Happy Birthday Sara Ali Khan: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾರಾ ಅಲಿಖಾನ್​: ಇಲ್ಲಿವೆ ಕೆಲವು ಅಪರೂಪದ ಚಿತ್ರಗಳು..!

Happy Birthday Sara Ali Khan: ಸಾರಾ ಇಂದು ಸಾರಾ ಅಲಿ ಖಾನ್​ 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅವರು  ಕುಟುಂಬದ ಜೊತೆಗಿರುವ ಕೆಲವು ಅಪರೂಪದ ಚಿತ್ರಗಳು ನಿಮಗಾಗಿ.

Anitha E | news18
Updated:August 12, 2019, 4:06 PM IST
Happy Birthday Sara Ali Khan: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾರಾ ಅಲಿಖಾನ್​: ಇಲ್ಲಿವೆ ಕೆಲವು ಅಪರೂಪದ ಚಿತ್ರಗಳು..!
ನಟಿ ಸಾರಾ ಅಲಿಖಾನ್​
  • News18
  • Last Updated: August 12, 2019, 4:06 PM IST
  • Share this:
'ಸಿಂಬಾ' ಸಿನಿಮಾ ಖ್ಯಾತಿಯ ನಟಿ ಸಾರಾ ಅಲಿ ಖಾನ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಕೇದಾರ್​ನಾಥ್​' ಸಿನಿಮಾದ ಮೂಲಕ ಬಿ-ಟೌನ್​ಗೆ ಕಾಲಿಟ್ಟ ಸಾರಾ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಬಾಲಿವುಡ್​ ನವಾಬ ಸೈಫ್​ ಅಲಿಖಾನ್​ ಹಾಗೂ ಅಮೃತಾ ಸಿಂಗ್​ ಅವರ ಮಗಳು ಸಾರಾ ಸದ್ಯ ಬಾಲಿವುಡ್​ನಲ್ಲಿ ಬೇಡಿಕೆಯ ನಟಿ. ಮಾಡಿದ್ದು ಎರಡೇ ಸಿನಿಮಾಗಳಾದರೂ, ಎರಡೂ ಬಾಕ್ಸಾಫಿಸ್​ನಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡಿದ ಚಿತ್ರಗಳೆ.

ಹಾಟ್​ ಲುಕ್​ನಲ್ಲಿ ಸಾರಾ ಅಲಿ ಖಾನ್​


ಸಿನಿಮಾಗಳ ಜತೆಗೆ ಫೋಟೋಶೂಟ್​ಗಳಲ್ಲೂ ಸಾರಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತಮ್ಮ ಕೆಲಸದ ಬ್ಯುಸಿ ಶೆಡ್ಯೂಲ್​ ನಡುವೆ ಕುಟುಂಬಕ್ಕೂ ಸಮಯ ಕೊಡುತ್ತಾರೆ. ಅದಕ್ಕೆ ಉದಾಹರಣೆ ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳು.
ಸಾರಾ ತಮ್ಮ ತಂದೆ ಸೈಫ್​ ಜತೆ ಕಾಫಿ ವಿತ್​ ಕರಣ್​ ಕಾರ್ಯಕ್ರದಲ್ಲೂ ಭಾಗಿಯಾಗಿದ್ದರು. ಅಪ್ಪಂದಿನ ದಿನದಂದು ಈ ಪೋಸ್ಟ್​ ಸಹ ಮಾಡಿದ್ದಾರೆ.
ಸಾರಾ ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯವಾದ ಕ್ಷಣಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ತನ್ನ ಯಶಸ್ಸಿನ ಹಿಂದೆ ತಾಯಿ ಇದ್ದಾರೆ ಎಂದು ಹೇಳಿಕೊಳ್ಳುವ ಸಾರಾ, ಅಮ್ಮ ಅಮೃತನೊಂದಿಗೆ ಸೇರಿ ಅಡುಗೆಡ ಮಾಡಿದ್ದ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
View this post on Instagram
 

Eid Mubarak 🌙✨🌹


A post shared by Sara Ali Khan (@saraalikhan95) on

ತೈಮೂರ್​ ತನ್ನ ಸ್ವಂತ ತಮ್ಮ ಅಲ್ಲದೇ ಹೋದರೂ, ಅವನನ್ನೂ ಪ್ರೀತಿಸುವ ಸಾರಾ, ಆಗಾಗ ಅವನೊಂದಿಗೆ ಕಳೆಯುವ ಕ್ಷಣದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಟ್ಟುಕೊಳ್ಳುತ್ತಾರೆ.

ಇದನ್ನೂ ಓದಿ: ಲೀಕ್​ ಆಯ್ತು 'ಕೂಲಿ ನಂ 1' ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..! 
View this post on Instagram
 

My Easter Bunnies 🐇🐰🥚#munchkins #brothersinarms #doubletrouble


A post shared by Sara Ali Khan (@saraalikhan95) on


ಮಲತಾಯಿ ಕರೀನಾ ಕಪೂರ್​ ಜತೆ ಸಹ ಸಾರಾಗೆ ಒಳ್ಳೆಯ ಸಂಬಂಧವಿದೆ. ಕರೀನಾರೊಂದಿಗೆ ಸ್ನೇಹಿತೆಯಂತಿರುವ ಸಾರಾ ಆಗಾಗ ಈ ಬಗ್ಗೆ ಸಂದರ್ಶನಗಳಲ್ಲೂ ಹೇಳಿಕೊಳ್ಳುತ್ತಾರೆ.

  
View this post on Instagram
 

Merry merry merry Christmas to everyone 🎄🎁🍭🦃🍬🎂🎉🎊💝


A post shared by Sara Ali Khan (@saraalikhan95) on


ಈಗಷ್ಟೆ ಬಾಲಿವುಡ್​ನಲ್ಲಿ ಕಣ್ಣು ಬಿಡುತ್ತಿರುವ ಸಾರಾಗೆ ಕರೀನಾ ಒಂದು ರೀತಿಯ ಸ್ಫೂರ್ತಿಯಂತೆ. ಸಾರಾರ ಈ ಗುಣವೇ ಅವರನ್ನು ಅವರ ಕುಟುಂಬದೊಂದಿಗೆ ಒಟ್ಟಾಗಿ ಇರುವಂತೆ ಮಾಡಿದೆ. ಏನೇ ಆಗಲಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ನಮ್ಮ ಕಡೆಯಿಂದಲೂ ಶುಭ ಹಾರೈಸೋಣ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ರಾಕಿಂಗ್​ ಗಂಡನ ತಾಳಕ್ಕೆ ಕುಣಿದ ರಾಧಿಕಾ ಪಂಡಿತ್ ವಿಡಿಯೋ​..!

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!

First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ