kichchotsava: ಸುದೀಪ್ ಜನ್ಮದಿನಕ್ಕೆ ಕೌಂಟ್​ಡೌನ್; ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೋತ್ಸವದ ಅಬ್ಬರ!

ಈ ಮೊದಲು ದರ್ಶನ್ ಸೇರಿ ಅನೇಕ ನಟರು ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದು ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಈಗ ಕಿಚ್ಚ ಮತ್ತೊಮ್ಮೆ ಇದೇ ಮಾರ್ಗ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

Rajesh Duggumane | news18-kannada
Updated:August 29, 2019, 11:05 AM IST
kichchotsava: ಸುದೀಪ್ ಜನ್ಮದಿನಕ್ಕೆ ಕೌಂಟ್​ಡೌನ್; ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೋತ್ಸವದ ಅಬ್ಬರ!
ಕಳೆದ ಜನ್ಮದಿನದಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಸುದೀಪ್​
  • Share this:
ಕಿಚ್ಚ ಸುದೀಪ್​ ಜನ್ಮ ದಿನಕ್ಕೆ ಕೌಂಟ್​ಡೌನ್​ ಆರಂಭವಾಗಿದೆ. ಸೆ.2ರಂದು ಸುದೀಪ್​ 46ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ನಾಲ್ಕು ದಿನಬಾಕಿ ಇರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಚ್ಚೋತ್ಸವಕ್ಕೆ ಚಾಲನೆ ನೀಡಿದ್ದಾರೆ.

ಸುದೀಪ್​ಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಸುದೀಪ್​ ಹಿಂಬಾಲಕರನ್ನು ಹೊಂದಿದ್ದಾರೆ. ಹಾಗಾಗಿ, ಸುದೀಪ್​ ಜನ್ಮದಿನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ರಾಜ್ಯದ ನಾನಾ ಭಾಗಗಳಿಂದ ಸುದೀಪ್​ ಮನೆಗೆ ಆಗಮಿಸುವ ಫ್ಯಾನ್ಸ್​ ಕೇಕ್​ ಕತ್ತರಿಸಿ, ಹಾರ ಹಾಕಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸುದೀಪ್​ ಹಿಂಬಾಲಕರು ಇದೇ ರೀತಿಯ ಪ್ಲ್ಯಾನ್​ ಹಾಕಿಕೊಂಡಿದ್ದಾರೆ.

ಕಳೆದಬಾರಿ ಕೊಡಗಿನಲ್ಲಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಸರಳ ಹುಟ್ಟುಹಬ್ಬ ಆಚರಿಸುವಂತೆ ಸುದೀಪ್​ ಮನವಿ ಮಾಡಿಕೊಂಡಿದ್ದರು. ಹೀಗಾಗಿ, ಹಣ್ಣು, ಹೂವು-ಹಾರ, ಕೇಕ್​ ತರದೆ ಕಿಚ್ಚನ ಜನ್ಮದಿನವನ್ನು ಅಭಿಮಾನಿಗಳು ಸರಳವಾಗಿ ಆಚರಿಸಿದ್ದರು. ಈ ಬಾರಿಯೂ ಅದು ಪುನರಾವರ್ತನೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ:  ಮೂರು ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರ: ಕೆ.ಜಿ.ಎಫ್‍ಗೂ ಸೆಡ್ಡು ಹೊಡೆಯುತ್ತಾ ಕಿಚ್ಚನ ಈ ಸಿನಿಮಾ..?

ಇತ್ತೀಚೆಗೆ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿದು ನೆರೆ ಪರಿಸ್ಥಿತಿ ಉಂಟಾಗಿತ್ತು. ಪ್ರವಾಹ ಪೀಡಿತರ ನೆರವಿಗೆ ತೆರಳುವಂತೆ ಅಭಿಮಾನಿಗಳ ಬಳಿ ಸುದೀಪ್​ ಮನವಿ ಮಾಡಿದ್ದರು. ಹೀಗಾಗಿ, ಈ ಬಾರಿ ಕಿಚ್ಚ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಶೀಘ್ರವೇ ಘೋಷಣೆ ಮಾಡಲಿದ್ದಾರಂತೆ.ಈ ಮೊದಲು ದರ್ಶನ್ ಸೇರಿ ಅನೇಕ ನಟರು ಪ್ರವಾಹ ಸಂತ್ರಸ್ತರ ನೋವಿಗೆ ಮಿಡಿದು ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಈಗ ಕಿಚ್ಚ ಮತ್ತೊಮ್ಮೆ ಇದೇ ಮಾರ್ಗ ಅನುಸರಿಸುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್​ ನಟನೆಯ 'ಪೈಲ್ವಾನ್​' ಚಿತ್ರ ಐದು ಭಾಷೆಗಳಲ್ಲಿ ಸೆ.12ರಂದು ತೆರೆಗೆ ಬರುತ್ತಿದೆ. ‘ಗಜಕೇಸರಿ’, ‘ಹೆಬ್ಬುಲಿ’ ಚಿತ್ರದ ನಿರ್ದೇಶಕ ಕೃಷ್ಣ ‘ಪೈಲ್ವಾನ್​’ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಹೆಬ್ಬುಲಿ’ ನಂತರ ಅವರು ಮತ್ತೊಮ್ಮೆ ಸುದೀಪ್​ ಜೊತೆ ಕೈಜೋಡಿಸುತ್ತಿರುವುದು ವಿಶೇಷ. ಬಾಲಿವುಡ್​ ನಟರಾದ ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​, ಸುಶಾಂತ್​ ಸಿಂಗ್​ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಕಾಂಕ್ಷಾ ಚಿತ್ರಕ್ಕೆ ನಾಯಕಿ.

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ