Rocking Star Yash ಅವರ ಸೂಪರ್ ಹಿಟ್ ಸಿನಿಮಾ ನೋಡದೇ ಮಿಸ್ ಮಾಡ್ಕೊಂಡಿದ್ದೀರಾ? ಹಾಗಿದ್ರೆ ಈಗ ನಿಮಗಿದೆ ನೋಡುವ ಅವಕಾಶ

ಕೆಜಿಎಫ್ ಚಿತ್ರಕ್ಕೂ ಮೊದಲು ಯಶ್ ಅನೇಕ ಸೂಪರ್ ಹಿಟ್ ಚಿತ್ರಗಳ ಭಾಗವಾಗಿದ್ದರು. ನೀವು ಅವುಗಳನ್ನು ನೋಡದೆ ಮಿಸ್ ಮಾಡಿಕೊಂಡಿದ್ದರೆ, ಅವುಗಳನ್ನು ನೀವು ಓಟಿಟಿ ಪ್ಲಾಟ್‌ಫಾರ್ಮ್ ಗಳಲ್ಲಿ ಅವುಗಳನ್ನು ನೋಡಬಹುದು. ಯಶ್ ಅಭಿನಯದ 7 ಅತ್ಯುತ್ತಮ ಚಲನಚಿತ್ರಗಳು ಇಲ್ಲಿವೆ ನೋಡಿ.

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

  • Share this:
ರಾಕಿಂಗ್ ಸ್ಟಾರ್ ಯಶ್ (Rocking Star Yash) ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಹಳ್ಳಿಯಿಂದ (village) ಹಿಡಿದು ದಿಲ್ಲಿಯ (Delhi) ವರೆಗೆ ಎಲ್ಲರ ಬಾಯಲ್ಲೂ ಕೆಜಿಎಫ್: ಚಾಪ್ಟರ್ 2 (KGF: Chapter 2)  ಚಿತ್ರದ ಮಾತೇ ಕೇಳಬಹುದು ಎಂದರೆ ತಪ್ಪಾಗುವುದಿಲ್ಲ. ಕೆಜಿಎಫ್: ಚಾಪ್ಟರ್ 1 ಮತ್ತು ಕೆಜಿಎಫ್: ಚಾಪ್ಟರ್ 2 ಚಿತ್ರಗಳು ಯಶ್ ಅವರನ್ನು ರಾಷ್ಟ್ರವ್ಯಾಪಿ (Nationwide) ಖ್ಯಾತಿಯನ್ನು ತಂದು ಕೊಟ್ಟಿತು ಎಂದು ಹೇಳಬಹುದು. ಅವರು ದೂರದರ್ಶನ ನಟರಾಗಿ (Actor) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಚಲನಚಿತ್ರಗಳಿಗೆ (Movie) ಕಾಲಿಟ್ಟರು. ಯಶ್ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಎರಡು ದಶಕಗಳೇ ಕಳೆದಿವೆ.

ಯಶ್ ಅವರ ಸಿನಿ ಜರ್ನಿ

ಯಶ್ ಯಾವಾಗಲೂ ಸ್ಟಾರ್ ಆಗಲು ಬಯಸಿದ್ದರು, ಅವರು ತಮ್ಮ ಜೇಬಿನಲ್ಲಿ ಕೇವಲ 300 ರೂಪಾಯಿಯನ್ನು ಇಟ್ಟುಕೊಂಡು ಮನೆಯಿಂದ ಹೊರಗೆ ಬಂದವರು ಮತ್ತು ನಟನೆಯ ಮೇಲಿನ ಆಸಕ್ತಿಯಿಂದ ಅವರು ಒಂದು ನಾಟಕ ತಂಡವನ್ನು ಸೇರಿಕೊಂಡರು. ಅವರು ನಿಧಾನವಾಗಿ ಪ್ರದರ್ಶನ ನೀಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಪಡೆದರು. 2004ರಲ್ಲಿ, ಯಶ್ ಅವರು ‘ನಂದ ಗೋಕುಲ’ ಎಂಬ ಧಾರವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರೊಂದಿಗೆ ಜೋಡಿಯಾಗಿ ನಟಿಸಿದ್ದರು.

2007 ರಲ್ಲಿ ಯಶ್ ಗೆ ಚಲನಚಿತ್ರಗಳಿಗೆ ಪ್ರವೇಶಿಸುವ ಅವಕಾಶ ಸಿಕ್ಕಿತು. ಅವರ ಮೊದಲ ಚಿತ್ರ ಜಂಬದ ಹುಡುಗಿ, ಅದರಲ್ಲಿ ಅವರು ಪೋಷಕ ಪಾತ್ರವನ್ನು ನಿರ್ವಹಿಸಿದರು, ಆ ಪಾತ್ರಕ್ಕಾಗಿ ಅವರಿಗೆ ಪ್ರಶಸ್ತಿ ಸಹ ಬಂದಿತು. ಕನ್ನಡ ಚಿತ್ರೋದ್ಯಮದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಅವರು ಸ್ವಲ್ಪ ಸಮಯ ತೆಗೆದುಕೊಂಡರು. ನಂತರ ಅವರು ಒಂದರ ಮೇಲೊಂದು ಎಂಬಂತೆ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದರು.

ಕೆಜಿಎಫ್ ಚಿತ್ರಕ್ಕೂ ಮೊದಲು ಯಶ್ ಅನೇಕ ಸೂಪರ್ ಹಿಟ್ ಚಿತ್ರಗಳ ಭಾಗವಾಗಿದ್ದರು. ನೀವು ಅವುಗಳನ್ನು ನೋಡದೆ ಮಿಸ್ ಮಾಡಿಕೊಂಡಿದ್ದರೆ, ಅವುಗಳನ್ನು ನೀವು ಓಟಿಟಿ ಪ್ಲಾಟ್‌ಫಾರ್ಮ್ ಗಳಲ್ಲಿ ಅವುಗಳನ್ನು ನೋಡಬಹುದು. ಯಶ್ ಅಭಿನಯದ 7 ಅತ್ಯುತ್ತಮ ಚಲನಚಿತ್ರಗಳು ಇಲ್ಲಿವೆ ನೋಡಿ.

1. ರಾಜಾಹುಲಿ - 2013
ರಾಜಾಹುಲಿ ಚಿತ್ರ ತಮಿಳಿನ ‘ಸುಂದರಪಾಂಡಿಯನ್’ ಚಿತ್ರದ ಕನ್ನಡ ರಿಮೇಕ್ ಆಗಿತ್ತು. ಈ ಚಿತ್ರದಲ್ಲಿ ಯಶ್ ಮತ್ತು ಮೇಘನಾ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಎಂಎಕ್ಸ್ (MX) ಪ್ಲೇಯರ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಇದನ್ನೂ ಓದಿ:  Mother at Young Age: ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿ, ತಾಯಿಯಾದ ಬಾಲಿವುಡ್​ ನಟಿಯರಿವರು!

2. ಗೂಗ್ಲಿ – 2013
ರೊಮ್ಯಾಂಟಿಕ್ ನಟನಾಗಿ ಒಂದರ ನಂತರ ಮತ್ತೊಂದು ಎಂಬಂತೆ ಚಿತ್ರಗಳನ್ನು ಮಾಡಿದ ನಂತರ, ಯಶ್ ಅವರು ವಿಭಿನ್ನವಾದ ಪಾತ್ರಗಳನ್ನು ಮಾಡಲು ನಿರ್ಧರಿಸಿದರು. ಗೂಗ್ಲಿ ಅವರು ಮಾಡಿದ ಕೊನೆಯ ಕೆಲವು ರೋಮ್-ಕಾಮ್ ಗಳಲ್ಲಿ ಒಂದಾಗಿತ್ತು. ಅವರು ಈ ಚಿತ್ರದಲ್ಲಿ ಕೃತಿ ಖರ್ಬಂದಾ ಅವರೊಂದಿಗೆ ತೆರೆ ಹಂಚಿಕೊಂಡರು. ಗೂಗ್ಲಿ ಝೀ5 ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

3. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ – 2014
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಒಂದು ಆಕ್ಷನ್-ಕಾಮಿಡಿಯಾಗಿದ್ದು, ಇದನ್ನು ಮರಾಠಿ ಮತ್ತು ಒಡಿಯಾದಲ್ಲಿ ರಿಮೇಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಯಶ್ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1972ರಲ್ಲಿ ತೆರೆಕಂಡ 'ನಾಗರಹಾವು' ಚಿತ್ರದಲ್ಲಿ ಖ್ಯಾತ ನಟ ವಿಷ್ಣುವರ್ಧನ್ ಅವರು ಅಭಿನಯಿಸಿದ ಅದೇ ಹೆಸರಿನ ಪಾತ್ರದಿಂದ ಅವರ ಪಾತ್ರವು ಸ್ಫೂರ್ತಿ ಪಡೆದಿದೆ. ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವು ಯೂಟ್ಯೂಬ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

4. ಗಜಕೇಸರಿ – 2014
ನಿರ್ದೇಶಕ ಎಸ್.ಕೃಷ್ಣ ಅವರ ಗಜಕೇಸರಿ ಒಂದು ಐತಿಹಾಸಿಕ ಆಕ್ಷನ್ ಚಿತ್ರವಾಗಿದ್ದು, ಇದು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತು. ಈ ಚಿತ್ರದಲ್ಲಿ ಯಶ್, ಅಮೂಲ್ಯ ಮತ್ತು ಅನಂತ್ ನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಯೂಟ್ಯೂಬ್ ನಲ್ಲಿ ನೀವು ನೋಡಬಹುದು.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಿಗೆ ಶಾಕ್, ನಿಜವಾಗ್ಲೂ ಪಿಗ್ಗಿಗೆ ಆಗಿದ್ದೇನು?

5. ಮಾಸ್ಟರ್ ಪೀಸ್ – 2015
ನಿರ್ದೇಶಕ ಮಂಜು ಮಾಂಡವ್ಯ ಅವರ ಮಾಸ್ಟರ್ ಪೀಸ್ ಚಿತ್ರದಲ್ಲಿ ಹೇಗೆ ಒಬ್ಬ ಯುವಕ ಸ್ಥಳೀಯ ಗೂಂಡಾ ಆಗುತ್ತಾನೆ ಎಂಬ ಕಥೆಯನ್ನು ಹೊಂದಿದೆ. ಈ ಚಿತ್ರವು ಮತ್ತೊಮ್ಮೆ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆಯಿತು. ಇದರಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸಿದ್ದಾರೆ. ಯೂಟ್ಯೂಬ್ ನಲ್ಲಿ ಮಾಸ್ಟರ್ ಪೀಸ್ ಅನ್ನು ವೀಕ್ಷಿಸಬಹುದು.

6. ಸಂತು ಸ್ಟ್ರೈಟ್ ಫಾರ್ವರ್ಡ್ – 2016
ಸಂತು ಸ್ಟ್ರೈಟ್ ಫಾರ್ವರ್ಡ್ ತಮಿಳಿನ 'ವಾಲು' ಚಿತ್ರದ ರಿಮೇಕ್ ಆಗಿದ್ದು, ಇದರಲ್ಲಿ ಭರತ್ ನಟಿಸಿದ್ದಾರೆ. ಈ ಚಿತ್ರವು ಎಲ್ಲಾ ಭಾಷೆಗಳಲ್ಲಿ ದೊಡ್ಡ ಯಶಸ್ಸನ್ನು ಗಳಿಸಿತು. ಯಶ್ ಅವರು ಈ ಚಿತ್ರದಲ್ಲಿ ಸಂತು ಪಾತ್ರವನ್ನು ನಿರ್ವಹಿಸಿದರು. ಮತ್ತೊಮ್ಮೆ ರಾಧಿಕಾ ಪಂಡಿತ್ ಅವರೊಂದಿಗೆ ತೆರೆ ಹಂಚಿಕೊಂಡರು. ಈ ಚಿತ್ರವು ಸೋನಿಲಿವ್ ನಲ್ಲಿ ಸ್ಟ್ರೀಮಿಂಗ್ ಗೆ ಲಭ್ಯವಿದೆ.

ಇದನ್ನೂ ಓದಿ:  Bagheera Film: ನಾಳೆ ಸೆಟ್ಟೇರಲಿದೆ ಶ್ರೀಮುರಳಿ ಅಭಿನಯದ ಹೊಸ ಚಿತ್ರ - ಬಘೀರ ಮೂಲಕ ಮತ್ತೆ ಘರ್ಜಿಸಲು ರೋರಿಂಗ್ ಸ್ಟಾರ್​ ರೆಡಿ

7. ಕೆಜಿಎಫ್: ಚಾಪ್ಟರ್ 1 – 2018
ಯಶ್ ತಮ್ಮ ವೃತ್ತಿಜೀವನದ ಸುಮಾರು ಎಂಟು ವರ್ಷಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಜಿಎಫ್ ಗಾಗಿ ಮುಡಿಪಾಗಿಟ್ಟಿದ್ದಾರೆ. 2018ರಲ್ಲಿ ಬಿಡುಗಡೆಯಾದ ಮೊದಲ ಅಧ್ಯಾಯವು ಯಶ್ ನಿರ್ವಹಿಸಿದ ರಾಕಿಯ ಪಾತ್ರದ ಉದಯವನ್ನು ಕಂಡಿತು. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಮತ್ತು ಮಾಳವಿಕಾ ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
Published by:Ashwini Prabhu
First published: