Jote Joteyali: ಆರ್ಯವರ್ಧನ್ ಪಾತ್ರಕ್ಕೆ ಈ ನಟ ಫಿಕ್ಸ್, ಅಭಿಮಾನಿಗಳು ಗೆಸ್ ಮಾಡಿದ್ದು ಕರೆಕ್ಟ್ ಆಗಿದ್ಯಾ? ಇವರೇ ನೋಡಿ

ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆರೂರು ಜಗದೀಶ್​ ಅವರು ಅಳೆದು ತೂಗಿಯೇ ಆರ್ಯನ ಪಾತ್ರಕ್ಕೆ ನಟ ಹರೀಶ್​ ರಾಜ್​ರನ್ನು ಆಯ್ಕೆ ಮಾಡಿದ್ದಾರೆ. ಹರೀಶ್​ ರಾಜ್ ಕೂಡ ಉತ್ತಮ ಕಲಾವಿದರಾಗಿದ್ದಾರೆ.

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​

ಅನಿರುದ್ಧ್​ ಬದಲು ಯಾರಾಗ್ತಾರೆ ಆರ್ಯವರ್ಧನ್​

  • Share this:
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಿದ್ದಾರೆ.  ಯಾರು ಅನಿರುದ್ಧ್​ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ಅನಿರುದ್ಧ್​ ಬದಲು ಹರೀಶ್​ ರಾಜ್!

ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್​ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್​ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿತ್ತು. ಆರೂರ್​ ಜಗದೀಶ್​ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್​ಗೆ ಗೇಟ್​ ಪಾಸ್​ ಕೊಟ್ಟಿದ್ದಾರಾ? ಅನ್ನೋ ಪ್ರಶ್ನೆ ಹುಟ್ಟಿತ್ತು. ಇದೀಗ ಎಲ್ಲಾ ಗೊಂದಲಕ್ಕೂ ತೆರೆ ಬಿದ್ದಿದ್ದು ಸ್ಯಾಂಡಲ್​ವುಡ್​ ನಟ ಹರೀಶ್ ರಾಜ್​ ಅವರು ಆರ್ಯವರ್ಧನ್​ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

harish raj to replace aniruddha jatkar in jote joteyali serial
ಅನಿರುದ್ಧ್ , ಹರೀಶ್​ ರಾಜ್​


ಇನ್ಮುಂದೆ ಆರ್ಯವರ್ಧನ್​ ಪಾತ್ರದಲ್ಲಿ ಹರೀಶ್ ರಾಜ್​

ಜೊತೆ ಜೊತೆಯಲಿ ಆರ್ಯವರ್ಧನ್​ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆರೂರು ಜಗದೀಶ್​ ಅವರು ಅಳೆದು ತೂಗಿಯೇ ಆರ್ಯನ ಪಾತ್ರಕ್ಕೆ ನಟ ಹರೀಶ್​ ರಾಜ್​ರನ್ನು ಆಯ್ಕೆ ಮಾಡಿದ್ದಾರೆ. ಹರೀಶ್​ ರಾಜ್ ಕೂಡ ಉತ್ತಮ ಕಲಾವಿದರಾಗಿದ್ದಾರೆ. ಆರ್ಯವರ್ಧನ್​ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸೋ ಸಾಮರ್ಥ್ಯ ಹೊಂದಿದ್ದಾರೆ.

ಅನು ಜೊತೆ ಜೊತೆಯಾಗಲಿದ್ದಾರೆ ಹರೀಶ್ ರಾಜ್ 

ಅನು ಸಿರಿಮನೆ ಹಾಗೂ ಆರ್ಯವರ್ಧನ್ ಜೋಡಿ ಪ್ರೇಕ್ಷಕರ ಮನಗೆದ್ದ ಜೋಡಿಯಾಗಿತ್ತು. ಇದೀಗ ಪಾತ್ರದ ಬದಲಾವಣೆಯನ್ನು ಜನರು ಹೇಗೆ ಸ್ವೀಕರಿಸ್ತಾರೆ ಅನ್ನೋದನ್ನೂ ಕಾದು ನೋಡಬೇಕಿದೆ. ಇತ್ತ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಅವರೇ ಬೇಕು ಎಂದು ಮಹಿಳಾ ಅಭಿಮಾನಿಗಳು ಆಗ್ರಹಿಸಿದ್ರು. ಆರೂರು ಜಗದೀಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ  ಅಭಿಮಾನಿಗಳು ಕಿಡಿಕಾರಿದ್ರು. ಅನಿರುದ್ಧ್​ ಅವರನ್ನೇ ಆರ್ಯವರ್ಧನ್​ ಪಾತ್ರಕ್ಕೆ ಕರೆತನ್ನಿಎನ್ನುವ ಕೂಗು ಜೋರಾಗಿತ್ತು.

ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

ಹಲವು ಚಿತ್ರಗಳಲಿ ಅಭಿನಯಿಸಿದ ಅನುಭವಿ ಹರೀಶ್ ರಾಜ್​

1997 ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಸೌಂದರ್ಯ ಅವರು ನಟಿಸಿದ್ದ”ದೋಣಿ ಸಾಗಲಿ” ಚಿತ್ರದ ಮೂಲಕ ನನ್ನ ಸಿನಿಪಯಣ ಆರಂಭವಾಯಿತು. ಅದೇ ವರ್ಷ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ್ದ “ತಾಯಿ ಸಾಹೇಬ” ಚಿತ್ರದಲ್ಲಿ ನಟಿಸಿದ್ದ ಹರೀಶ್ ಇದುವರೆಗೂ 70 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಹರೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿದ ಭಕ್ತಿ ಪ್ರಧಾನ ಶ್ರೀ ಸತ್ಯನಾರಾಯಣ ಸಿನಿಮಾದಲ್ಲಿ 16 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ಸೇರಿಸಲಾಗಿದೆ.

ಇದನ್ನೂ ಓದಿ: Jote Joteyali Serial: ‘ಜೊತೆ ಜೊತೆಯಲಿ’ ಟೀಮ್ ವಿರುದ್ಧ ಸಿಡಿದೆದ್ದ ಆರ್ಯವರ್ಧನ್; ಸೀರಿಯಲ್​ನಿಂದ ಬ್ಯಾನ್ ಆಗ್ತಾರಾ ಅನಿರುದ್ದ್?

ಹರೀಶ್ ರಾಜ್ ಅಭಿನಯದ ಡಾಕ್ಯು-ಡ್ರಾಮಾದ ಚಿತ್ರೀಕರಣ ಮುಗಿದಿದ್ದು, 20/20 ಸಿನಿಮಾ ಕೂಡ ಬಿಡುಗಡೆಗಾಗಿ ಕಾಯುತ್ತಿದೆ, ಕೆ ಎಲ್ ರಾಜಶೇಖರ್ ನಿರ್ದೇಶನದ ಹಾಸ್ಯ ಮನರಂಜನೆಯಲ್ಲಿ ಕೋಮಲ್ ಅವರೊಂದಿಗೆ ಪರದೆ ಹಂಚಿಕೊಂಡಿದ್ದಾರೆ. ಮಲಯಾಳಂ ಇಂಡಸ್ಟ್ರಿಯಲ್ಲಿಯೂ ಹರೀಶ್ ರಾಜ್ ಚಾಪು ಮೂಡಿಸಿದ್ದಾರೆ. ಇದೀಗ ಆರ್ಯವರ್ಧನ್ ಆಗಿ ಕಿರುತೆರೆಯಲ್ಲಿ ಹೇಗೆ ಮಿಂಚ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
Published by:Pavana HS
First published: