ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ತಮ್ಮ ಹೊಸ ಸಿನಿಮಾದ ಪ್ರಕಟಣೆ ಸಹ ಮಾಡಿದ್ದಾರೆ. ಹುಟ್ಟುಹಬ್ಬದಂದು ಉಡುಗೊರೆಯಾಗಿ ರಾಬಿನ್ ಹುಡ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ತಮ್ಮ ಹೊಸ ಸಿನಿಮಾದ ಕುರಿತು ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್ ನೋಡಿದರೆ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಂತಿದೆ. ಖ್ಯಾತ ನಿರ್ಮಾಪಕರ ಪುಷ್ಕರ್ ಮಲ್ಲಿಕಾನರ್ಜುನಯ್ಯ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕಿರಿಕ್ ಪಾರ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಪುಷ್ಕರ್ ಅವರ ಬ್ಯಾನರ್ನಿಂದ ಸಾಕಷ್ಟು ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿವೆ. ಇನ್ನು ಸ್ಯಾಂಡಲ್ವುಡ್ನಲ್ಲಿ ರಾಬಿನ್ ಹುಡ್ ಆಗಿ ಮಿಂಚಲಿರುವ ನಾಯಕನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ನೆಟ್ಟಿಗರು ಮಾತ್ರ ನಿರ್ದೇಶಕನೇ ನಾಯಕನಿರಬಹುದಾ ಎನ್ನಯತ್ತಿದ್ದಾರೆ.
ರಾಬಿನ್ ಹುಡ್ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಹಾಗೂ ನಾಯಕಿ ಯಾರು ಎಂಬ ಯಾವುದೇ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಸಿನಿಮಾ ನಿರ್ಮಿಸುತ್ತಿರುವುದಕ್ಕಾಗಿ ನಿರ್ಮಾಪಕರಿಗೆ ಸಿಂಪಲ್ ಸುನಿ ಧನ್ಯವಾದ ತಿಳಿಸಿದ್ದಾರೆ.
ಮತ್ತೊಂದು ಕನಸಿನ ಕೂಸಿಗೆ ಜಾಗ ಕಲ್ಪಿಸಿದಕ್ಕೆ ಧನ್ಯವಾದಗಳು
ಯಾರು ಈ ರಾಬಿನ್ ಹುಡ್ ?? https://t.co/bTxd1QO0mk
— ಸುನಿ/SuNi (@SimpleSuni) October 13, 2020
Mysterious I lay under the hood
Soon will I be uncovered
The saviour of neighbourhood
I shall spring as Robinhood ❤️
On the occasion of our Director @SimpleSuni’s Birthday, revealing the title of our Next movie #RobinHood @PushkarFilms 📽 pic.twitter.com/2yRl3SNJYy
— Pushkara Mallikarjunaiah (@Pushkara_M) October 13, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ