Anitha EAnitha E
|
news18-kannada Updated:September 18, 2020, 10:26 AM IST
ಉಪೇಂದ್ರ ಹಾಗೂ ಹರಿಪ್ರಿಯಾ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್ಡೇ ಗಿಫ್ಟ್ ಆಗಿ ನಿನ್ನೆಯೇ ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಪೋಸ್ಟರ್ ರಿಲೀಸ್ ಮಾಡಿದ್ದು ವಿಶೇಷ. ಇನ್ನು ಕಬ್ಜ ಜೊತೆಗೆ ಉಪೇಂದ್ರ ಬುದ್ಧಿವಂತ 2 ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದೇನೆ ಎಂದೂ ಪ್ರಕಟಿಸಿದ್ದಾರೆ. ಇನ್ನು ಈ ಸಲ ಉಪೇಂದ್ರ ತಮ್ಮ ಹುಟ್ಟುಹಬ್ಬದಂದು ಮನೆಯಲ್ಲಿ ಇರುವುದಿಲ್ಲ. ಜೊತೆಗೆ ಕೊರೋನಾ ಕಾರಣದಿಂದಾಗಿ ಯಾರೂ ಮನೆಗಳ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇನ್ನು ಇವತ್ತು ತಾವಿರುವ ಕಡೆ ಸಿಗ್ನಲ್ ಸಿಕ್ಕರೆ ಫೇಸ್ಬುಕ್ ಲೈವ್ ಬರುವುದಾಗಯೀ ತಿಳಿಸಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೆ ಇವತ್ತು ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉಪೇಂದ್ರ ಹಾಗೂ ಹರಿಪ್ರಿಯಾ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾವನ್ನು ಆರ್. ಮಾದೇಶ್ ನಿರ್ದೇಶಿಸುತ್ತಿದ್ದಾರೆ. ಹರಿಪ್ರಿಯಾ ತಮ್ಮ 12 ವರ್ಷಗಳ ಸಿನಿ ಜೀವನದಲ್ಲಿ ಮೊದಲ ಬಾರಿಗೆ ಉಪೇಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಅವರು ಜಾಹೀರಾತೊಂದರಲ್ಲಿ ಉಪ್ಪಿ ಜೊತೆ ಕಾಣಿಸಿಕೊಂಡಿದ್ದಾರೆ.
ಉಪೇಂದ್ರ ಹಾಗೂ ಹರಿಪ್ರಿಯಾ ಅಭಿನಯದ ಹೊಸ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿರಲಿಲ್ಲ. ಆದರೆ ಈಗ ಉಪ್ಪಿ ಅವರ ಹುಟ್ಟುಹಬ್ಬದಂದು ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತಿದೆ. ಅದರಲ್ಲೂ ಸಿನಿಮಾಗೆ ಲಗಾಮ್ ಎಂದು ಟೈಟಲ್ ಇಡಲಾಗಿದೆ ಎಂದೂ ಹೇಳಲಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆಯಂತೆ.

ಹರಿಪ್ರಿಯಾ ಹಾಗೂ ಉಪೇಂದ್ರ
ಉಪ್ಪಿ-ಹರಿಪ್ರಿಯಾ ಅವರ ಈ ಹೊಸ ಸಿನಿಮಾ ಪ್ರಕಟವಾದಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟಿ, ಉಪೇಂದ್ರ ಜೊತೆ ಅಭಿನಯಿಸಲು ಕಾತರರಾಗಿರುವುದಾಗಿ ತಿಳಿಸಿದ್ದರು. ಇದು ನೈಜತೆಯ ಅಂಶವುಳ್ಳ ಸಿನಿಮಾ ಆಗಿದ್ದು, ಪ್ರಸ್ತುತ ಪರಿಸ್ಥಿತಿಗೆ ಹತ್ತಿರವಾಗಿದೆ ಎಂದು ಹೇಳಿದ್ದರು. ಉಪೇಂದ್ರ ಹಾಗೂ ಹರಿಪ್ರಿಯಾ ಅವರ ಈ ಹೊಸ ಸಿನಿಮಾ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.ಇನ್ನು ಈ ಸಿನಿಮಾಗೆ ಸಾಧು ಕೋಕಿಲ ಹಾಗೂ ಅವರ ಮಗ ಸೇರಿ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ.
ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದ ಡಿಪಿ ಬದಲಿಸಿದ ಸೆಲೆಬ್ರಿಟಿಗಳು..!
ಇನ್ನು ಅಭಿಮಾನಿಗಳು ಬಹಳ ಸಮಯದಿಂದ ಉಪೇಂದ್ರ ಅವರಿಗೆ ಸಿನಿಮಾ ನಿರ್ದೇಶನ ಮಾಡುವಂತೆ ಬೇಡಿಕೆ ಇಡುತ್ತಿದ್ದರು. ಅದಕ್ಕೆ ಪ್ರಿಕ್ರಿಯಿಸಿರುವ ರಿಯಲ್ ಸ್ಟಾರ್, ಮತ್ತೆ ಸಿನಿಮಾ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ. ಆದರೆ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿರುವ ಕಾರಣದಿಂದ, ಅವುಗಳ ಕೆಲಸ ಮುಗಿದ ನಂತರ, ಅಂದರೆ ಸ್ವಲ್ಪ ತಡವಾಗಿ ನಿರ್ದೇಶನದ ಕೆಲಸ ಆರಂಭಸಲಿದ್ದಾರಂತೆ. ಈ ಸಿನಿಮಾ ಯಾವುದು, ಸ್ಟೋರಿ ಲೈನ್ ಸೇರಿದಂತೆ ಇತರೆ ಮಾಹಿತಿಯನ್ನು ಆದಷ್ಟು ಬೇಗ ನೀಡುವುದಾಗಿ ಉಪೇಂದ್ರ ತಿಳಿಸಿದ್ದಾರೆ.
Published by:
Anitha E
First published:
September 18, 2020, 10:26 AM IST