸಿದೆ. ‘777 ಚಾರ್ಲಿ‘ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಬೇರೆ-ಬೇರೆ ಭಾಷೆಯ ನಟ-ನಟಿಯರು ಇಂದು ‘777 ಚಾರ್ಲಿ‘ ಸಿನಿಮಾದ ಟೀಸರ್ ಲಾಂಚ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಜೊತೆಗೆ ನಾಯಿಯ ಪಾತ್ರವೂ ಪ್ರಮುಖವಾಗಿದೆ.

  ತೆಲುಗಿನಲ್ಲಿ ನ್ಯಾಚುರಲ್​ ಸ್ಟಾರ್​ ನಾನಿ ‘777 ಚಾರ್ಲಿ‘ ಟೀಸರ್​ ರಿಲೀಸ್​ ಮಾಡುತ್ತಿದ್ದರೆ, ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಿದ್ದಾರೆ. ಪೃಥ್ವಿರಾಜ್​ ಮಲಯಾಳಂನಲ್ಲಿ ಟೀಸರ್​ ರಿಲೀಸ್ ಆಗಲಿದೆ. ಹಿಂದಿ ಮತ್ತು ಕನ್ನಡ ಟೀಸರ್​ಗಳು ಪರಮ್​ವಾ ಸ್ಟುಡಿಯೋ ಮೂಲಕ ರಿಲೀಸ್​ ಆಗುತ್ತಿವೆ.

  777 ಚಾರ್ಲಿ ಸಿನಿಮಾವನ್ನು ಕಿರಣ್​ ರಾಜ್​ ನಿರ್ದೇಶಿಸಿದ್ದಾರೆ. ರಕ್ಷಿತ್​ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ. ಶೆಟ್ಟಿ, ದಾನಿಶ್​ ಸೇಟ್​ ಮೊದಲಾದವರು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಪರಮ್​ವಾ ಸ್ಟುಡಿಯೋ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿ ಬರಲಿದೆ.

  2019ರಲ್ಲಿ ‘ಅವನೇ ಶ್ರೀಮನ್ನಾರಾಯಣ‘ ಚಿತ್ರ ಬಿಡುಗಡೆ ಮಾಡಿದ ಬಳಿಕ ರಕ್ಷಿತ್ ಶೆಟ್ಟಿಯವರು 777 ಚಾರ್ಲಿ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
  Published by:Latha CG
  First published: