Me Too Movement: ಹಾಲಿವುಡ್​ ಸಿನಿಮಾ ನಿರ್ಮಾಪಕನಿಗೆ 23 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​

ಹಾರ್ವಿ ವೇನ್‌ಸ್ಟೇನ್​ಗೆ 67 ವರ್ಷ ವಯಸ್ಸು. ಹೀಗಾಗಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಹಾರ್ವಿ ಪರ ವಕೀಲರು ಕೋರಿದ್ದರು.

ಹಾರ್ವಿ ವೇನ್‌ಸ್ಟೇನ್​

ಹಾರ್ವಿ ವೇನ್‌ಸ್ಟೇನ್​

 • Share this:
  #MeToo ಅಭಿಯಾನ ಹಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ಸದ್ದು ಮಾಡಿದ ಅಭಿಯಾನ. ಕನ್ನಡದ ಶ್ರುತಿ ಹರಿರರನ್​, ಸಂಗೀತಾ ಭಟ್​ , ಟಾಲಿವುಡ್​ನ ಶ್ರೀ ರೆಡ್ಡಿ ಸೇರಿ ಅನೇಕ ಸ್ಯಾಂಡಲ್​ವುಡ್​ ನಟಿಯರು ಮೀ ಟೂ ಆರೋಪ ಮಾಡಿದ್ದರು. ಆದರೆ, ಭಾರತದಲ್ಲಿ ಮೀಟೂ ಆರೋಪ ಮಾಡಿದ ಬಹುತೇಕರಿಗೆ ನ್ಯಾಯ ಸಿಕ್ಕಿಲ್ಲ. ಆದರೆ, ಹಾಲಿವುಡ್​ ನಿರ್ಮಾಪಕನಿಗೆ ಕೋರ್ಟ್​ ಬರೋಬ್ಬರಿ 23 ವರ್ಷ ಜೈಲು ಶಿಕ್ಷೆ ವಿಧಿಸಿದೆ.

  ಹಾರ್ವಿ ವೇನ್‌ಸ್ಟೇನ್​ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿದ್ದವು. ನ್ಯೂಯಾರ್ಕ್​ ಕೋರ್ಟ್​ ಈ ಪ್ರಕರಣದ ವಿಚಾರಣೆ ನಡೆಸಿ, ಫೆಬ್ರವರಿ ತಿಂಗಳಲ್ಲಿ ಹಾರ್ವಿ ಅಪರಾಧಿ ಎಂದು ಘೋಷಿಸಿತ್ತು. ಈಗ ಕೋರ್ಟ್​ ಇವರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಿದ್ದು, 23 ವರ್ಷ ಸೆರೆವಾಸ ವಿಧಿಸಿದೆ.

  ಹಾರ್ವಿ ವೇನ್‌ಸ್ಟೇನ್​ಗೆ 67 ವರ್ಷ ವಯಸ್ಸು. ಹೀಗಾಗಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಹಾರ್ವಿ ಪರ ವಕೀಲರು ಕೋರಿದ್ದರು. ಆದರೆ, ಅಪರಾಧಿಗೆ ಶಿಕ್ಷೆಯನ್ನು ಕಡಿಮೆ ಮಾಡುವ ಮಾತೇ ​ಇಲ್ಲ ಎಂದಿರುವ ಕೋರ್ಟ್​ ಈ ಆದೇಶ ಹೊರಡಿಸಿದೆ.

  ಇದನ್ನೂ ಓದಿ: ವಿಷ್ಣುವರ್ಧನ್​, ರವಿಚಂದ್ರನ್ ನಾಯಕಿಯನ್ನು ಮಂಚಕ್ಕೆ ಕರೆದಿದ್ದ ಸ್ಟಾರ್ ನಟ!

  12ಕ್ಕೂ ಹೆಚ್ಚು ಮಹಿಳೆಯರು ಹಾರ್ವಿ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. 2006ರಲ್ಲಿ ಸಹ ನಿರ್ಮಾಪಕಿ ಮಿರಿಯಮ್​ ಹಾಲೆ ಅತ್ಯಾಚಾರ ನಡೆಸಿದ್ದರು. ನವ ನಾಯಕಿ ಜೆಸಿಕಾ ಮನ್​ ಕೂಡ ಇವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು. ಇದಲ್ಲದೆ ಸಾಕಷ್ಟು ಮಹಿಳೆಯರು ಇದೇ ರೀತಿಯ ಆರೋಪ ಮಾಡಿದ್ದರು.
  First published: