ಮನೆಯಲ್ಲಿ ಅಕ್ಕ ತಮ್ಮ-ಬಾಕ್ಸಾಫಿಸ್​ನಲ್ಲಿ ಸ್ಪರ್ಧಿಗಳಾ ಕಪೂರ್​ ಕುಡಿಗಳು

Anitha E | news18
Updated:May 16, 2018, 7:37 PM IST
ಮನೆಯಲ್ಲಿ  ಅಕ್ಕ ತಮ್ಮ-ಬಾಕ್ಸಾಫಿಸ್​ನಲ್ಲಿ ಸ್ಪರ್ಧಿಗಳಾ ಕಪೂರ್​ ಕುಡಿಗಳು
Anitha E | news18
Updated: May 16, 2018, 7:37 PM IST
ನ್ಯೂಸ್​ 18 ಕನ್ನಡ 

ಹರ್ಷವರ್ಧನ್​ ಕಪೂರ್​ ಅಭಿನಯದ ಸಿನಿಮಾ 'ಭಾವೇಶ್ ಜೋಶಿ' ರಿಲೀಸ್​ ದಿನಾಂಕ ಮುಂದೂಡಲಾಗಿದೆ. ಮೊದಲು ಈ ಸಿನಿಮಾ ಮೇ 25ಕ್ಕೆ ತೆರೆ ಕಾಣಬೇಕಿತ್ತು. ಆದರೆ ಈಗ ದಿನಾಂಕ ಮುಂದಕ್ಕೆ ಹಾಕಿದ ನಂತರ ಜೂನ್​ 1ಕ್ಕೆ ತೆರೆ ರಿಲೀಸ್​ ಆಗಲಿದೆ. ಇದರಿಂದಾಗಿ ಬಾಕ್ಸಾಫಿಸ್​ನಲ್ಲಿ ಅಕ್ಕ ಸೋನಮ್​ ಸಿನಿಮಾದೊಂದಿಗೆ ಸ್ಪರ್ಧಿಸಲಿದೆ.

ಜೂನ್​ 1ಕ್ಕೆ ಸೋನಮ್​ ಅಭಿನಯದ 'ವೀರೇ ದಿ ವೆಡ್ಡಿಂಗ್​' ಸಿನಿಮಾ ಸಹ ತೆರೆ ಕಾಣಲಿದ್ದು, ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡಬೇಕಿದೆ. ಈ ಸಿನಿಮಾ ನಿಜಕ್ಕೂ ಹರ್ಷವರ್ಧನ್​ಗೆ ಸಾಕಷ್ಟು ಕಠಿಣವಾಗಲಿದೆ. ಕಾರಣ ಮಗುವಾದ ನಂತರ 'ವೀರೇ ದಿ ವೆಡ್ಡಿಂಗ್​' ಸಿನಿಮಾದ ಮೂಲಕ ಹಿಂತಿರುಗಿದ್ದಾರೆ. ಸೋನಮ್​ಗೂ ಈ ಸಿನಿಮಾ ವಿಶೇಷವಾಗಿದೆ. ಕಾರಣ ಅವರ ವಿವಾಹದ ನಂತರ ತೆರೆ ಕಾಣುತ್ತಿರುವ ಮೊದಲ ಚಿತ್ರ ಇದು.

ರಾಕೇಶ್​ ಓಂಪ್ರಕಾಶ್​ ಮೆಹ್ರಾ ಅವರ 'ಮಿರ್ಜಿಯಾ' ಸಿನಿಮಾದ ಮೂಲಕ ಬಿ-ಟೌನ್​ಗೆ ಎಂಟ್ರಿಕೊಟ್ಟಿದ್ದರು. 'ಭಾವೇಶ್​ ಜೋಶಿ' ಅವರ ಎರಡನೇ ಸಿನಿಮಾ.

 
 

 Wish I was here... #TravelDiaries #TravelPhotography #Photoshoot shot by @shotbynuno


A post shared by Harshvardhan Kapoor (@harshvardhankapoor) on


 


First published:May 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ