ಬಾಲಿವುಡ್ (Bollywood) ಸೆಲೆಬ್ರಿಟಿಗಳೆಂದರೆ ರಿಲೇಶನ್ಶಿಪ್ ನಲ್ಲಿರೋದು, ಬೇರೆಯಾಗೋದು ಕಾಮನ್ ಎನ್ನುವ ಹಾಗಾಗಿದೆ. ಅದ್ರಲ್ಲೂ ಬಿಟೌನ್ ನಟ - ನಟಿಯರ ಡೇಟಿಂಗ್ (Dating), ಲವ್ ಹಾಗೂ ಬ್ರೇಕಪ್, ಮದುವೆ, ಡೈವೋರ್ಸ್ ಇವೆಲ್ಲಾ ಸರ್ವೇಸಾಮಾನ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಹೊಸವರ್ಷದ ಆರಂಭದಲ್ಲೇ ಶಾಕಿಂಗ್ ವರದಿ ಏನೆಂದ್ರೆ ಬಾಲಿವುಡ್ನ ನಟಿ ತಾರಾ ಸುತಾರಿಯಾ (Tara Sutaria) ಹಾಗೂ ಆಧಾರ್ ಜೈನ್ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬುದು.
ಹೌದು… ಬಿ ಟೌನ್ ನ ಬೆಸ್ಟ್ ಕಪಲ್ ಗಳಲ್ಲಿ ಒಂದಾಗಿದ್ದ ತಾರಾ ಹಾಗೂ ಆಧಾರ್ ಜೈನ್ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ ಸೌಹಾರ್ದಯುತವಾಗಿ ಬೇರೆಯಾಗಲು ಇವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದ ಈ ಜೋಡಿ ವಿಶೇಷ ಸಂದರ್ಭಗಳಲ್ಲಿ, ಬರ್ತ್ಡೇ ಗಳಲ್ಲಿ ಸ್ಪೆಷಲ್ ಪೋಸ್ಟ್ ಹಾಕಿ ಗಮನ ಸೆಳೆಯುತ್ತಿದ್ದರು.
ಅಲ್ಲದೇ ಈ ಕ್ಯೂಟ್ ಕಪಲ್ ಮದುವೆ ಕೂಡ ಆಗುತ್ತಾರೆಂಬ ಸುದ್ದಿಯ ಮಧ್ಯೆಯೇ ಅವರ ಬ್ರೇಕಪ್ ವಿಷಯ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇನ್ಮುಂದೆ ಬರೀ ಸ್ನೇಹಿತರಾಗಿರ್ತಾರಂತೆ ಕಪಲ್ !
ವರದಿಗಳ ಪ್ರಕಾರ, ಆಧಾರ್ ಜೈನ್ ಮತ್ತು ತಾರಾ ಸುತಾರಿಯಾ ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದು, ಇನ್ನು ಮುಂದೆ ಬರೀ ಸ್ನೇಹಿತರಾಗಿ ಉಳಿಯಲು ನಿರ್ಧಾರಿಸಿದ್ದಾರಂತೆ.
ಅವರಿಬ್ಬರೂ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಇಬ್ಬರೂ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ತಾರಾ ಮತ್ತು ಆಧಾರ್ 2018 ರಲ್ಲಿ ಪಾರ್ಟಿಯಲ್ಲಿ ಭೇಟಿಯಾದ ಬಳಿಕ 2019ರಲ್ಲಿ ಬಿಗ್ಬಿ ಅಮಿತಾಭ್ ಬಚ್ಚನ್ ಅವರು ಆಯೋಜಿಸಿದ್ದ ದೀಪಾವಳಿ ಸೆಲೆಬ್ರೇಷನ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಅವರ ರಿಲೇಶನ್ಶಿಪ್ ಬಗ್ಗೆ ಸಾಕಷ್ಟು ರೂಮರ್ಸ್ಗಳಿದ್ದವು.
ಇದನ್ನೂ ಓದಿ: Top Movie Sequels: ಈ ವರ್ಷ ರಿಲೀಸ್ ಆಗೋ ಟಾಪ್ ಸೀಕ್ವೆಲ್ ಸಿನಿಮಾಗಳಿವು
ಆ ಬಳಿಕ ತಾರಾ ಸುತಾರಿಯಾ ಮತ್ತು ಆಧಾರ್ ಜೈನ್ ತಮ್ಮ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದರು.
ನಂತರ ತಾರಾ ಸುತಾರಿಯಾ ಮತ್ತು ಆಧಾರ್ ಜೈನ್ ಹೆಚ್ಚು ಗಮನ ಸೆಳೆದರು. ತಾರಾ ಅವರ ಜನ್ಮದಿನದಂದು ಆಧಾರ್ ಪ್ರೀತಿ ತುಂಬಿದ ಪೋಸ್ಟ್ ಹಂಚಿಕೊಂಡಿದ್ದರು.
2018ರಲ್ಲಿ ಚಿಗುರೊಡೆದಿತ್ತು ತಾರಾ – ಆಧಾರ್ ಪ್ರೀತಿ!
ಹಳೆಯ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಪ್ರೀತಿ ಬಗ್ಗೆ ಮಾತನಾಡಿದ್ದ ತಾರಾ ಸುತಾರಿಯಾ, ತಾವು ಮೊದಲ ಬಾರಿಗೆ 2018ರಲ್ಲಿ ಕರಣ್ ಜೋಹರ್ ಅವರ ದೀಪಾವಳಿ ಸೆಲೆಬ್ರೇಷನ್ ಪಾರ್ಟಿಯಲ್ಲಿ ಆಧಾರ್ ಜೈನ್ ರನ್ನು ಭೇಟಿಯಾಗಿದ್ದಾಗಿ ಹೇಳಿದ್ದರು.
“ಆಧಾರ್ ನನ್ನ ಬದುಕಲ್ಲಿ ತುಂಬಾ ವಿಶೇಷವಾದವರು. ನಾವು ಹೊರಗೆ ಹೋಗುತ್ತೇವೆ. ನಾವು ಒಟ್ಟಿಗೆ ಆನಂದಿಸುತ್ತೇವೆ. ನಾವು ಸಂಗೀತದಲ್ಲಿ ಒಂದೇ ರೀತಿಯ ಅಭಿರುಚಿಯನ್ನು ಹೊಂದಿದ್ದೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಫೋಟೋ ತೆಗೆದುಕೊಳ್ಳುತ್ತೇವೆ. ನಾವು ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತೇವೆ” ಎಂಬುದಾಗಿ ಹೇಳಿದ್ದರು.
ಅಂದಹಾಗೆ ಆಧಾರ್ ಜೈನ್ ರಣಬೀರ್ ಅವರ ಸೋದರ ಸಂಬಂಧಿ. ಹಾಗಾಗಿ ಬರ್ತ್ಡೇ ಪಾರ್ಟಿಗಳನ್ನು ಒಟ್ಟಿಗೆ ಆಚರಿಸುವುದರಿಂದ ಹಿಡಿದು ಕ್ರಿಸ್ಮಸ್ ಸೆಲೆಬ್ರೇಷನ್ ಭಾಗವಾಗುವುದರ ವರೆಗೆ ಈ ಜೋಡಿ ಕಪೂರ್ ಫ್ಯಾಮಿಲಿಯೊಂದಿಗೆ ಒಡನಾಟದಲ್ಲಿತ್ತು.
ಅಂದಹಾಗೆ ಆಧಾರ್ ಜೈನ್ 2017 ರಲ್ಲಿ ಖೈದಿ ಬ್ಯಾಂಡ್ನೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅವರು ಕೊನೆಯದಾಗಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಹಲೋ ಚಾರ್ಲಿಯಲ್ಲಿ ಜಾಕಿ ಶ್ರಾಫ್, ಶ್ಲೋಕಾ ಪಂಡಿತ್ ಮತ್ತು ಎಲ್ನಾಜ್ ನೊರೌಜಿ ಅವರೊಂದಿಗೆ ಕಾಣಿಸಿಕೊಂಡರು.
ಇನ್ನು ತಾರಾ 2019 ರಲ್ಲಿ, ಸ್ಟೂಡೆಂಟ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ನಟಿ ಅನನ್ಯ ಪಾಂಡೆ ಹಾಗೂ ಟೈಗರ್ ಶ್ರಾಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
ಕೊನೆಯದಾಗಿ ಅವರು ಆಕ್ಷನ್ ಥ್ರಿಲ್ಲರ್ ಚಿತ್ರ ಏಕ್ ವಿಲನ್ ರಿಟರ್ನ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಮ್ಮ ಮುಂಬರುವ ಚಿತ್ರ ಅಪೂರ್ವಕ್ಕಾಗಿ ಸಜ್ಜಾಗುತ್ತಿದ್ದಾರೆ. ಇದರಲ್ಲಿ ಧೈರ್ಯ ಕರ್ವಾ ಕೂಡ ಅಭಿನಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ