Hijab Controversy: "ನೀವೇಕೆ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತೀರಿ?" ಹಿಜಾಬ್ ವಿವಾದದ ಬಗ್ಗೆ ಭುವನ ಸುಂದರಿ ಗರಂ

ಹಿಜಾಬ್ ಸೇರಿದಂತೆ ಇನ್ನಿತರ ವಿಚಾರಗಳ ಮೂಲಕ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವುದನ್ನು ಸಮಾಜ ನಿಲ್ಲಿಸಬೇಕಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಸಂಧು ಹೇಳಿದ್ದಾರೆ. ಅಲ್ಲದೇ, ಅವರ ಆಯ್ಕೆಯ ರೀತಿಯಲ್ಲಿ ಬದುಕಲು ಬಿಡಿ ಎಂದಿದ್ದಾರೆ.

ಭುವನ ಸುಂದರಿ ಹರ್ನಾಜ್ ಸಂಧು

ಭುವನ ಸುಂದರಿ ಹರ್ನಾಜ್ ಸಂಧು

  • Share this:
ಮುಂಬೈ: ಹಿಜಾಬ್ ವಿವಾದದ (Hijab Controversy) ಕುರಿತಂತೆ ಈಗಾಗಲೇ ಕರ್ನಾಟಕ ಹೈಕೋರ್ಟ್ (Karnataka High Court) ಅಂತಿಮ ತೀರ್ಪು (Final Judgment) ನೀಡಿದೆ.  “ಹಿಜಾಬ್ ಇಸ್ಲಾಂ (Islam) ಧರ್ಮದ ಅತ್ಯಗತ್ಯ ಭಾಗವಲ್ಲ” ಎಂದು ಹೈಕೋರ್ಟ್ ಪೂರ್ಣ ಪೀಠ  ಮಹತ್ವದ ತೀರ್ಪು ನೀಡಿತ್ತು. ಕುರಾನ್​​ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯಪಡಿಸಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಇಷ್ಟಾದರೂ ಹಿಜಾಬ್ ಪರ ಪ್ರತಿಭಟನೆ (Protest), ವಿರೋಧಗಳು ಇನ್ನೂ ನಿಂತಿಲ್ಲ. ಇದೀಗ ಇದೇ ವಿವಾದದ ಕುರಿತಂತೆ ಭುವನ ಸುಂದರಿ (Miss Universe) ಹರ್ನಾಜ್ ಸಂಧು (Harnaaz Sandhu) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಎಲ್ಲದಕ್ಕೂ ನೀವು ಹೆಣ್ಣು ಮಕ್ಕಳನ್ನೇ (Girls) ಟಾರ್ಗೆಟ್ (Traget) ಮಾಡಬೇಡಿ ಅಂತ ಹಿಜಾಬ್ ವಿರೋಧಿಗಳ ಮೇಲೆ ಸಂಧು ಗರಂ ಆಗಿದ್ದಾರೆ.

“ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಿ”

ಹಿಜಾಬ್ ಸೇರಿದಂತೆ ಇನ್ನಿತರ ವಿಚಾರಗಳ ಮೂಲಕ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವುದನ್ನು ಸಮಾಜ ನಿಲ್ಲಿಸಬೇಕಾಗಿದೆ ಎಂದು ಭುವನ ಸುಂದರಿ ಹರ್ನಾಜ್ ಸಂಧು ಹೇಳಿದ್ದಾರೆ. ಅಲ್ಲದೇ, ಅವರ ಆಯ್ಕೆಯ ರೀತಿಯಲ್ಲಿ ಬದುಕಲು ಬಿಡಿ ಎಂದಿದ್ದಾರೆ.

“ಅವರಿಗೆ ಇಷ್ಟ ಬಂದಂತೆ ಬದುಕಲು ಬಿಡಿ”

'ನೀವೇಕೆ ಹೆಣ್ಣು ಮಕ್ಕಳನ್ನು ಇಷ್ಟೊಂದು ಗುರಿಯಾಗಿಸುತ್ತೀರಿ ಎಂದು ಪ್ರಾಮಾಣಿಕವಾಗಿ ಕೇಳುತ್ತೇನೆ ಅಂತ ಸಂಧು ಹೇಳಿದ್ದಾರೆ. ಈಗಲೂ ನೀವು ನನ್ನನ್ನು ಗುರಿಯಾಗಿಸಿಕೊಂಡಿದ್ದೀರಿ. ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಅವರಿಗೆ ಇಷ್ಟಬಂದಂತೆ ಬದುಕಲು ಬಿಡಿ. ಅವರ ಗುರಿ ತಲುಪಲು ಅವಕಾಶ ನೀಡಿ ಎಂದು ಹರ್ನಾಜ್ ಸಂಧು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

“ಅವರ ರೆಕ್ಕೆಗಳನ್ನು ಕತ್ತರಿಸಬೇಡಿ”

“ನೀವು ಯಾಕೆ ಯಾವಾಗಲೂ ಹುಡುಗಿಯರನ್ನು ಟಾರ್ಗೆಟ್ ಮಾಡುತ್ತೀರಿ” ಅಂತ ಸಂಧು ಪ್ರಶ್ನಿಸಿದ್ದಾರೆ. ಈಗಲಾದರೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದೀರಿ. ಹಾಗೆ, ಹಿಜಾಬ್ ವಿಚಾರದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರು ಅವರು ಆಯ್ಕೆ ಮಾಡಿದ ರೀತಿಯಲ್ಲಿ ಬದುಕಲಿ, ಅವರವರ ಗಮ್ಯವನ್ನು ತಲುಪಲಿ, ಅವಳ ನೊಣ, ಅದು ಅವಳ ರೆಕ್ಕೆಗಳು, ಅವುಗಳನ್ನು ಕತ್ತರಿಸಬೇಡಿ, ನೀವು ಯಾರೊಬ್ಬರ ರೆಕ್ಕೆಗಳನ್ನು ಕತ್ತರಿಸಬೇಕಿದ್ದರೆ ನಿಮ್ಮ ರೆಕ್ಕೆಗಳನ್ನೇ ಕತ್ತರಿಸಿಕೊಳ್ಳಿ ಅಂತ ಹೇಳಿದ್ದಾರೆ.

ಗೌರವ ಸಮಾರಂಭದಲ್ಲಿ ಸಂಧು ಹೇಳಿಕೆ

ಭುವನ ಸುಂದರಿ ಆಗಿ ಆಯ್ಕೆಯಾಗಿದ್ದಕ್ಕೆ ಮುಂಬೈನಲ್ಲಿ ನಡೆದ ಗೌರವ ಸಲ್ಲಿಕೆ ಸಮಾರಂಭದಲ್ಲಿ ಪತ್ರಕರ್ತರೊಬ್ಬರು ಹಿಜಾಬ್ ಕುರಿತಂತೆ ಕೇಳಿದ ಪ್ರಶ್ನೆಗೆ ಹರ್ನಾಜ್ ಸಂಧು ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಆಯೋಜಕರು, ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳದಂತೆ ಪತ್ರಕರ್ತರಿಗೆ ವಿನಂತಿಸಿದ್ದಾರೆ.



ಹೈಕೋರ್ಟ್‌ ತೀರ್ಪಿನಲ್ಲಿ ಏನು ಹೇಳಲಾಗಿತ್ತು?

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್‌ ಕುರಿತಂತೆ ಹೈಕೋರ್ಟ್ ತೀರ್ಪು ಪ್ರಕಟಿಸಿತ್ತು. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ  ಮಹತ್ವದ ತೀರ್ಪು ನೀಡಿತ್ತು. ಕುರಾನ್​​ನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯಪಡಿಸಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿತ್ತು. ಹಿಜಾಬ್ ಬಗ್ಗೆ ಕುರಾನ್​​ನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಅಂತ ಹೈಕೋರ್ಟ್ ಹೇಳಿತ್ತು. ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿ ತೀರ್ಪು ಪ್ರಕಟಿಸಿತ್ತು.

ಇದನ್ನೂ ಓದಿ: Muslim Shops: ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳ ಚಿಂತನೆ

ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

ಹಿಜಾಬ್ ಬೇಕು, ಬೇಡ ವಾದಗಳ ನಡುವೆಯೇ ಇಂದಿನಿಂದ ರಾಜ್ಯದಲ್ಲಿ SSLC ಪರೀಕ್ಷೆಗಳು ಆರಂಭವಾಗಲಿವೆ. ಹಿಜಾಬ್ ಧರಿಸುವ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಅನುಮತಿ ನೀಡಲಾಗಲ್ಲ ಎಂದು ಸರ್ಕಾರ ಹೇಳಿದೆ. ಈ ಬಾರಿ 8,73,846 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದ ಏಪ್ರಿಲ್ 11ರ ವರೆಗೆ ನಡೆಯಲಿರುವ SSLC ಪರೀಕ್ಷೆಗಳು ನಡೆಯಲಿವೆ.
Published by:Annappa Achari
First published: