ಅಕ್ಷಯ್​ ಕುಮಾರ್​ ಅವರ ಈ ಟ್ಯಾಟೂಗಳನ್ನು ನೀವು ನೋಡಿದ್ದೀರಾ?

news18
Updated:May 16, 2018, 7:14 PM IST
ಅಕ್ಷಯ್​ ಕುಮಾರ್​ ಅವರ ಈ ಟ್ಯಾಟೂಗಳನ್ನು ನೀವು ನೋಡಿದ್ದೀರಾ?
news18
Updated: May 16, 2018, 7:14 PM IST
ನ್ಯೂಸ್​ 18 ಕನ್ನಡ 

ಸಿನಿಮಾಗಳಲ್ಲಿ ಸ್ಟಾರ್​ಗಳಲ್ಲಿ ವಿಭಿನ್ನ ಲುಕ್​ಗಳಲ್ಲಿ ನೋಡಿರುತ್ತೀರಾ. ಸಿನಿಮಾಗಳ ಪಾತ್ರ ಹಾಗೂ ತಮಗೆ ಇಷ್ಟವೆಂದು ಅವರು ಬೇರೆ ಬೇರೆ ಹೇರ್​ಸ್ಟೈಲ್​ ಮಾಡಿಸಿಕೊಂಡಿರುವುದನ್ನೂ ಕಂಡಿರುತ್ತೀರಿ. ಬೇಕಾದಾಗ ತೂಕ ಹೆಚ್ಚಿಸಿಕೊಳ್ಳುತ್ತಾರೆ, ಬೇಡವಾದಾಗ ತೂಕ ಇಳಿಸಿಕೊಳ್ಳುತ್ತಾರೆ. ಇನ್ನು ಉಳಿದಂತೆ ಪ್ಲಾಸ್ಟಿಕ್​ ಸರ್ಜರಿಗಳಿಂದ ತಮ್ಮ ಇಡೀ ಲುಕ್​ ಅನ್ನೇ ಬದಲಿಸಿಕೊಳ್ಳುತ್ತಾರೆ.

ಟ್ಯಾಟೂಗಳ ವಿಷಯಕ್ಕೆ ಬಂದರೆ ಅದರ ಬಗ್ಗೆಯೂ ತಾರೆಗಳು ಹೆಚ್ಚಿನ ಗಮನವಹಿಸುತ್ತಾರೆ. ತಮಗಿಷ್ಟದ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ನಟ-ನಟಿಯರಲ್ಲಿ ಹೆಚ್ಚಿನವರು ಅದನ್ನು ಮುಚ್ಚಿಡಲು ಬಯಸುತ್ತಾರೆ. ಅಕ್ಷಯ್​ ಸಹ ಇದೇ ಗುಂಪಿಗೆ ಸೇರುತ್ತಾರೆ. ಅವರು ಸಹ ತಮ್ಮ ಬೆನ್ನಿನ ಮೇಲೆ ಮಗ ಆರವ್​ ಹೆಸರಿನ ಟ್ಯಾಟು ಹಾಕಿಸಿಕೊಂಡಿದ್ದಾರೆ. ಇದನ್ನು ಸಿನಿಮಾಗಳಲ್ಲಿ ನೀವು ನೋಡಿರಲಿಕ್ಕಿಲ್ಲ.

ಅಕ್ಷಯ್​ ಶರ್ಟ್​ ಹಾಕದೆ ಸಹ ಸಾಕಷ್ಟು ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಆಗ ಅವರ ಬೆನ್ನಿನ ಮೇಲೆ ಇರುವ ಟ್ಯಾಟು ಕಾಣದಂತೆ ಕಾಳಜಿವಹಿಸುತ್ತಾರೆ. ಅದಕ್ಕಾಗಿ ಮೇಕಪ್​ ಮೊರೆ ಹೋಗುತ್ತಾರೆ. ಅಕ್ಷಯ್​ ಅವರ ಈ ಫೇಮಸ್​ ಟ್ಯಾಟೂ ಯಾವಾಗಲೋ ಒಮ್ಮೆ ಮಾತ್ರ ಕಾಣ ಸಿಗುತ್ತದೆ. ಆದರೆ ಇತ್ತೀಚೆಗೆ ಅಕ್ಷಯ್​ ಈಜುಕೊಳದಲ್ಲಿ ನಿಂತಿರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರ ಬೆನ್ನಿನ ಮೇಲೆ ಅಚ್ಚೆ ಹಾಕಿಸಿಕೊಂಡಿರುವ ಮನಗ ಹೆಸರು ಕಾಣ ಸಿಗುತ್ತದೆ.

ಅಕ್ಷಯ್​ ತಮ್ಮ ಮಗನ ಹೆಸರು ಮಾತ್ರವಲ್ಲದೆ ಪತ್ನಿ ಟ್ವಿಂಕಲ್​ ಹೆಸರನ್ನೂ ಸಹ ಅವರು ತಮ್ಮ ಭುಜದ ಮೇಲೆ ಹಾಕಿಸಿಕೊಂಡಿದ್ದಾರೆ. ಅದನ್ನು ನೀವು ನೋಡಿರುತ್ತೀರಾ. ಇಲ್ಲ ಅಂದರೆ ಯಾವಾಗಲಾದರು ನೋಡಲು ಅವಕಾಶ ಸಿಗಬಹುದು.

ಇನ್ನೂ ಅನಿಲ್​ ಕಪೂರ್​ ಮಗ ಹರ್ಷವರ್ಧನ್​ ಕಪೂರ್​ ಸಹ ತನ್ನ ಇಬ್ಬರು ಸೋದರಿಯರಾದ ಸೋನಮ್​ ಹಾಗೂ ರಿಯಾ ಅವರ ಹೆಸರುಗಳ ಟ್ಯಾಟು ಹಾಕಿಸಿಕೊಂಡಿದ್ದಾರೆ. ಸಾಲದಕ್ಕೆ ರಿಯಾ ಅವರ ಚಿತ್ರವನ್ನೂ ಹಾಕಿಸಿಕೊಂಡಿದ್ದಾರೆ.

 💦


A post shared by Akshay Kumar (@akshaykumar) onFirst published:May 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ