75ನೇ ಸ್ವತಂತ್ರ ದಿನಾಚರಣೆ (Azadi ka Amrit Mahotsav) ಹಿನ್ನೆಲೆ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga Campaign) ಹಮ್ಮಿಕೊಂಡಿದೆ. ಈ ಅಭಿಯಾನದಡಿ ಆಗಸ್ಟ್ 13, 14 ಮತ್ತು 15 ರಂದು ಎಲ್ಲರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಹೇಳಲಾಗಿದೆ. ಅಲ್ಲದೇ ಅಭಿಯಾನದಡಿಯಲ್ಲಿ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವಂತೆ ಪ್ರಧಾನಿ ಮೋದಿ (Prime Minister Modi) ಕರೆ ನೀಡಿದ್ದಾರೆ. ಈ ಹಿನ್ನಲೆ ಈಗಾಗಲೇ ಹರ್ ಘರ್ ತಿರಂಗಾ ಆ್ಯಂಥಮ್ ಸಾಂಗ್ (Har Ghar Tiramga Anthem) ಬಿಡುಗಡೆ ಆಗಿದ್ದು, ಎಲ್ಲಾ ನಟರುಗಳು, ಕ್ರಿಕೆಟ್ ತಾರೆಯರು, ಕ್ರೀಡಾಪಟುಗಳು ಎಲ್ಲರೂ ಹಾಡಿನ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕನ್ನಡದಲ್ಲಿಯೂ ಆ್ಯಂಥಮ್ ಸಾಂಗ್ ಮೊಳಗಿದ್ದು, ಮನೆ ಮನಯಲ್ಲಿಯೂ ತ್ರಿವರ್ಣ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಹರ್ ಘರ್ ತಿರಂಗಾ ವಿಡಿಯೋ ಹಾಡು ರಿಲೀಸ್:
ಹೌದು, ಹರ್ ಘರ್ ತಿರಂಗಾ ವಿಡಿಯೋ ಸಾಂಗ್ ಬಿಡುಗಡೆ ಆಗಿದ್ದು, ಹಾಡಿನಲ್ಲಿ ಅನೇಕ ತಾರೆಯರು ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಅಜಯ್ ದೇವಗನ್, ಕೀರ್ತಿ ಸುರೇಶ್, ಅನುಷ್ಕಾ ಶರ್ಮಾ, ಪಿವಿ ಸಿಂಧು ಕಾಣಿಸಿಕೊಂಡಿದ್ದಾರೆ. ಅಲ್ಲದೇ ಎಲ್ಲಾ ಭಾಷೆಗಳಲ್ಲಿ ಹಾಡನ್ನು ಹಾಡಿದ್ದು, ಕ್ರಿಕೆಟಿಗ ಕೆಎಲ್ ರಾಹುಲ್ ಮನೆ ಮನೆಗೂ ತ್ರಿವರ್ಣ ಎಂದು ಕನ್ನಡದಲ್ಲಿ ಹೇಳಿದ್ದಾರೆ. ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Har Ghar Tiranga...Ghar Ghar Tiranga...
Celebrate our Tiranga with this melodious salute to our Tricolour , the symbol of our collective Pride & Unity as our Nation completes 75 years of independence 🇮🇳#HarGharTiranga #AmritMahotsav pic.twitter.com/ECISkROddI
— Ministry of Culture (@MinOfCultureGoI) August 3, 2022
ಅಗಸ್ಟ್-13 ರಿಂದ ಆರಂಭವಾಗುವ ಹರ್ ಘರ್ ತಿರಂಗಾ ಅಭಿಯಾನವು ಅಗಷ್ಟ್-15 ಸ್ವಾತಂತ್ರ್ಯ ದಿನೋತ್ಸವ ದವರೆಗೂ ನಡೆಯುವ ಈ ಅಭಿಯಾನದಲ್ಲಿ ಗ್ರಾಮಗಳ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ: YASH: ಹರ್ ಘರ್ ತಿರಂಗಾ ಎಂದ ರಾಕಿ ಭಾಯ್, ಪ್ರಧಾನಿ ಮೋದಿ ಅಭಿಯಾನಕ್ಕೆ ಯಶ್ ಸಾಥ್
ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ ಎಂದ ರಾಕಿ ಭಾಯ್:
ಹೌದು, ಈಗಾಗಲೇ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಅಭಿಯಾನಕ್ಕೆ ಯಶ್ ಸಹ ಸಾಥ್ ನೀಡಿದ್ದಾರೆ. ಈ ಕುರಿತು ನ್ಯಾಷನಲ್ ಸ್ಟಾರ್ ಯಶ್ ಸಹ ಟ್ವೀಟ್ ಮಾಡಿದ್ದು, ‘ನಮ್ಮ ವೈವಿಧ್ಯತೆಯಲ್ಲಿ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವಾದ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ವೇಳೆ ನಮ್ಮ ರಾಷ್ಟ್ರದ ಗುರುತಾದ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ. ಆಗಸ್ಟ್ 13-15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸೋಣ‘ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಶ್ ತಮ್ಮ ಅಭಿಮಾನಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮನವಿ ಮಾಡಿದ್ದಾರೆ. ಯಶ್ ಅವರು ಇದೀಗ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್ ನೀಡಿದ್ದು, ಈ ಅಭಿಯಾನಕ್ಕೆ ಅಭಿಮಾನಿಗಳಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ