• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Harnaaz Kaur Sandhu: ಧೂಳೆಬ್ಬಿಸ್ತಿದೆ ಹರ್ನಾಜ್‌ ಕೌರ್‌ ಸಂಧು ಫೋಟೋಸ್; ನೆಟ್ಟಿಗರಂತೂ ಫುಲ್‌ ಫಿದಾ

Harnaaz Kaur Sandhu: ಧೂಳೆಬ್ಬಿಸ್ತಿದೆ ಹರ್ನಾಜ್‌ ಕೌರ್‌ ಸಂಧು ಫೋಟೋಸ್; ನೆಟ್ಟಿಗರಂತೂ ಫುಲ್‌ ಫಿದಾ

ಹರ್ನಾಜ್‌ ಕೌರ್‌ ಸಂಧು

ಹರ್ನಾಜ್‌ ಕೌರ್‌ ಸಂಧು

ಭಾರತಕ್ಕೆ ಸುಮಾರು 21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟ ತಂದುಕೊಟ್ಟಿರುವ ಹರ್ನಾಜ್‌ ಕೌರ್ ಸಂಧು ಪಂಜಾಬ್‌ ಬೆಡಗಿ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇತ್ತೀಚಿನ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇಂಟರ್‌ ನೆಟ್‌ ತುಂಬೆಲ್ಲಾ ಹಲ್‌ ಚಲ್‌ ಎಬ್ಬಿಸಿವೆ.

  • Share this:

ವಿಶ್ವ ಸುಂದರಿ ಹರ್ನಾಜ್ ಕೌರ್ ಸಂಧು (Harnaaz Kaur Sandhu) ಸೌಂದರ್ಯ ಮತ್ತು ಮಾದಕತೆ ಎರಡನ್ನೂ ಮೈದುಂಬಿಕೊಂಡ ಚೆಲುವೆ. ಸಾಮಾಜಿಕ ಜಾಲತಾಣದಲ್ಲಿ (Social media) ಸಕ್ರಿಯವಾಗಿರುವ ಮಿಸ್‌ ಯೂನಿವರ್ಸ್‌ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೆಲವು ಚಿತ್ರಗಳನ್ನು ಹರ್ನಾಜ್ ಕೌರ್ ಪೋಸ್ಟ್ ಮಾಡಿದ್ದು, ನೆಟ್ಟಿಗರಂತೂ ಫುಲ್‌ ಫಿದಾ ಆಗಿದ್ದಾರೆ. ಸಖತ್‌ ಸ್ಟೈಲಿಶ್‌ (Stylish) ಆಗಿರಲು ಬಯಸುವ ಸಂಧು ತನ್ನ ಔಟ್ ಫಿಟ್‌ ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಸಂಧು ತೊಟ್ಟರೇ ಮಾತ್ರ ಆ ಬಟ್ಟೆಗಳಿಗೆ (Clothes) ಕಳೆ ಎನ್ನುವಷ್ಟರ ಮಟ್ಟಿಗೆ ಹೊಸ ಹೊಸ ಉಡುಪುಗಳಲ್ಲಿ ಮಿಸ್‌ ಯೂನಿವರ್ಸ್‌ ಮಿಂಚುತ್ತಾರೆ.


ಹರ್ನಾಜ್ ಕೌರ್ ಸಂಧು ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಕೆಲವು ಫೋಟೋಗಳು ಸದ್ಯ ವೈರಲ್‌ ಆಗಿದ್ದು, ಇಂಟರ್‌ ನೆಟ್‌ ತುಂಬೆಲ್ಲಾ ಹಲ್‌ ಚಲ್‌ ಎಬ್ಬಿಸಿವೆ.


ಹರ್ನಾಜ್ ಲುಕ್‌ ಹೇಗಿದೆ ಗೊತ್ತಾ?
ಹರ್ನಾಜ್ ಕೌರ್ ಸಂಧು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇತ್ತೀಚಿನ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ ಮತ್ತು ಮ್ಯಾಚಿಂಗ್ ಪ್ಲಾಜೋ‌ ಪ್ಯಾಂಟ್‌ ಅನ್ನು ಸಹ ಧರಿಸಿದ್ದಾರೆ. ಈ ಔಟ್‌ ಫಿಟ್‌ ಗೆ ಸಹಿಹೊಂದುವ ಬೆಳ್ಳಿಯ ಬಣ್ಣದ ಬ್ರ್ಯಾಲೆಟ್ ಅನ್ನು ಸಹ ಧರಿಸಿದ್ದಾರೆ. ಹರ್ನಾಜ್ ತನ್ನ ನೋಟವನ್ನು ಪೂರ್ಣಗೊಳಿಸಲು ಬಿಳಿ ಬಣ್ಣದ ಬ್ಯಾಗ್‌ ಒಂದನ್ನು ಸಹ ಧರಿಸಿದ್ದಾರೆ. ನ್ಯೂಡ್‌ ಮೇಕಪ್‌, ಫ್ರೀ ಹೇರ್‌ ಸ್ಟೈಲ್‌ ಮಾಡಿಕೊಂಡ ಹರ್ನಾಜ್ ಕೌರ್ ಒಟ್ಟಾರೆ ವೈಟ್‌ ಮತ್ತು ಸಿಲ್ವರ್‌ ಬಟ್ಟೆಯಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.
ಹರ್ನಜ್‌ ತಮ್ಮ ಬ್ಯಾಗ್‌, ಡ್ರೆಸ್‌ ಎಲ್ಲವನ್ನೂ ಎಲ್ಲಿ ಖರೀದಿಸಿದ್ದಾರೆ ಎಂಬುದಾಗಿ ಸಹ ತಿಳಿಸಿದ್ದಾರೆ. ನೀವು ಮಿಸ್‌ ಯೂನಿವರ್ಸ್‌ ರೀತಿ ಡ್ರೆಸ್‌ ಮಾಡಿಕೊಳ್ಳಲು ಬಯಸಿದರೆ, ಆಕೆ ಟ್ಯಾಗ್‌ ಮಾಡಿರುವ ವಿಳಾಸದಲ್ಲಿ ಇಂತಹದ್ದೇ ಡ್ರೆಸ್‌ ಖರೀದಿ ಮಾಡಬಹುದು.



ಹರ್ನಾಜ್ ಲುಕ್‌ ಗೆ ಅಭಿಮಾನಿಗಳು ಫಿಧಾ
ಈ ಫೋಟೋಶೂಟ್ ನಲ್ಲಿ ಹರ್ನಾಜ್ ಗ್ಲಾಸ್ ಹಾಕಿಕೊಂಡು ಕಿಲ್ಲರ್ ಪೋಸ್ ನೀಡಿದ್ದಾರೆ. ಮಿಸ್ ಯೂನಿವರ್ಸ್ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ ಮಳೆ ಸುರಿಸಿದ್ದಾರೆ. ಒಬ್ಬ ಬಳಕೆದಾರರು ಗಾರ್ಜಿಯಸ್ ಅಂತಾ ಬರೆದರೆ, ಇನ್ನೊಬ್ಬ ಬಳಕೆದಾರರು ಸ್ಟನ್ನಿಂಗ್ ಲುಕ್ ಎಂದು ಕಾಮೆಂಟ್‌ ಮಾಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಹರ್ನಾಜ್ ಹಾಟ್‌ ಲುಕ್ಕಿಗೆ ಅನೇಕ ಸೆಲೆಬ್ರಿಟಿಗಳು ಕೂಡ ಹೊಗಳಿದ್ದಾರೆ.‌



ಮೊನ್ನೆ ತಾನೇ ನಡೆದ ಓಂದು ಫೋಟೋಶೂಟನ್ನು ಸಹ ವಿಶ್ವ ಸುಂದರಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದು, ಮೂರು ವಿಭಿನ್ನ ಡ್ರೆಸ್‌ ಗಳಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾಳೆ ಈ ಚೆಲುವೆ. ರೀಲ್ಸ್‌ ಮೂಲಕ ತನ್ನ ಔಟ್‌ ಫಿಟ್‌ ತೋರಿಸುವ ವಿಡಿಯೋ ಅಪ್ಲೋಡ್‌ ಮಾಡಿರುವ ಸಂಧು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.


21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟ ತಂದುಕೊಟ್ಟ ಹರ್ನಾಜ್
ಭಾರತಕ್ಕೆ ಸುಮಾರು 21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟ ತಂದುಕೊಟ್ಟಿರುವ ಹರ್ನಾಜ್‌ ಪಂಜಾಬ್‌ ಬೆಡಗಿ. 2021ನೇ ಸಾಲಿನ ಮಿಸ್ ಯೂನಿವರ್ಸ್ ಪಟ್ಟ ಗೆದ್ದ ಹರ್ನಾಜ್ ಸಂಧು ಸಿನಿಮಾಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಪಂಜಾಬಿಯ 'ಬೈ ಜಿ ಕುಟ್ಟಾಂಗೇ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಮುಖ ಮಾಡಿದ್ದಾರೆ. ಆಗಸ್ಟ್ 19ರಂದು ಬಿಡುಗಡೆಯಾದ ಸಿನಿಮಾದಲ್ಲಿ ದೇವ್ ಕರೌಡ್, ನಾನಕ್ ಸಿಂಗ್, ಹರ್ನಾಜ್ ಸಂಧು, ಉಪಾಸನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರವನ್ನು ಸಂತೋಷ್ ಎಂಟರ್ಟೈನ್ಮೆಂಟ್ ಸ್ಟುಡಿಯೋಸ್ ನಿರ್ಮಿಸಿದೆ.

top videos
    First published: