Happy Birthday Shriya Saran: ಶ್ರಿಯಾ ಶರಣ್ ನಟಿಯಷ್ಟೇ ಅಲ್ಲ, ಅದ್ಭುತ ಕಥಕ್ ಡ್ಯಾನ್ಸರ್ ಕೂಡಾ

Shriya Saran: ಸೌತ್ ನಟಿ ಶ್ರಿಯಾ ಶರಣ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇವರು ನಟಿ ಮಾತ್ರವಲ್ಲ, ಅದ್ಭುತ ಕಥಕ್ ಕಲಾವಿದೆ ಕೂಡಾ.

ಶ್ರಿಯಾ ಶರಣ್

ಶ್ರಿಯಾ ಶರಣ್

  • Share this:
ಸೌತ್​ನ ಸ್ಟಾರ್ ನಟಿ ಶ್ರಿಯಾ ಶರಣ್ (Shriya Saran) ನಟಿಯಷ್ಟೇ ಅಲ್ಲ, ಅದ್ಭುತ ಕಥಕ್ (Kathak) ಕಲಾವಿದೆ ಕೂಡಾ ಹೌದು. ತಮಿಳು, ತೆಲುಗು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ಅವರು ಈಗ ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಪತಿ ಹಾಗೂ ಮಗಳೊಂದಿಗೆ ವಿದೇಶದಲ್ಲಿ ನೆಲೆಸಿರುವ ಶ್ರಿಯಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ (Fans) ಸಂಪರ್ಕದಲ್ಲಿದ್ದಾರೆ. ನಟಿ ಶ್ರಿಯಾ ಈಗ 40ನೇ ವರ್ಷದ ಹುಟ್ಟುಹಬ್ಬ  (Birthday) ಆಚರಿಸುತ್ತಿದ್ದಾರೆ. ಆದರೆ ನಟಿಗೆ 40 ವರ್ಷ ಎಂದು ಹೇಳಿದರೆ ಖಂಡಿತಾ ನಂಬುವುದು ಕಷ್ಟ. ಇಂದೂ ಸಖತ್ ಕ್ಯೂಟ್ ಆಗಿ ಫೆಟ್ನೆಸ್ ನೋಡಿಕೊಂಡಿದ್ದಾರೆ ನಟಿ. ನಟಿ ತೆಲುಗು (Telugu) ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು.

ಅದ್ಭುತ ಕಥಕ್ ಕಲಾವಿದೆ

ಶ್ರಿಯಾ ಶರಣ್ ಅವರು ಭಾರತೀಯ ನಟಿ ಮತ್ತು ಮಾಡೆಲ್ ಆಗಿದ್ದು, ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾರೆ. ಶ್ರಿಯಾ ಪ್ರಸಿದ್ಧ ಕಥಕ್ ಡ್ಯಾನ್ಸರ್ ಆಗುವ ಕನಸು ಹೊತ್ತುಕೊಂಡಿದ್ದರು. ಆದರೆ ಆಗಿದ್ದು ಮಾತ್ರ ನಟಿ. 2001 ರಲ್ಲಿ ತೆಲುಗು ಸಿನಿಮಾ ಇಷ್ಟಮ್‌ ಮೂಲಕ ಶ್ರಿಯಾ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ಕಬ್ಜ ಸಿನಿಮಾದಲ್ಲಿ ಉಪ್ಪಿ ಜೊತೆ ನಟನೆ

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‌ ಸಿನಿಮಾ ‘ಕಬ್ಜ’. ಈ ಸಿನಿಮಾ ಅನೌನ್ಸ್​​ ಆಗಿ ತುಂಬಾ ದಿನಗಳು ಆಗಿವೆ. ಕೊರೋನಾದಿಂದ ಈ ಸಿನಿಮಾ ಶೂಟಿಂಗ್​ಗೆ ತೊಂದರೆಯಾಗಿತ್ತು. ಸಿನಿಮಾ ಇಷ್ಟು ತಡವಾಗಿರುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸದ್ಯ ಕಬ್ಜ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದ ಫಸ್ಟ್ ಹೀರೋಯಿನ್ ಆಗಿ ಬಹುಭಾಷಾ ನಟಿ ಶ್ರೀಯಾ ಶರಣ್​ ಕಾಣಿಸಿಕೊಳ್ಳುತ್ತಿದ್ದಾರೆ.


ಶ್ರಿಯಾ ಕನ್ನಡ ಸಿನಿಮಾಗಳು

ನಟಿ ಶ್ರೀಯಾ ಶರಣ್ ಮತ್ತೆ ಸ್ಯಾಂಡಲ್​​ವುಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ಪುನೀತ್ ರಾಜ್ ಕುಮಾರ್ ನಟನೆಯ ಅರಸು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ನೆನಪಿರಲಿ ಪ್ರೇಮ್ ನಟನೆಯ ಚಂದ್ರ ಚಿತ್ರಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಇದೀಗ ಆರ್.ಚಂದ್ರು ನಿರ್ದೇಶನದ ಕಬ್ಜ ಅಡ್ದದಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದಾರೆ.ಕಬ್ಜ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರೂ ದಕ್ಷಿಣದ ಖ್ಯಾತ ತಾರೆಯರೇ ಇರಲಿದ್ದಾರೆ ಎಂದು ನಿರ್ದೇಶಕ ಚಂದ್ರು ಹೇಳಿದ್ದರು. ಆ ಮಾತಿನಂತೆ ಇದೀಗ ಶ್ರೀಯಾ ಶರಣ್ ಅವರನ್ನು ಕರೆತಂದಿದ್ದಾರೆ.


ಇದನ್ನೂ ಓದಿ: Shriya Saran: ಮಗಳ ಜೊತೆ ನಟಿ ಶ್ರೀಯಾ ಶರಣ್ ಫೋಟೊಶೂಟ್! ವಿದೇಶದಲ್ಲಿ ಅಮ್ಮ-ಮಗಳ ಫನ್

ಉಪೇಂದ್ರಗೆ ಜೋಡಿಯಾದ ಶ್ರೀಯಾ ಶರಣ್​!

ಈ ಸಿನಿಮಾದಲ್ಲಿ ಶ್ರೀಯಾ ಅವರು ಮಧುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್​ ಲುಕ್​ ಕೂಡ ಈಗ ರಿಲೀಸ್​ ಆಗಿದೆ. ಭಾನುವಾರ ಶ್ರೀಯಾ ಅವರ ಫೋಟೋ ಶೂಟ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಸ್ಟಾರ್ ನಟರಿದ್ದು ಯಾರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಉಪೇಂದ್ರ ಜತೆ ಶ್ರೀಯಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರಿಗಾಗಿ ಮತ್ತೋರ್ವ ಬಹುಭಾಷಾ ನಟಿಯನ್ನು ಕರೆತರಲಿದ್ದಾರಂತೆ ಆರ್​​.ಚಂದ್ರು.


ಇದನ್ನೂ ಓದಿ: ಪತಿ Andrei Koscheev ಜತೆ ತಿರುಪತಿ-ಶ್ರೀಕಾಳಹಸ್ತಿಗೆ ಭೇಟಿ ಕೊಟ್ಟ ನಟಿ Shriya Saran​..!

ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಭಾರೀ ಬಜೆಟ್ ನಲ್ಲೂ ತಯಾರಾಗುತ್ತಿದೆ. ಈಗಾಗಲೇ ಯಶಸ್ಸಿ ಸಿನಿಮಾಗಳನ್ನು ನೀಡಿರುವ ಆರ್.ಚಂದ್ರು ಬಗ್ಗೆ ಈ ಸಿನಿಮಾದಿಂದ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ.
Published by:Divya D
First published: