Dhanush costume: ಧನುಷ್ ಅವರ ಉಡುಪುಗಳ ವೆಚ್ಚ ನೋಡಿ, ತೆಲುಗು ನಿರ್ಮಾಪಕರಿಗೆ ಅಚ್ಚರಿಯೋ ಅಚ್ಚರಿ!

ಟಾಲಿವುಡ್ ಮೂಲಗಳ ಪ್ರಕಾರ ಧನುಷ್ ಅವರು ಇಡೀ ಚಿತ್ರದ ಅವರ ಕಾಸ್ಟ್ಯೂಮ್‌ಗೆ 7-8 ಲಕ್ಷಗಳ ಆಘಾತಕಾರಿ ಮೊತ್ತವನ್ನು ಚಾರ್ಜ್ ಮಾಡಿದರು.

ನಟ ಧನುಶ್

ನಟ ಧನುಶ್

  • Share this:
ಸಾರ್ವಜನಿಕವಾಗಿ ಬೌನ್ಸರ್‌ಗಳಿಲ್ಲದೆ (Bouncers) ಓಡಾಡುವ ವಿಶಿಷ್ಟ ವ್ಯಕ್ತಿತ್ವ ಉಳ್ಳ ಖ್ಯಾತ ತಮಿಳು ನಟ ಧನುಷ್ (Dhanush) ತಮ್ಮ ಚಿತ್ರಗಳಲ್ಲಿ ಸಾಮಾನ್ಯವಾಗಿ ಅತ್ಯಂತ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಸಾರ್ವಜನಿಕವಾಗಿ ಎಲ್ಲಿಯೂ , ಸ್ಟಾರ್ ನಟ ಎಂದಿಗೂ ಚಿತ್ರ , ವಿಚಿತ್ರ ಬಟ್ಟೆಗಳನ್ನು ಫ್ಯಾಷನ್ ಹೆಸರಲ್ಲಿ ಧರಿಸಿದ್ದು ಕಂಡುಬಂದಿಲ್ಲ. ಅವರು ಪ್ರಸ್ತುತ ಹಿಂದಿ, ತಮಿಳು ಹಾಗೂ ಒಂದರ ಹಿಂದೆ ಒಂದರಂತೆ ತೆಲುಗು ಚಲನಚಿತ್ರಗಳು ಸೇರಿದಂತೆ ಭಾರತದ ಎಲ್ಲಾ ಪ್ರಮುಖ ಭಾಷೆಯ (Major Language) ಚಲನ ಚಿತ್ರ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು 'ದಿ ಗ್ರೇ ಮ್ಯಾನ್' (The Gray Man) ಎಂಬ ಅಂತರಾಷ್ಟ್ರೀಯ (International project) ಯೋಜನೆಯೊಂದನ್ನು ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಿ, ಈ ವರ್ಷದ ಬಿಡುಗಡೆಯ ನಿರೀಕ್ಷೆಯಲ್ಲಿ ಚಿತ್ರವು ಸಿದ್ಧವಾಗಿ ನಿಂತಿದೆ.

ಪೊಲ್ಲಾಧವನ್' ನಟನ ಚಾರ್ಜ್ ಏನೂ ಅಲ್ಲ

ಟಾಲಿವುಡ್ ಮೂಲಗಳ ಪ್ರಕಾರ ಧನುಷ್ ಅವರು ಇಡೀ ಚಿತ್ರದ ಅವರ ಕಾಸ್ಟ್ಯೂಮ್‌ಗೆ 7-8 ಲಕ್ಷಗಳ ಆಘಾತಕಾರಿ ಮೊತ್ತವನ್ನು ಚಾರ್ಜ್ ಮಾಡಿದರು. ಇದು ಇತರ ಟಾಲಿವುಡ್ ಸ್ಟಾರ್ ನಟರು ಕಾಸ್ಟ್ಯೂಮ್‌ಗೆ ವಿಧಿಸುವ ಶುಲ್ಕದ 10% ಸಹ ಅಲ್ಲ! ತೆಲುಗಿನ ಸ್ಟಾರ್ ನಟನೊಬ್ಬನ ಕಾಸ್ಟ್ಯೂಮ್ ಗೆ ಕೋಟ್ಯಾಂತರ ರೂಪಾಯಿಯನ್ನು ವ್ಯಯಿಸುತ್ತಾರೆ ಅದಷ್ಟೇ ಅಲ್ಲದೆ ಮೇಕಪ್ ಮತ್ತು ಇತರ ಪರಿಕರಗಳಿಗೆ 1 ಕೋಟಿಯಷ್ಟು ಹೆಚ್ಚುವರಿ ಖರ್ಚು , ಇದಕ್ಕೆ ಹೋಲಿಸಿದರೆ 'ಪೊಲ್ಲಾಧವನ್' ನಟನ ಚಾರ್ಜ್ ಏನೂ ಅಲ್ಲ . ಈ ನಟನ ಜೊತೆಗೆ ಕೆಲಸ ಮಾಡುತ್ತಿರುವ ತೆಲುಗು ನಿರ್ಮಾಪಕರು ಅವರ ಸರಳತೆಯನ್ನು ಹಾಗೂ ಅವರ ವ್ಯವಹಾರಿಕತೆಯನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ವರ್ಷ, 'ದಿ ಗ್ರೇ ಮ್ಯಾನ್' ನಿಂದ ಮೊದಲುಗೊಂಡು ಇವರ ಒಟ್ಟು ನಾಲ್ಕು ಚಿತ್ರಗಳು ತೆರೆ ಕಾಣಲು ಸಿದ್ಧವಾಗಿ ನಿಂತಿವೆ.

ಇದನ್ನೂ ಓದಿ: Atrangi re Review: ಅಕ್ಷಯ್​ ಎದುರು ನಟಿಸಿ ಫುರ್ಲ್ ಮಾರ್ಕ್ಸ್​ ಪಡೆದ ಧನುಷ್: ಅಬ್ಬಬ್ಬಾ.. ಅತರಂಗಿ ರೇ ಸೂಪರ್​!

ಮೆಘಾ ಪ್ರಾಜೆಕ್ಟ್.

ತಮಿಳಿನಲ್ಲಿ 'ಮಾರನ್,' 'ತಿರುಚಿತ್ರಂಬಲಂ,' ಮತ್ತು 'ನಾನೇ ವರುವೆನ್' ಎಂಬ ಚಿತ್ರಗಳೂ ಈ ಪಟ್ಟಿಯಲ್ಲಿವೆ . ಸಧ್ಯಕ್ಕೆ ಇವರು ವಾತಿ (ತೆಲುಗಿನಲ್ಲಿ ಎಸ್‌ಐಆರ್) ಎಂಬ ತೆಲುಗು-ತಮಿಳು ದ್ವಿಭಾಷಾ ಚಿತ್ರಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಪೂಜಾ ಸಮಾರಂಭದೊಂದಿಗೆ ಯೋಜನೆಗೆ ಅಧಿಕೃತವಾಗಿ ಜನವರಿ 3 ರಂದು ಚಾಲನೆ ನೀಡಲಾಯಿತು. ವೆಂಕಿ ಅಟ್ಲೂರಿ ಅವರು ಬರೆದು ನಿರ್ದೇಶಿಸಿರುವ ವಾತಿ, ಧನುಷ್ ಅವರ ಮೆಘಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಸಂಯುಕ್ತಾ ಮೆನನ್ ಅವರು ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ . ನಿರ್ದೇಶಕ ತ್ರಿವಿಕ್ರಮ್, ನಿರ್ಮಾಪಕ ಎಸ್.ರಾಧಾಕೃಷ್ಣ (ಚೀನಬಾಬು), ಕೆಎಲ್ ನಾರಾಯಣ, ಎಂಎಲ್ ಕುಮಾರ್ ಚೌಧರಿ, ಎಸ್.ರಾಧಾಕೃಷ್ಣ (ಚೀನಬಾಬು), ಸುರೇಶ್ ಚುಕ್ಕಪಲ್ಲಿ, ನರ್ರಾ ಶ್ರೀನಿವಾಸ್, ಮತ್ತು ಮಹೇಂದ್ರ (ಎಂಡಿ, ಪ್ರಗತಿ ಪ್ರಿಂಟರ್ಸ್) ಸೇರಿದಂತೆ ಸಿನಿಮಾರಂಗದ ಗಣ್ಯಾತಿ ಗಣ್ಯರು ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಟಾಕ್ ಶೋನಲ್ಲಿ ಬಹಿರಂಗ

ಇತ್ತೀಚೆಗಷ್ಟೇ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಅವರೊಂದಿಗೆ 'ಅತ್ರಂಗಿ ರೇ' ಚಿತ್ರದಲ್ಲಿ ನಟಿಸಿರುವ ಧನುಷ್ ಅವರು ನಂತರ ಚಿತ್ರದ ಪ್ರಚಾರದ ಅಂಗವಾಗಿ ಇವರು ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಬೇಕಾಯಿತು .

ಇದನ್ನೂ ಓದಿ: ಈ 6 ಟಾಪ್​ ತಮಿಳು ನಟರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್​ ಆಗ್ತೀರಾ..!

ಬಾಲಿವುಡ್ ನ ನಟ ಮತ್ತು ನಿರ್ಮಾಪಕ ಕರಣ್ ಜೋಹರ್ ಆಯೋಜಿಸಿದ್ದ ಜನಪ್ರಿಯ ಹಿಂದಿ ಟಾಕ್ ಶೋ ಒಂದರಲ್ಲಿ ಭಾಗವಹಿಸಿ ಮಾತನಾಡಿದ ಧನುಷ್ ಅವರು , ಟಾಕ್ ಶೋನಲ್ಲಿ ಕರಣ್ ಅವರು ಬಯೋಪಿಕ್‌ಗಳಲ್ಲಿನ ಅವರ ಆಸಕ್ತಿಯ ಬಗ್ಗೆ ಕೇಳಿದಾಗ ತಕ್ಷಣವೇ, ರಜನಿಕಾಂತ್ ಮತ್ತು ಇಳಯರಾಜರ ಜೀವನಾಧಾರಿತ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ ಎಂದು ಉತ್ಸಾಹದಿಂದ ಹೇಳಿದರು. ಧನುಷ್ ಅವರು ಈ ಕಾರ್ಯಕ್ರಮದಲ್ಲಿ ಮಾತ್ರವಲ್ಲದೆ ಇನ್ನೂ ಹಲವಾರು ಸಂದರ್ಭಗಳಲ್ಲಿ ರಜನಿಕಾಂತ್ ಮತ್ತು ಇಳಯರಾಜರ ಬಗ್ಗೆ ತಮಗಿರುವ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Published by:vanithasanjevani vanithasanjevani
First published: