'ಭಾವೇಶ್ ಜೋಶಿ' ಚಿತ್ರದಲ್ಲಿ ಒಂದಾದ ಕಪೂರ್ ಸಹೋದರರು

news18
Updated:May 16, 2018, 7:28 PM IST
'ಭಾವೇಶ್ ಜೋಶಿ' ಚಿತ್ರದಲ್ಲಿ ಒಂದಾದ ಕಪೂರ್ ಸಹೋದರರು
news18
Updated: May 16, 2018, 7:28 PM IST
ನ್ಯೂಸ್ 18 ಕನ್ನಡ

ಶೀಘ್ರದಲ್ಲೇ ಬಾಲಿವುಡ್​ನಲ್ಲಿ ಹೊಸ ಸೂಪರ್ ಹೀರೊ ಎಂಟ್ರಿ ಕೊಡಲಿದ್ದಾರೆ. 'ಭಾವೇಶ್ ಜೋಶಿ' ಸಿನಿಮಾದಲ್ಲಿ ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್ ಬಿ-ಟೌನ್​ನ ಹೊಸ ಸೂಪರ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಟೀಸರ್​ನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಈ ಚಿತ್ರದ ಮೂಲಕ ಇದೇ ಮೊದಲ ಬಾರಿ ಕಪೂರ್ ಸಹೋದರರಾದ ಅರ್ಜುನ್ ಮತ್ತು ಹರ್ಷವರ್ಧನ್ ತೆರೆಮೇಲೆ ಜೊತೆಯಾಗಲಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ 'ಚವನ್ ಪ್ರಾಶ್ ...'ಗೀತೆಯಲ್ಲಿ ಅರ್ಜುನ್ ಕಪೂರ್ ಹೆಜ್ಜೆ ಹಾಕಿದ್ದು, ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರಾ ಎಂಬುದು ಮಾತ್ರ ತಿಳಿಸಿಲ್ಲ.

'ಭಾವೇಶ್ ಜೋಶಿ' ಹರ್ಷವರ್ಧನ್ ಕಪೂರ್ ಅಭಿನಯಿಸುತ್ತಿರುವ ಎರಡನೇ ಚಿತ್ರವಾಗಿದೆ. ನಿರ್ದೇಶಕ ವಿಕ್ರಮಾದಿತ್ಯ ಮೊಟ್ವಾನಿ ಈ ಕಥೆಯನ್ನು ನಟರಾದ ಶಾಹಿದ್ ಕಪೂರ್, ಇಮ್ರಾನ್ ಖಾನ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ಹೇಳಿದ್ದರು. ಮೂರು ಹೀರೊಗಳು ತಿರಸ್ಕರಿಸಿದ ಸಿನಿಮಾವನ್ನು ಹರ್ಷವರ್ಧನ್ ಒಪ್ಪಿಕೊಂಡು ಮೋಡಿ ಮಾಡಲಿದ್ದಾರೆ ಎಂಬುದು ನಿರ್ದೇಶಕರ ನಂಬಿಕೆ.


First published:May 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ