Yash: ಯಶ್​ ವಿರುದ್ಧ ಹಾಸನದ ತಿಮ್ಲಾಪುರ ಗ್ರಾಮಸ್ಥರ ಆಕ್ರೋಶ; ಏನಿದು ಗಲಾಟೆ?

ಪೊಲೀಸ್​ ಠಾಣೆಯಿಂದ ಹೊರಟ ಯಶ್​ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಯಶ್​ ಕಾರ್​ಗೆ ಅಡ್ಡಗಟ್ಟಿದ್ದಾರೆ.

ಯಶ್

ಯಶ್

 • Share this:
  ರಾಕಿಂಗ್​ ಸ್ಟಾರ್​ ಯಶ್​ ವಿರುದ್ಧ ಹಾಸನದ ತಿಮ್ಲಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ವಿರುದ್ಧ ಧಿಕ್ಕಾರ ಕೂಗಿರುವ ಘಟನೆ ನಡೆದಿದೆ. ಇಲ್ಲಿನ ಅವರ ಜಮೀನಿನ ಪಕ್ಕದಲ್ಲಿ ರಸ್ತೆ ನಿರ್ಮಾಣ ವಿಚಾರ ಕುರಿತಂತೆ ಇಂದು ಯಶ್​ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಜಗಳವಾಗಿತ್ತು. ಈ ಪ್ರಕರಣ ನಡೆಯುತ್ತಿದ್ದಂತೆ ನಟ ಯಶ್​ ಖುದ್ದು ಇಲ್ಲಿನ ದುದ್ದ ಪೊಲೀಸ್​ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಸ್ಟೇಷನ್​ನಿಂದ ಹೊರಟ ಯಶ್​ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ಯಶ್​ ಕಾರ್​ಗೆ ಅಡ್ಡಗಟ್ಟಿ, ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದರು.

  ಏನಿದು ಗಲಾಟೆ?

  ರಾಕಿಂಗ್​ ಸ್ಟಾರ್​ ಯಶ್​ ಫಾರ್ಮ್​ಹೌಸ್​ ನಿರ್ಮಾಣಕ್ಕಾಗಿ ಜಿಲ್ಲೆಯ​ ತಿಮ್ಲಾಪುರದಲ್ಲಿ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕ ರಸ್ತೆ ನಿರ್ಮಾಣ ವಿಚಾರ ಕುರಿತಂತೆ ಇಲ್ಲಿನ ಸ್ಥಳೀಯರು ಹಾಗೂ ಯಶ್​ ಪೋಷಕರ ಮಧ್ಯೆ ಇಂದು ಬೆಳಗ್ಗೆ ವಾಗ್ವಾದ ನಡೆದಿದೆ. ಈ ವೇಳೆ ಮಾತು ವಿಕೋಪಕ್ಕೆ ತೆರಳಿದ್ದು, ಕೈ ಕೈ ಮೀಲಾಯಿಸುವ ಹಂತ ಮುಟ್ಟಿದೆ. ಈ  ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಟ ಯಶ್ ಖುದ್ದು​ ಹಾಸನಕ್ಕೆ ಭೇಟಿ ನೀಡಿ, ಪೋಷಕರೊಂದಿಗೆ ದುದ್ದ ಪೊಲೀಸ್​ ಠಾಣೆಗೆ ಭೇಟಿ ನೀಡಿದರು.

  ಯಶ್​ ಹೇಳಿದ್ದೇನು?

  ಪೊಲೀಸ್​ ಸ್ಟೇಷನ್​ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ನಟ ಯಶ್​, ನಾವು ಕಷ್ಟಪಟ್ಟು ದುಡಿದು ಜಮೀನು ಕೊಂಡಿದ್ದೇವೆ. ಅದಕ್ಕೆ ಕಾಂಪೌಂಡ್​ ಹಾಕಿಸುತ್ತಿದ್ದೇವೆ. ಜಮೀನಿನ ಒಳಗೆ ಬಂದು ಕೆಲವರು ಏನೆನೋ ಮಾಡುತ್ತಾರೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತನಾಡುತ್ತಾರೆ. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ದಾರೆ. ನಮ್ಮ ಜೊತೆ ಕೆಲಸ ಮಾಡುವವರು ನಮ್ಮ ಮನೆಯವರಂತೆ. ನಮ್ಮ ತಂದೆ-ತಾಯಿಯ ಬಗ್ಗೆಯೂ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಅದಕ್ಕಾಗಿ ಇಲ್ಲಿಗೆ ಬರಬೇಕು ಆಯಿತು ಎಂದು ಅವರು ತಿಳಿಸಿದರು.

  ಅಷ್ಟೇ ಅಲ್ಲದೇ, ನಾನು ಹುಟ್ಟಿದ್ದು ಇದೇ ಹಾಸನದಲ್ಲಿ. ಅದಕ್ಕೆ ಇಲ್ಲಿ ಜಮೀನು ಕೊಂಡು ಏನಾದರೂ ಮಾಡಬೇಕು ಎಂಬ ಬಯಕೆ ಇದೆ. ಆಸ್ತಿ ಮಾಡಬೇಕು ಎಂದಿದ್ದರೆ ಬೆಂಗಳೂರಿನಲ್ಲಿ ಮಾಡುತ್ತಿದ್ದೇವು. ನಮ್ಮ ತಂದೆ ತಾಯಿಯೂ ಹಳ್ಳಿ ಜನ ಗ್ರಾಮಸ್ಥರ ಜೊತೆ  ಮಾತಿನ ಚಕಮಕಿ ವೇಳೆ ಕೆಲ ಮಾತನಾಡಿದ್ದಾರೆ. ಸೆಲೆಬ್ರಿಟಿಯಾದ ಹಿನ್ನಲೆ ವಿವಾದ ಸುತ್ತಿಕೊಳ್ಳುತ್ತದೆ ಎಂದರು.
  Published by:Seema R
  First published: