HOME » NEWS » Entertainment » HBD KICHCHA SUDEEP KOTIGOBBA 3 TEAM IS RELEASING NEW TEASER FROM KOTIGOBBA 3 ON SUDEEPS BIRTHDAY AE

HBD Kichcha Sudeep: ಸುದೀಪ್​ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ 3 ಚಿತ್ರತಂಡದ ಕಡೆಯಿಂದ ಭರ್ಜರಿ ಉಡುಗೊರೆ..!

Kotigobba 3 Teaser: ಕೋಟಿಗೊಬ್ಬ 3 ಚಿತ್ರತಂಡದ ಕಡೆಯಿಂದ ನಿನ್ನೆಯೇ ಕಿಚ್ಚನ ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಕ್ಕಿದೆ. ಈಗ ಇದೇ ತಂಡ ಮತ್ತೊಂದು ಗಿಫ್ಟ್​ ಕೊಡಲಿದೆ. ಹೌದು, ಸುದೀಪ್​ ಅವರ ಹೊಸ ಪೋಸ್ಟರ್​ ರಿಲೀಸ್ ಮಾಡಿರುವ ಚಿತ್ರತಂಡ ಈಗ, ಹೊಸ ಟೀಸರ್​ ರಿಲೀಸ್​ ಮಾಡಲಿದೆ.

Anitha E | news18-kannada
Updated:September 2, 2020, 8:28 AM IST
HBD Kichcha Sudeep: ಸುದೀಪ್​ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ 3 ಚಿತ್ರತಂಡದ ಕಡೆಯಿಂದ ಭರ್ಜರಿ ಉಡುಗೊರೆ..!
ಕೋಟಿಗೊಬ್ಬ 3 ಸಿನಿಮಾದಲ್ಲಿ ಸುದೀಪ್​
  • Share this:
ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಇಂದು ಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊರೋನಾ ಕಾರಣದಿಂದಾಗಿ ಎಲ್ಲದಕ್ಕೂ ಬ್ರೇಕ್​ ಬಿದ್ದಿದೆ. ಜೊತೆಗೆ ಕೊರೋನಾ ಕಾರಣದಿಂದಲೇ ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಸುದೀಪ್​ ಹೇಳಿದ್ದಾರೆ. 

ಕೋಟಿಗೊಬ್ಬ 3 ಚಿತ್ರತಂಡದ ಕಡೆಯಿಂದ ನಿನ್ನೆಯೇ ಕಿಚ್ಚನ ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಕ್ಕಿದೆ. ಈಗ ಇದೇ ತಂಡ ಮತ್ತೊಂದು ಗಿಫ್ಟ್​ ಕೊಡಲಿದೆ. ಹೌದು, ಸುದೀಪ್​ ಅವರ ಹೊಸ ಪೋಸ್ಟರ್​ ರಿಲೀಸ್ ಮಾಡಿರುವ ಚಿತ್ರತಂಡ ಈಗ, ಹೊಸ ಟೀಸರ್​ ರಿಲೀಸ್​ ಮಾಡಲಿದೆ.

New Poster released from Kichcha Sudeep starrer movie Kotigobba 3 as a birthday gift, Kotigobba 3 New Poster
ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್


ಇಂದು ಬೆಳಿಗ್ಗೆ 11ಕ್ಕೆ ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಕೋಟಿಗೊಬ್ಬ3 ಚಿತ್ರದ ಹೊಸ ಟೀಸರ್ ರಿಲೀಸ್​ ಆಗಲಿದೆ. ಈ ಬಗ್ಗೆ ಆನಂದ್​ ಆಡಿಯೋ ತಮ್ಮ ಟ್ವಿಟರ್​ನಲ್ಲಿ ಪ್ರಕಟಿಸಿದೆ.

#Kotigobba3Teaser



ಇಷ್ಟೇ ಅಲ್ಲ ಸುದೀಪ್​ ಅಭಿನಯದ ಫ್ಯಾಂಟಮ್​ ಚಿತ್ರತಂಡ ಸಹ ಇಂತಹದ್ದೇ ಒಂದು ಉಡುಗೊರೆ ನೀಡುವ ಪ್ಲಾನ್​ನಲ್ಲಿದೆ. ಜೊತೆಗೆ ವಿಷ್ಣುವರ್ಧನ್ ಅಭಿಮಾನಿಗಳು ವಿಶೇಷವಾಗಿ ಮೋಷನ್​ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ. ಇವುಗಳ ಜೊತೆಗೆ ಸುದೀಪ್​ ಅವರ ಬಯೋಗ್ರಫಿ ಸಹ ಇಂದೇ ಲೋಕಾರ್ಪಣೆಗೊಳ್ಳಲಿದೆ.
Published by: Anitha E
First published: September 2, 2020, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories