• Home
  • »
  • News
  • »
  • entertainment
  • »
  • Vedha Film Poster: ಇದು ಶಿವಣ್ಣನ ವೇದರೂಪ! ರಿವೀಲ್ ಆಯಿತು ಅಸಲಿ ಸತ್ಯ

Vedha Film Poster: ಇದು ಶಿವಣ್ಣನ ವೇದರೂಪ! ರಿವೀಲ್ ಆಯಿತು ಅಸಲಿ ಸತ್ಯ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನ ವೇದ ಪೋಸ್ಟರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನ ವೇದ ಪೋಸ್ಟರ್

ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ 1960 ರ ಕಾಲಘಟ್ಟದಲ್ಲಿಯೇ ನಡೆಯೋ ಕಥೆ ಆಗಿದೆ. ಆಗಿನ ಕಾಲಘಟ್ಟಕ್ಕೆ ತಕ್ಕನಾಗಿಯೇ ಪಾತ್ರವೂ ಇಲ್ಲಿ ಇರುತ್ತದೆ. ಈ ಕಾರಣಕ್ಕೇನೆ ಶಿವರಾಜ್ ಕುಮಾರ್ ರೂಪ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತದೆ.

  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva RajKumar) ಅಂದ್ರೆ ಎಲ್ಲರಿಗೂ ಒಂದು ಗೌರವ ಇದೆ. ಯಾರನ್ನೇ ಕೇಳಿದ್ರೂ ಸರಿಯೇ. ಶಿವಣ್ಣ ಅಂದ್ರೆ ಸೂಪರ್ ಅಂತಲೇ ಹೇಳಿ ಬಿಡುತ್ತಾರೆ. ಇಷ್ಟು ವಿಶೇಷ ವ್ಯಕ್ತಿ ತಮ್ಮ ಚಿತ್ರದ ಪಾತ್ರಗಳಲ್ಲಿ ಪ್ರಯೋಗಗಳನ್ನ ಕೂಡ ಮಾಡ್ತಾರೆ. ಭಜರಂಗಿ (Bhajarangi Cinema) ಸಿನಿಮಾ ಅದಕ್ಕೆ ಒಂದು ದಿ ಬೆಸ್ಟ್ ಎಕ್ಸಾಂಪಲ್. ಈ ಚಿತ್ರದಲ್ಲಿ ಲಾಂಗ್ ಹೇರ್ ಬಿಟ್ಟುಕೊಂಡು ಎಲ್ಲರ ಗಮನ ಸೆಳೆದರು ಶಿವರಾಜ್ ಕುಮಾರ್. ಅದಕ್ಕೂ ಮೊದಲು ಬಂದಿದ್ದ ಜೋಗಿ  (Jogi Film) ಸಿನಿಮಾದಲ್ಲೂ ತಮ್ಮ ಪಾತ್ರದ ಲುಕ್ ಮೇಲೆ ಹೊಸ ಪ್ರಯೋಗವನ್ನೇ ಶಿವರಾಜ್ ಕುಮಾರ್ ಮಾಡಿದ್ದರು. ಅದೇ ಶಿವರಾಜ್ ಕುಮಾರ್ ಈಗ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಆ ಪ್ರಯೋಗದ ಹೆಸರು ವೇದ.


ಈ ಸಿನಿಮಾ ವಿಶೇಷವಾಗಿಯೇ ಇದೆ. ಈ ಚಿತ್ರದ ಕಥೆಗೆ ತಕ್ಕನಾಗಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬದಲಾಗಿದ್ದಾರೆ. ಅದರ ಸುತ್ತದ ಒಂದು ಸ್ಟೋರಿ ಇಲ್ಲಿದೆ ಓದಿ.


Hattrick Hero Shivaraj kumar Vedha Film New Poster Now Release
ವೇದ ಸಿನಿಮಾದ ಶಿವರಾಜ್ ಕುಮಾರ್ ಲುಕ್


ಹ್ಯಾಟ್ರಿಕ್ ಹೀರೋನ ಸೂಪರ್ ಲುಕ್-ಹೊಸ ರೂಪಕ್ಕೆ ಎಲ್ಲರೂ ಫಿದಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಪಾತ್ರಗಳ ಜೊತೆಗೆ ಪ್ರಯೋಗ ಮಾಡ್ತಾನೇ ಇರುತ್ತಾರೆ. ಚಿತ್ರದ ಪಾತ್ರಗಳ ನಿರೀಕ್ಷೆಯಂತೆ ಲುಕ್ ಅಲ್ಲೂ ಸಹಜವಾಗಿಯೇ ಹೊಸ ಪ್ರಯೋಗ ಇದ್ದೇ ಇರುತ್ತದೆ. ಅದಕ್ಕೆ ಈಗ ವೇದ ಸಿನಿಮಾದ ಶಿವರಾಜ್ ಕುಮಾರ್ ಹೆಚ್ಚು ಗಮನ ಸೆಳೆಯುತ್ತಿದೆ.


ವೇದ ಚಿತ್ರ ಶಿವರಾಜ್ ಕುಮಾರ್ ಜೀವನದ ವಿಶೇಷ ಸಿನಿಮಾ
ಶಿವರಾಜ್ ಕುಮಾರ್ ಚಿತ್ರ ಜೀವನದಲ್ಲಿ ವೇದ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ. ಈ ಚಿತ್ರದ ವಿಶೇಷತೆಗಳು ಹತ್ತು ಹಲವು ಇವೆ. ಅವುಗಳನ್ನ ಇಲ್ಲಿ ಒಂದೊಂದಾಗಿಯೇ ಹೇಳುವ ಕೆಲಸ ಮಾಡುತ್ತೇವೆ ನೋಡಿ.



ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 125 ನೇ ಸಿನಿಮಾ
ಹೌದು, ವೇದ ಶಿವರಾಜ್ ಕುಮಾರ್ ಅಭಿನಯದ 125 ನೇ ಸಿನಿಮಾ ಆಗಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾ ವಿಶೇಷವಾಗಿಯೇ ನಿಲ್ಲುತ್ತದೆ. ಇದರ ಜೊತೆಗೆ ಈ ಚಿತ್ರಕ್ಕಾಗಿ ಶಿವರಾಜ್ ಕುಮಾರ್, ತಮ್ಮ ಪಾತ್ರ ಪೋಷಣೆಗಾಗಿ ಲುಕ್ ಅನ್ನೇ ಬದಲಿಸಿಕೊಂಡಿದ್ದಾರೆ.


Hattrick Hero Shivaraj kumar Vedha Film New Poster Now Release
ವೇದ ಸಿನಿಮಾ ಪೋಸ್ಟರ್


ವೇದ ಎಂಬ 1960 ಕಾಲಘಟ್ಟದ ಸಿನಿಮಾ
ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ 1960 ರ ಕಾಲಘಟ್ಟದಲ್ಲಿಯೇ ನಡೆಯೋ ಕಥೆ ಆಗಿದೆ. ಆಗಿನ ಕಾಲಘಟ್ಟಕ್ಕೆ ತಕ್ಕನಾಗಿಯೇ ಪಾತ್ರವೂ ಇಲ್ಲಿ ಇರುತ್ತದೆ. ಈ ಕಾರಣಕ್ಕೇನೆ ಶಿವರಾಜ್ ಕುಮಾರ್ ರೂಪ ಇಲ್ಲಿ ವಿಭಿನ್ನವಾಗಿಯೇ ಕಾಣಿಸುತ್ತದೆ.


ವೇದ ಸಿನಿಮಾದ ಹಿಂದೆ ಇದ್ದಾರೆ ಡೈರೆಕ್ಟರ್ ಎ.ಹರ್ಷ
ವೇದ ಸಿನಿಮಾದಲ್ಲಿ ವಿಶೇಷ ಕಥೆಯೊಂದು ಇದೆ. ಇದನ್ನ ಡೈರೆಕ್ಟರ್ ಎ.ಹರ್ಷ ಈಗ ಡೈರೆಕ್ಟ್ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಬೇಕಾದ ಎಲ್ಲ ತಯಾರಿನೂ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಎಂದಿನಂತೆ ಶಿವರಾಜ್ ಕುಮಾರ್ ಲುಕ್ ಮೇಲೆ ಪ್ರಯೋಗ ಮಾಡಿದ್ದಾರೆ.


ಇದನ್ನೂ ಓದಿ:Kantara: ಕಾಂತಾರ ಕ್ಲೈಮ್ಯಾಕ್ಸ್​​ ನೋಡ ನೋಡುತ್ತಲೇ ದೈವ ಆವಾಹನೆ, ಥಿಯೇಟರ್‌ನಲ್ಲೇ ಓ ಎಂದು ಆರ್ಭಟಿಸಿದ ಮಹಿಳೆ!


ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಲುಕ್ ಕಂಪ್ಲೀಟ್ ಬದಲಾಗಿದೆ. ಇದನ್ನ ಗಮನಸಿದ್ರೆ, ಎಲ್ಲರೂ ವ್ಹಾವ್ ಅಂತಲೇ ಹೇಳಬಹುದು. ಅಷ್ಟು ವಿಶೇಷ ಅನಿಸುತ್ತದೆ. ಅಂತಹ ಈ ಲುಕ್ ನ ಮೊದಲ ಫೋಸ್ಟರ್ ಭಾರೀ ಗಮನ ಸೆಳೆದಿತ್ತು.


ವೇದ ಚಿತ್ರದ ರಕ್ತಸಿಕ್ತ ಆಕ್ರೋಶ ಭರಿತ ಫೋಸ್ಟರ್
ವೇದ ಸಿನಿಮಾದ ಒಂದೊಂದೇ ವಿಷಯವನ್ನ ಡೈರೆಕ್ಟರ್ ಎ.ಹರ್ಷ ಈಗ ಬಿಟ್ಟುಕೊಡುತ್ತಿದ್ದಾರೆ. ಈ ಹಿಂದೆ ಚಿತ್ರದ ಒಂದು ಪೋಸ್ಟರ್ ರಿಲೀಸ್ ಮಾಡಿದ್ದರು.


Hattrick Hero Shivaraj kumar Vedha Film New Poster Now Release
ವೇದ ಸಿನಿಮಾ ಡೈರೆಕ್ಟರ್ ಎ. ಹರ್ಷ


ಈಗ ಮತ್ತೊಂದು ಪೋಸ್ಟರ್ ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್​ ನಲ್ಲಿ ಶಿವರಾಜ್ ಕುಮಾರ್ ರೂಪ ಆಕ್ರೋಶಭರಿತವಾಗಿಯೇ ಇದೆ. ರಕ್ತಸಿಕ್ತ ಮುಖ ಚಹರೆಯೊಂದಿಗೆ ಶಿವರಾಜ್ ಕುಮಾರ್, ಇಲ್ಲಿ ತಮ್ಮ ಪಾತ್ರದ ಒಂದು ಮುಖವನ್ನ ತೋರುತ್ತಿದ್ದಾರೆ.


ಶಿವರಾಜ್ ಕುಮಾರ್ 125 ನೇ ಚಿತ್ರದ ನಿರ್ಮಾಪಕರು ಯಾರು?
ಶಿವರಾಜ್ ಕುಮಾರ್ ಅಭಿನಯದ ಈ 125 ಚಿತ್ರವನ್ನ ಸ್ವತಃ ಶಿವರಾಜ್ ಕುಮಾರ್ ಬ್ಯಾನರ್​ನಲ್ಲಿಯೇ ತೆಗೆಯಲಾಗುತ್ತಿದೆ. ಇದನ್ನ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಈ ಒಂದು ಚಿತ್ರಕ್ಕೆ ಇನ್ನೂ ಒಂದು ಸಂಸ್ಥೆ ಕೂಡ ಸಾಥ್ ಕೊಟ್ಟಿದೆ.


ವೇದ ಸಿನಿಮಾದಲ್ಲಿ 1960 ರ ಕಾಲಘಟ್ಟದ ಕಥೆನೇ ಇದೆ. ಈ ಸಮಯದಲ್ಲಿ ಬದುಕು ಹೇಗಿತ್ತು. ಸ್ವತಂತ್ರ ನಂತರದ ಜೀವನ ಆಗ ಹೇಗಿತ್ತು? ಈ ಎಲ್ಲ ಸತ್ಯಗಳು ಸಿನಿಮಾದಲ್ಲಿ ಬರೋ ಹಾಗೇನೆ ಕಾಣುತ್ತಿವೆ.


ಇದನ್ನೂ ಓದಿ: Abhishek Birthday: ಅಭಿಷೇಕ್ ಅಂಬರೀಶ್​ಗೆ ಹುಟ್ಟುಹಬ್ಬದ ಸಂಭ್ರಮ, ಜೂನಿಯರ್ ಅಂಬಿ ಸ್ಟೈಲಿಶ್ ಲುಕ್ ನೋಡಿ


ಈಗಾಗಲೇ ಈ ಸಿನಿಮಾದ ಕಥೆ ನಡೆಯುತ್ತಿದೆ. ಸದ್ಯಕ್ಕೆ ಸಿನಿಮಾದ ಒಂದೊಂದೇ ವಿಷಯವನ್ನ ಡೈರೆಕ್ಟರ್ ಹರ್ಷ ಬಿಟ್ಟುಕೊಡ್ತಿದ್ದಾರೆ. ಉಳಿದಂತೆ ಇತರ ಮಾಹಿತಿ ಕೊಡ್ತಾ ಇರುತ್ತೇವೆ ಕಾಯ್ತಾಯಿರಿ.

First published: