HOME » NEWS » Entertainment » HAPPY BIRTHDAY SUSHANT SINGH RAJPUT SS RBIRTHDAY AND SUSHANT DAY IS TRENDING ON SOCIAL MEDIA FANS EMOTIONAL AE

Happy Birthday SSR: ಸುಶಾಂತ್​ ಹುಟ್ಟುಹಬ್ಬದಂದು ಭಾವುಕರಾದ ಅಭಿಮಾನಿಗಳು: ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ Sushant Day

Sushant Singh Day: ಸುಶಾಂತ್​ ಅವರನ್ನು ನೆನಪಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಸುಶಾಂತ್ ಅವರ ಕೆಲವು ಹಳೇ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಶ್​ ಮಾಡುತ್ತಿದ್ದಾರೆ.

Anitha E | news18-kannada
Updated:January 21, 2021, 10:55 AM IST
Happy Birthday SSR: ಸುಶಾಂತ್​ ಹುಟ್ಟುಹಬ್ಬದಂದು ಭಾವುಕರಾದ ಅಭಿಮಾನಿಗಳು: ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ Sushant Day
ನಟ ಸುಶಾಂತ್​ ಸಿಂಗ್​ 35ನೇ ಹುಟ್ಟುಹಬ್ಬ
  • Share this:
ದಿವಂಗತ ಸುಶಾಂತ್ ಸಿಂಗ್ ರಾಜಪೂತ್ ಅವರ ಹುಟ್ಟುಹಬ್ಬ ಇಂದು. ಸುಶಾಂತ್​ ಅಭಿಮಾನಿಗಳು ಅಗಲಿದ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳ ಮಳೆ ಸುರಿಸುತ್ತಿದ್ದಾರೆ. ಸುಶಾಂತ್​ ಇಂದು ಜೀವಂತವಾಗಿದಿದ್ದರೆ, ಅವರು 35ನೇ ವಸಂತಕ್ಕೆ ಕಾಲಿಟ್ಟಿರುತ್ತಿದ್ದರು. 1986ರ ಜ.21ರಂದು ಸುಶಾಂತ್​ ಅವರ ಜನನ ಪಾಟ್ನಾದಲ್ಲಿ ಆಗಿತ್ತು. ನಾಲ್ಕು ಮಂದಿ ಸದೋದರಿಯರ ಏಕೈಕ ಸಹೋದರ ಕಳೆದ ವರ್ಷ ಅಂದರೆ  2020ರ ಜೂನ್​ 14ರಂದು ಇಹಲೋಕ ತ್ಯಜಿಸಿದರು. ಮಧ್ಯಮ ವರ್ಗದ ಕುಟುಂಬದಿಂದ ಬಂದು ಬಾಲಿವುಡ್​ನಲ್ಲಿ ತನ್ನದೇ ಆದ ಸ್ಥಾನ ಮಾಡಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಗುಡಿಯನ್ನೇ ಕಟ್ಟಿಸಿಕೊಂಡಿದ್ದ ನಟ ಸುಶಾಂತ್​. ಇಂದು ಸುಶಾಂತ್​ ಈ ಜಗತ್ತಿನಲ್ಲಿ ಇಲ್ಲದಿದ್ದರೂ, ಅವರ ಅಭಿಮಾನಿಗಳ ನೆನೆಪಿನಲ್ಲಿ ಸದಾ ಹಸಿರಾಗಿದ್ದಾರೆ. ಇಂದು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಂದು ಸುಶಾಂತ್​ ಅಭಿಮಾನಿಗಳು ಟ್ವಿಟರ್​ನಲ್ಲಿ  #SushantDay ಹಾಗೂ #SSRBIRTHDAY ಟ್ರೆಂಡ್​ ಮಾಡುತ್ತಿದ್ದಾರೆ.  

ಸುಶಾಂತ್​ ಅವರನ್ನು ನೆನಪಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಸುಶಾಂತ್ ಅವರ ಕೆಲವು ಹಳೇ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಶ್​ ಮಾಡುತ್ತಿದ್ದಾರೆ.









ಸುಶಾಂತ್​ ಸಿಂಗ್​ ಅವರ ಹುಟ್ಟುಹಬ್ಬದ ಪೋಸ್ಟ್​ಗಳಿಂದಲೇ ಸಾಮಾಜಿಕ ಜಾಲತಾಣ ತುಂಬಿ ತುಳುಕುತ್ತಿದೆ. 2020ರ ಜೂನ್​ 14ರಂದು ಸುಶಾಂತ್ ಸಿಂಗ್​ ಅವರ ಶವ ಅವರ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಸುಶಾಂತ್​ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗುತ್ತಿತ್ತಾದರೂ, ನಂತರ ಅದು ಕೊಲೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಆರಂಭ

ನಂತರ, ಸುಶಾಂತ್ ಸಿಂಗ್​ ಸಾವಿನ ಪ್ರಕರಣ ಸದ್ಯ ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಮಾರಾಟದ ಲಿಂಕ್​ ಇರುವ ಬಗ್ಗೆ ಸಾಕ್ಷಯಗಳು ಸಿಕ್ಕಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಸಾರಾ ಅಲಿ ಖಾನ್​, ದೀಪಿಕಾ ಪಡುಕೋಣೆ ಅವರನ್ನುವಿಚಾರಣೆ ನಡೆಸಲಾಗಿದೆ. ಆದರೆ ಸುಶಾಂತ್​ ಸಾವಿನ ಪ್ರಕರಣದಲ್ಲಿ ಇನ್ನೂ ಯಾವುದೇ ಮಹತ್ವದ ವಿಷಯ ಹೊರ ಬೀಳದೆ ಇರುವುದು ಅಭಿಮಾನಿಗಳಲ್ಲಿ ನಿಜಕ್ಕೂ ಬೇಸರ ಮೂಡಿಸಿದೆ.
Published by: Anitha E
First published: January 21, 2021, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories