HOME » NEWS » Entertainment » HAPPY BIRTHDAY VIJAY DEVERAKONDA SURPRISE TO ROWDY FANS LIGER TEASER WILL BE OUT TOMORROW AE

Happy Birthday Vijay Deverakonda: ವಿಜಯ್​ ದೇವರಕೊಂಡ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್​: ಬರ್ತಿದ್ದಾನೆ ರೌಡಿ..!

Liger: ನಾಳೆ ವಿಜಯ್​ ವೇದರಕೊಂಡ ಹುಟ್ಟುಹಬ್ಬ. ರೌಡಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಲೈಗರ್​ ಸಿನಿಮಾ ಟೀಸರ್​ ರಿಲೀಸ್​ ಮಾಡಲು ಚಿತ್ರತಂಡ ಯೋಚಿಸುತ್ತಿದೆಯಂತೆ.

Anitha E | news18-kannada
Updated:May 8, 2021, 3:52 PM IST
Happy Birthday Vijay Deverakonda: ವಿಜಯ್​ ದೇವರಕೊಂಡ ಅಭಿಮಾನಿಗಳಿಗೆ ಸಿಗಲಿದೆ ಸರ್ಪ್ರೈಸ್​: ಬರ್ತಿದ್ದಾನೆ ರೌಡಿ..!
ನಟ ವಿಜಯ್​ ದೇವರಕೊಂಡ
  • Share this:
ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ (Vijay Devarakonda) ವರ್ಲ್ಡ್​ ಫೇಮಸ್​ ಲವರ್​ ನಂತಹ ಫ್ಲಾಪ್​ ಸಿನಿಮಾ ಕೊಟ್ಟ ನಂತರ ಈಗ ಪೂರಿ ಜಗನ್ನಾಥ್​ ಅವರ ನಿರ್ದೇಶನದಲ್ಲಿ ಹೊಸ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ರೌಡಿಗೆ ನಾಯಕಿಯಾಗಿ ಬಾಲಿವುಡ್​ ನಟಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್​ ಈ ಚಿತ್ರವನ್ನು ಪ್ರಕಟಿಸಿದಾಗ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಕೆಲವು ಫೋಟೋಗಳು ವೈರಲ್​ ಆಗಿದ್ದವು. ಪೂರಿ ಜಗನ್ನಾಥ್​, ಚಾರ್ಮಿ ಹಾಗೂ ಧರ್ಮಾ ಪ್ರೊಡಕ್ಷನ್ಸ್​ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮೊದಲು ಫೈಟರ್​ ಎಂದು ಶೀರ್ಷಿಕೆ ಕೊಡಲು ನಿರ್ಧರಿಸಲಾಗಿತ್ತು. ಆದರೆ ಈ ಟೈಟಲ್​ ಅನ್ನು ಬೇರೆ ಅಂದರೆ ಹೃತಿಕ್​ ರೋಷನ್​ ಅಭಿನಯದ ಚಿತ್ರತಂಡ ತೆಗೆದುಕೊಂಡ ಕಾರಣದಿಂದ ಈಗ ಪೂರಿ ಜಗನ್ನಾಥ್​ ತಮ್ಮ ಸಿನಿಮಾಗೆ ಲೈಗರ್ (Liger)​ ಎಂದು ಟೈಟಲ್​  ಬದಲಾಯಿಸಲಾಯಿತು. 

ಪೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್​ ಇಂಡಿಯಾ ಚಿತ್ರವಾಗಿರುವ ಕಾರಣ ಈ ಚಿತ್ರಕ್ಕೆ ತುಂಬಾ ಹುಡುಕಿ ಹಾಗೂ ಯೋಚಿಸಿ ಲೈಗರ್ (Liger)​​ ಎಂದು ಶೀರ್ಷಿಕೆ ನೀಡಲಾಗಿದೆಯಂತೆ. ಪೂರಿ ಜಗನ್ನಾಥ್​ ಹಾಗೂ ಚಾರ್ಮಿ ಜೊತೆ ಸಹ ನಿರ್ಮಾಪಕನಾಗಿ ಕರಣ್​ ಜೋಹರ್ ಸಹ ಲೈಗರ್​ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಸನಿಮಾ ಹಿಂದಿ ಹಾಗೂ ತೆಲುಗಿನ ಜೊತೆಗೆ ಭಾರತದ ಇತರೆ ಪ್ರಮುಖ ಭಾಷೆಗಳಲ್ಲೂ ತೆರೆ ಕಾಣಲಿದೆ. ವಿಜಯ್​ ದೇವರಕೊಂಡ ಅಭಿನಯದ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಇದಾಗಿದೆ.

Liger release date, Liger movie releasing on September 9th, Vijay Deverakonda as Liger, Liger First Look Released, Vijay deverakonda, Liger, Liger Movie, vijay devarakonda news, vijay devarakonda latest films, puri jagannadh,vijay devarakonda fighter update,vijay devarakonda new movie, puri jagannadh movies,vijay devarakonda hindi film , ವಿಜಯ್​ ದೇವರಕೊಂಡ, ಪೂರಿ ಜಗನ್ನಾತ್​, ಚಾರ್ಮಿ ಕೌರ್​, ಅನನ್ಯಾ ಪಾಂಡೆ, ಲೈಗರ್​, ಲೈಗರ್​ ಚಿತ್ರದ ಪೋಸ್ಟರ್​, liger fever, vijay devarakonda,liger movie, liger beers, beer poured on liger poster,vijay devarakonda twitter,vijay devarakonda liger movie,vijay devarakonda liger movie meaning,vijay devarakonda liger movie puri jagannadh,vijay devarakonda puri jagannadh liger movie title released, telugu cinema
ಲೈಗರ್ ಚಿತ್ರದಲ್ಲಿ​ ವಿಜಯ್​ ದೇವರಕೊಂಡ


ಈ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ವಿಜಯ್​ ದೇವರಕೊಂಡ ಅಭಿಮಾನಿಗಳು ಲೈಗರ್​ ಹಾಗೂ ವಿಜಯ್​ ದೇವರಕೊಂಡ ಹೆಸರನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಲಾರಂಭಿಸಿದ್ದರು. ಇನ್ನು, ನಾಳೆ ವಿಜಯ್​ ವೇದರಕೊಂಡ ಹುಟ್ಟುಹಬ್ಬ. ರೌಡಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಲೈಗರ್​ ಸಿನಿಮಾ ಟೀಸರ್​ ರಿಲೀಸ್​ ಮಾಡಲು ಚಿತ್ರತಂಡ ಯೋಚಿಸುತ್ತಿದೆಯಂತೆ. ಹೌದು, ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಟೀಸರ್ ರಿಲೀಸ್​ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರಂತೆ. 

ಇದನ್ನೂ ಓದಿ: Shruthi Krishna: ಅಪ್ಪ-ಅಮ್ಮಂದಿರ ಅಪರೂಪದ ಫೋಟೋ ಹಂಚಿಕೊಂಡ ನಟಿ ಶ್ರುತಿ..!

ಈ ವಿಷಯ ರೌಡಿ ಅಭಿಮಾನಿಗಳಿಗೂ ಗೊತ್ತಾಗಿದ್ದು, ರಾಡಿ ಬರ್ತಿದ್ದಾನೆ ಅಂತ ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ. ಯಾವಾಗ ಮೇ.9 ಆಗುತ್ತದೆಯೋ ಲೈಗರ್​ ಸಿನಿಮಾದ ಟೀಸರ್ ಯಾವಾಗ ರಿಲೀಸ್​ ಆಗುತ್ತೋ ಎಂದು ಕಾಯುತ್ತಿದ್ದಾರೆ.  ಆದರೆ ಈ ಕುರಿತಾಗಿ ಚಿತ್ರತಂಡದ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.

ಈ ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲೂ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್​ ಶೆಟ್ಟಿ ಸಹ ನಟಿಸಲಿದ್ದಾರಂತೆ. ಡಾನ್​ ಪಾತ್ರದಲ್ಲಿ ಸುನೀಲ್​ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅವರದ್ದು ಕೇವಲ 15 ನಿಮಿಷಗಳು ಬಂದು ಹೋಗುವ ಪಾತ್ರವೆಂದು ಹೇಳಲಾಗುತ್ತಿದೆ.ಲೈಗರ್​ ಸಿನಿಮಾದ ಚಿತ್ರೀಕರಣವನ್ನು ಬ್ಯಾಂಕಾಕ್​ನಲ್ಲಿ ಮಾಡವ ಪ್ಲಾನ್​ನಲ್ಲಿ ಪೂರಿ ಜಗನ್ನಾಥ್​ ಇದ್ದರೆ, ಅದಕ್ಕೂ ಮೊದಲು ಹೈದರಾಬಾದಿನಲ್ಲಿ ನಿರ್ಮಿಸಿರುವ ಸೆಟ್​ನಲ್ಲಿ ಶೂಟಿಂಗ್​ ಪೂರ್ಣಗೊಂಡಿದೆ.ಇನ್ನು ವಿಜಯ್​ ದೇವರಕೊಂಡ ಡಾನ್​ ಮಗನಾಗಿ ನಟಿಸುತ್ತಿದ್ದು, ಅಪ್ಪ-ಮಗನ ನಡುವಿನ ಸಂಬಂಧ ಸರವತ್ತಾಗಿ ಸಾಗುತ್ತದೆಯಂತೆ. ಇನ್ನು ಈ ಹಿಂದೆಯೇ ವಿಜಯ್​ ದೇವರಕೊಂಡ ಅವರಿಗೆ ಕರಣ್​ ಜೋಹರ್​ ಸಿನಿಮಾದಲ್ಲಿ ನಟಿಸುವಂತೆ ಆಫರ್​ ಕೊಟ್ಟಿದ್ದರು. ಆದರೆ ಆಗ ಅದನ್ನು ತಿರಸ್ಕರಿಸಿದ್ದ ರೌಡಿ ವಿಜಯ್​ ದೇವರಕೊಂಡ, ಈಗ ಪೂರಿ ಜಗನ್ನಾಥ್​ ಅವರ ನಿರ್ದೇಶನ ಎಂಧ ಕೊಡಲೇ ಒಪ್ಪಿಕೊಂಡಿದ್ದಾರೆ. ಇನ್ನು ಸುಕುಮಾರ್​ ನಿರ್ದೇಶನದಲ್ಲಿ ವಿಜಯ್​ ದೇವರಕೊಂಡ ಹೊಸ ಸಿನಿಮಾ ಓಕೆ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಅಧಿಕೃತವಾಗಿ ಪ್ರಕಟಣೆ ಸಹ ಹೊರ ಬಿದ್ದಿದೆ. ಆದರೆ ಚಿತ್ರದ ಟೈಟಲ್​ ಹಾಗೂ ಇತರೆ ವಿವರಗಳು ಇನ್ನು ಮುಂದೆ ಬಹಿರವಾಗಬೇಕಿದೆ.

ಇದನ್ನೂ ಓದಿ: Juhi Chawla Family: ಪ್ರೇಮಲೋಕದ ಹುಡುಗಿ ಜೂಹಿ ಚಾವ್ಲಾ ರಿಯಲ್​ ಲೈಫ್​ ಹೀರೋ ಇವರೇ..!

ಲೈಗರ್​ ಎಂದರೆ ಹುಲಿ ಹಾಗೂ ಸಿಂಹಕ್ಕೆ ಹುಟ್ಟಿದ ಮರಿಯನ್ನು ಲೈಗರ್​ ಎಂದು ಕರೆಯಲಾಗುತ್ತದೆಯಂತೆ. ಅದರಂತೆ ಈ ಸಿನಿಮಾ ಟೈಟಲ್​ ಪೋಸ್ಟರ್​ನಲ್ಲಿ ಬಾಕ್ಸಿಂಗ್​ ಗ್ಲೌಸ್​ ತೊಟ್ಟ ವಿಜಯ್​ ದೇವರಕೊಂಡ ಲುಕ್ ಸಖತ್ತಾಗಿದೆ. ಜೊತೆಗೆ ಪೋಸ್ಟರ್​ನಲ್ಲಿ ಸಿಂಹ ಹಾಗೂ ಹುಲಿಯ ಚಿತ್ರಗಳೂ ಇವೆ. ಅಂದರೆ ಸಿನಿಮಾದ ನಾಯಕನಲ್ಲಿ ಈ ಎರಡೂ ಪ್ರಾಣಿಗಳ ಗುಣವಿರಲಿದೆಯಂತೆ.
Published by: Anitha E
First published: May 8, 2021, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories