ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್, ನಮ್ಮ, ನಿಮ್ಮೆಲ್ಲರ ಪ್ರೀತಿಯ ಯಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು 36ನೇ ವಸಂತಕ್ಕೆ ರಾಕಿ ಭಾಯ್ ಕಾಲಿಟಿದ್ದಾರೆ. ಈ ದಿನವನ್ನು ಕೇವಲ ರಾಜ್ಯವಷ್ಟೇ ಅಲ್ಲ, ಇಡೀ ದೇಶವೇ ಯಶ್ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದೆ. ಈ ದಿನದ ಖುಷಿಯನ್ನು ಹೆಚ್ಚಿಸಲು ‘ಹೊಂಬಾಳೆ ಫಿಲ್ಮ್ಸ್’ (Hombale Films) ಕೂಡ ಸಾಥ್ ನೀಡಿದೆ. ಅಭಿಮಾನಿಗಳ ಆಸೆಯಂತೆಯೇ ಯಶ್ ಜನ್ಮದಿನದ ಪ್ರಯುಕ್ತ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಬೆಳಗ್ಗೆ 9 ಗಂಟೆಗೆ ಪೋಸ್ಟರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು. ಈಗ ಹೊಸ ಪೋಸ್ಟರ್ (KGF Chapter 2 New Poster) ಕಂಡು ಎಲ್ಲರೂ ಖುಷಿಪಟ್ಟಿದ್ದಾರೆ. ಅಲ್ಲದೇ, ‘ಕೆಜಿಎಫ್ 2’ (KGF 2) ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆಯೂ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ. ಕೆಜಿಎಫ್ ಎಂಬ ಒಂದು ಸಿನಿಮಾದಿಂದ ಕನ್ನಡ ಚಿತ್ರರಂಗದ ಹೆಸರೇ ಬದಲಾಯಿತು. ರಾಕಿಂಗ್ ಸ್ಟಾರ್ ಯಶ್ ಅವರ ರೇಂಜ್ ಬದಲಾಗಿತ್ತು. ಕೆಜಿಎಫ್ ಬರೆದ ದಾಖಲೆಗಳನ್ನು ಮುರಿಯುವುದಿರಲಿ, ಅದರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಾಗಿಲ್ಲ. ಇದೀಗ ಕೆಜಿಎಫ್ 2 ಹೊಸ ದಾಖಲೆಗಳನ್ನು ಬರೆಯಲು ಸಜ್ಜಾಗಿದೆ.
ಹೊಸ ಪೋಸ್ಟರ್ ಕಂಡು ಫ್ಯಾನ್ಸ್ ಫುಲ್ ದಿಲ್ಖುಷ್!
ಕೆಜಿಎಫ್ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಏಪ್ರಿಲ್ 14ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಯಶ್ ಅವರ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ವೊಂದು ರಿಲೀಸ್ ಆಗಿದೆ. ‘ಡೇಂಜರ್ ಆಹೆಡ್’ ಎಂಬ ಬರಹ ಬರೆದು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ಇದೀಗ ಅವರ ಅಭಿಮಾನಿಗಳವಾಟ್ಸ್ಆ್ಯಪ್ ಡಿಪಿ, ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ರಾರಾಜಿಸುತ್ತಿದೆ. ಯಶ್ ಅವರ ಇದೊಂದು ಪೋಸ್ಟರ್ ಮತ್ತೆ ಟ್ವಿಟ್ಟರ್ನಲ್ಲಿ ಟ್ರೆಡಿಂಗ್ ಸೃಷ್ಟಿಸಿದೆ.
ಇದನ್ನು ಓದಿ:
ಮನೆಯಲ್ಲೇ ಸಿಂಪಲ್ ಸೆಲೆಬ್ರೇಷನ್ ಮಾಡಿದ ಯಶ್!
ಪವರ್ ಇಲ್ಲದೇ ಚಂದನವನವೆಲ್ಲ ಕತ್ತಲಾಗಿದೆ. ಹೌದು, ಪುನೀತ್ ರಾಜ್ಕುಮಾರ್ ಇಲ್ಲದೇ ಸ್ಯಾಂಡಲ್ವುಡ್ ಬರಿದಾಗಿದೆ. ಅಪ್ಪು ನಮ್ಮಂದಿಗೆ ಇಲ್ಲ ಅನ್ನುವುದನ್ನು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಯಾಂಡಲ್ವುಡ್ ಯಾವ ನಟರು ಕೂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಹೀಗಾಗಿ ಯಶ್ ಕೂಡ ತಮ್ಮ ಜನ್ಮದಿನ ಆಚರಣೆಗೆ ಬ್ರೇಕ್ ಹಾಕಿದ್ದರು. ರಾತ್ರಿ ಮನೆಯಲ್ಲೇ ಪತ್ನಿ, ಮಕ್ಕಳೊಂದಿಗೆ ಸರಳವಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕೆಜೆಎಫ್ 2 ಸಿನಿಮಾದ ಯಶ್ ಲುಕ್ನಲ್ಲಿ ವಿಶಿಷ್ಟವಾದ ಕೇಕ್ ಮಾಡಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಯಶ್ ಕೇಕ್ ಕಟ್ ಮಾಡಿದ್ದಾರೆ.
ಕೆಜಿಎಫ್ 2 ಸಿನಿಮಾಗಾಗಿ ಇಡೀ ವಿಶ್ವವೇ ಕಾಯುತ್ತಿದೆ!
ಕೆಜಿಎಫ್ ಬರೆದ ದಾಖಲೆಗಳನ್ನು ಮುರಿಯುವುದಿರಲಿ, ಅದರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಸಿನಿಮಾ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಪ್ರಿಲ್ನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಬೇರೆ ಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೆ ಅವರ ಅಭಿಮಾನಿಗಳೇ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಕೆಜಿಎಫ್ 2 ಮುಂದೆ ಸಿನಿಮಾ ರಿಲೀಸ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇವಲ ರಾಕಿಭಾಯ್ ಹೆಸರಿಗೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್ ಅವರ ರೇಂಜ್ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ. ‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ