• Home
  • »
  • News
  • »
  • entertainment
  • »
  • Ghost Film Update: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಘೋಸ್ಟ್ ಚಿತ್ರಕ್ಕೆ ಮಲೆಯಾಳಂ ನಟ ಜಯರಾಮ್ ಎಂಟ್ರಿ, ಸಿನಿಮಾ ತಂಡ ರಿವೀಲ್ ಮಾಡ್ತು ಎಂಟ್ರಿ ವೀಡಿಯೋ

Ghost Film Update: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಘೋಸ್ಟ್ ಚಿತ್ರಕ್ಕೆ ಮಲೆಯಾಳಂ ನಟ ಜಯರಾಮ್ ಎಂಟ್ರಿ, ಸಿನಿಮಾ ತಂಡ ರಿವೀಲ್ ಮಾಡ್ತು ಎಂಟ್ರಿ ವೀಡಿಯೋ

ಶಿವರಾಜ್ ಕುಮಾರ್-ಜಯರಾಮ್ ಮುಖಾ-ಮುಖಿ

ಶಿವರಾಜ್ ಕುಮಾರ್-ಜಯರಾಮ್ ಮುಖಾ-ಮುಖಿ

ಘೋಸ್ಟ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಜಯರಾಮ್ ಪಾತ್ರಗಳ ಮುಖಾ-ಮುಖಿ ಬಲು ಜೋರಾಗಿಯೇ ಇದೆ. ಇದನ್ನ ಚಿತ್ರೀಕರಿಸೋಕೆ ಪಕ್ಕಾ ಪ್ಲಾನ್ ಕೂಡ ಮಾಡಲಾಗಿದೆ. ಹಾಗಾಗಿಯೇ ಈಗ ಭರ್ಜರಿಯಾಗಿಯೇ ಶೂಟಿಂಗ್ ಕೂಡ ನಡೆಯುತ್ತಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಘೋಸ್ಟ್ (Ghost Film) ಹೆಸರಿನ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ (Shivaraj Kumar) ಕುಮಾರ್ ಹೊಸ ಅವತಾರ್ ನಲ್ಲಿಯೇ ಬರ್ತಿದ್ದಾರೆ. ಕನ್ನಡದ ಮಟ್ಟಿಗೆ ಈ ಚಿತ್ರ ವಿಶೇಷವಾಗಿಯೇ ಇದೆ. ಚಿತ್ರದ ಬಹುತೇಕ ಭಾಗ ಚಿತ್ರೀಕರಣ (Shooting) ಜೈಲ್ (Jail Set) ಸೆಟ್​ನಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಇದಕ್ಕಾಗಿ ಬೆಂಗಳೂರಿನ ಮಿನರ್ವ ಮಿಲ್ಸ್ ನಲ್ಲಿ ಬೃಹತ ಸೆಟ್ ಕೂಡ ಹಾಕಿದ್ದಾರೆ. ಇಲ್ಲಿಯೇ ಸಿನಿಮಾದ ಶೂಟಿಂಗ್​ ಅನ್ನ ಡೈರೆಕ್ಟರ್ ಶ್ರೀನಿ ಈಗಾಗಲೇ ಶುರು ಮಾಡಿದ್ದಾರೆ. ಇಂಗ್ಲೀಷ್ ಟೈಟಲ್ ಇರೋ ಈ ಚಿತ್ರದಲ್ಲಿ ಕನ್ನಡದ ನಟರು ಸೇರಿದಂತೆ, ಮಲೆಯಾಳಂ ನ ಹೆಸರಾಂತ ನಟ ಕೂಡ ಅಭಿನಯಿಸುತ್ತಿದ್ದಾರೆ. ಈ ವಿಷಯನ್ನ ಈಗಾಗಲೇ ಸಿನಿಮಾ ತಂಡ ಹೇಳಿಕೊಂಡಿದೆ. ಈ ಬಗೆಗಿನ ಮಾಹಿತಿ ಇರೋ ವೀಡಿಯೋವೊಂದನ್ನ ಡೈರೆಕ್ಟರ್ ಶ್ರೀನಿ ಅಧಿಕೃತವಾಗಿಯೇ ಈಗ ಶೇರ್ ಮಾಡಿಕೊಂಡಿದ್ದಾರೆ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಸಿನಿಮಾದ ಸೆಟ್​ ನಿಂದಲೇ ಈಗಾಗಲೇ ಇದು ಗಮನ ಸೆಳೆದಿದೆ.
ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಇದೇ ತಿಂಗಳ 12 ರಂದು ಚಿತ್ರಕ್ಕೆ ಮುಹೂರ್ತ ಆಗಿತ್ತು. ಅಲ್ಲಿಂದ ಚಿತ್ರಿಕರಣ ಕೂಡ ಶುರು ಆಗಿದೆ. ಮೊದಲ ಹಂತದಲ್ಲಿಯೇ ಶಿವಣ್ಣನ ಪಾತ್ರದ ಪ್ರಮುಖ ಪಾತ್ರದ ಚಿತ್ರೀಕರಣ ಆಗಿದೆ.


ಘೋಸ್ಟ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಪಾತ್ರವನ್ನೆ ಮಾಡುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳನ್ನ ಲೆಕ್ಕಕ್ಕೆ ತೆಗೆದುಕೊಂಡ್ರೆ, ಇದು ಬೇರೆ ರೀತಿಯ ಚಿತ್ರವೇ ಆಗಿದೆ.


ಹ್ಯಾಟ್ರಿಕ್ ಹೀರೋ ಎದುರು ವೇರಿ ಸ್ಟ್ರಾಂಗ್ ನಟನ ಅಭಿನಯ
ಶಿವರಾಜ್ ಕುಮಾರ್ ನಿರ್ವಹಿಸೋ ಪಾತ್ರದ ಎದುರು ಅಭಿನಯಿಸೋ ನಟ ಕೂಡ ಅಷ್ಟೇ ಸ್ಟ್ರಾಂಗ್ ಆಗಿಯೇ ಇರಬೇಕು. ಈ ಹಿನ್ನೆಲೆಯಲ್ಲಿಯೇ ಮಲೆಯಾಳಂನ ಹೆಸರಾಂತ ನಟ ಜಯರಾಮ್ ಅಭಿನಯಿಸುತ್ತಿದ್ದಾರೆ.


Hattrick Hero Shiva rajkumar Acted Ghost Film Shooting Updates
ಹ್ಯಾಟ್ರಿಕ್ ಹೀರೋ ಎದುರು ವೇರಿ ಸ್ಟ್ರಾಂಗ್ ನಟನ ಅಭಿನಯ


ಕಳೆದ ಮೂರು ದಿನಗಳಿಂದಲೂ ಬೆಂಗಳೂರಿನಲ್ಲಿ ಜಯರಾಮ್ ಶೂಟಿಂಗ್ ನಲ್ಲಿ ಭಾಗಿ ಆಗಿದ್ದಾರೆ. ಡೈರೆಕ್ಟರ್ ಶ್ರೀನಿ ಕೂಡ ಅದ್ಭುತ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ. ಆ ಪ್ರಕಾರ ಪಾತ್ರವನ್ನ ಚಿತ್ರೀಕಣ ಮಾಡುತ್ತಿದ್ದಾರೆ.


ಇದನ್ನೂ ಓದಿ: Puneeth Rajkumar: ಕರ್ನಾಟಕ ರತ್ನ ಪ್ರದಾನ ಮಾಡಲು ಬರ್ತಿದ್ದಾರೆ ರಜನಿಕಾಂತ್! ಕರುನಾಡಿನ ಬಗ್ಗೆ ಸೂಪರ್‌ ಸ್ಟಾರ್ ಹೇಳಿದ್ದೇನು?


ಶಿವರಾಜ್ ಕುಮಾರ್-ಜಯರಾಮ್ ಮುಖಾ-ಮುಖಿ
ಘೋಸ್ಟ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಜಯರಾಮ್ ಪಾತ್ರಗಳ ಮುಖಾ-ಮುಖಿ ಬಲು ಜೋರಾಗಿಯೇ ಇದೆ. ಇದನ್ನ ಚಿತ್ರೀಕರಿಸೋಕೆ ಪಕ್ಕಾ ಪ್ಲಾನ್ ಕೂಡ ಮಾಡಲಾಗಿದೆ. ಹಾಗಾಗಿಯೇ ಈಗ ಭರ್ಜರಿಯಾಗಿಯೇ ಶೂಟಿಂಗ್ ಕೂಡ ನಡೆಯುತ್ತಿದೆ.


ಜಯರಾಮ್ ವೆಲ್​ ಕಮ್ ಮಾಡಿದ ಡೈರೆಕ್ಟರ್ ಶ್ರೀನಿ ಟೀಮ್
ಘೋಸ್ಟ್ ಚಿತ್ರದ ಚಿತ್ರೀಕರಣದ ಸೆಟ್​ ಗೆ ಜಯರಾಮ್ ಬಂದಾಗಿದೆ. ಕೆಲಸವನ್ನೂ ಶುರು ಮಾಡಿದ್ದಾರೆ. ಡೈರೆಕ್ಟರ್ ಶ್ರೀನಿ ಬರೆದಿರೋ ಪಾತ್ರವನ್ನೂ ಅನುಭವಿಸಿಯೇ ಅಭಿನಯಿಸುತ್ತಿದ್ದಾರೆ.ಈ ಒಂದು ವಿಶೇಷ ಘಳಿಗೆಯ ಒಟ್ಟು ಚಿತ್ರಣದ ಒಂದು ವೀಡಿಯೋ ಈಗ ರಿವೀಲ್ ಆಗಿದೆ. ಡೈರೆಕ್ಟರ್ ಶ್ರೀನಿ ಸ್ವತಃ ಇದನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.


ಘೋಸ್ಟ್ ಸೆಟ್​​ಗೆ ಬಂದ ಮಲೆಯಾಳಂ ನಟ ಜಯರಾಮ್ ಅವರಿಗೆ ಇಲ್ಲಿ ವಿಶೇಷವಾಗಿಯೇ ವೆಲ್​ ಕಮ್ ಮಾಡಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಆತ್ಮೀಯವಾಗಿಯೇ ನಟ ಜಯರಾಮ್​ ಅವರನ್ನ ಸ್ವಾಗತಿಸಿದ್ದಾರೆ.


ಈ ಎಲ್ಲ ಚಿತ್ರಣವೂ ಈ ಒಂದು ವೀಡಿಯೋದಲ್ಲಿಯೇ ಇದೆ. ಈ ವೀಡಿಯೋ ಇಷ್ಟೊಂದು ಮಹತ್ವ ಪಡೆಯಲು ಕಾರಣವೂ ಇದೆ. ಯಾಕೆಂದ್ರೆ, ಈ ಮೂಲಕವೇ ನಟ ಜಯರಾಮ್ ಕನ್ನಡಕ್ಕೂ ಬರುತ್ತಿದ್ದಾರೆ. ಕನ್ನಡದ ಮೊದಲ ಸಿನಿಮಾದಲ್ಲಿಯೇ ಜಯರಾಮ್ ಅದ್ಭುತ ಪಾತ್ರವನ್ನೆ ಮಾಡಿದ್ದಾರೆ.


ಇದನ್ನೂ ಓದಿ: Kantara New Record: ಕನ್ನಡದ ಹಿಟ್ ಚಿತ್ರಗಳ ರೆಕಾರ್ಡ್ ಮುರಿದ ಕಾಂತಾರ


ಘೋಸ್ಟ್ ಸಿನಿಮಾ ಒಂದು ದೆವ್ವದ ಸಿನಿಮಾ ಅನ್ನೋ ಅಂದಾಜಿದೆ. ಆದರೆ ಇದು ದೆವ್ವದ ಸಿನಿಮಾ ಅಲ್ವೇ ಅಲ್ಲ ಅಂತಲೇ ಡೈರೆಕ್ಟರ್ ಶ್ರೀನಿ ಈಗಾಗಲೇ ಕ್ಲಿಯರ್ ಮಾಡಿದ್ದಾರೆ. ಉಳಿದಂತೆ ಕನ್ನಡದ ಘೋಸ್ಟ್ ಚಿತ್ರದಲ್ಲಿ ಜಯರಾಮ್ ಇಡೀ ಸಿನಿಮಾ ಇರುತ್ತಾರೆ.

First published: