Happy Birthday Raveena Tandon: 21ನೇ ವಯಸ್ಸಿಗೆ ಎರಡು ಮಕ್ಕಳ ಅಮ್ಮನಾದ ಕೆಜಿಎಫ್​ ಚಾಪ್ಟರ್ 2 ನಟಿ

ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿರುವ ಈ ನಟಿ ಒಂದು ಕಾಲದಲ್ಲಿ ಟಾಪ್​ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರವೀನಾ ಟಂಡನ್​ ಅವರು ತಮ್ಮ ಸಿನಿ ಜೀವನದ ಆರಂಭವನ್ನು 1991ರಲ್ಲಿ ಪತ್ಯಾರ್​ ಕೆ ಫೂಲ್​ ಚಿತ್ರದ ಮೂಲಕ ಮಾಡಿದ್ದರು. ಈ ಸಿನಿಮಾದಲ್ಲಿ ರವೀನ್ ಅವರು ಸಲ್ಮಾನ್​ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರವೀನಾ ಟಂಡನ್

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರವೀನಾ ಟಂಡನ್

  • Share this:
90ರ ದಶಕದಲ್ಲಿ ಟಾಪ್​ ನಟಿಯಾಗಿದ್ದ ರವೀನಾ ಟಂಡನ್ (Happy Birthday Raveena Tandon) ಅವರ ಹುಟ್ಟುಹಬ್ಬವಿಂದು. ಅಕ್ಟೋಬರ್​  26ರಂದು ಅಂದರೆ ಇಂದು ಬರ್ತ್​ ಡೇ ಸೆಲೆಬ್ರೇಟ್​ ಮಾಡಿಕೊಳ್ಳುತ್ತಿರುವ ನಟಿ ರವೀನಾ ಟಂಡನ್​ ಅವರು ತಮ್ಮ ಸಿನಿ ಜೀವನದಲ್ಲಿ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಮೋಹ್ರಾ  (Mohra) ಸಿನಿಮಾದಲ್ಲಿ ಅವರಿಗೆ ಈ ಇಂಡಸ್ಟ್ರಿಯಲ್ಲಿ ಹೊಸ ಗುರುತು ಸಿಕ್ಕಿತ್ತು. ಜನರು ಈ ಸಿನಿಮಾದ ನಂತರ ಅವನ್ನು ಮಸ್ತ್​ ಮಸ್ತ್ ಹುಡುಗಿ (Mast Mast Girl) ಎಂದೇ ಕರೆಯಲಾರಂಭಿಸಿದರು. ಸಿನಿ ಜೀವನದ ಆರಂಭದಲ್ಲಿ ಗ್ಲಾಮರಸ್​ ಪಾತ್ರಗಳಲ್ಲಿ ನಟಿಸಿದ್ದ ಈ ನಟಿ ನಂತರದಲ್ಲಿ ಪಾತ್ರಗಳಿಗೆ ಪ್ರಾಮುಖ್ಯತೆ ಇರುವ ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು. ಈ ಮೂಲಕ ಅವರು ತಮ್ಮ ಅಭಿನಯಸಾಮರ್ಥ್ಯವನ್ನೂ ಸಾಬೀತು ಪಡಿಸಿದರು.

ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿರುವ ಈ ನಟಿ ಒಂದು ಕಾಲದಲ್ಲಿ ಟಾಪ್​ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರವೀನಾ ಟಂಡನ್​ ಅವರು ತಮ್ಮ ಸಿನಿ ಜೀವನದ ಆರಂಭವನ್ನು 1991ರಲ್ಲಿ ಪತ್ಯಾರ್​ ಕೆ ಫೂಲ್​ ಚಿತ್ರದ ಮೂಲಕ ಮಾಡಿದ್ದರು. ಈ ಸಿನಿಮಾದಲ್ಲಿ ರವೀನ್ ಅವರು ಸಲ್ಮಾನ್​ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.






ಮೊದಲ ಸಿನಿಮಾದ ಮೂಲಕವೇ ರವೀನಾ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡರು. ನಂತರ ಮೋಹ್ರಾ, ದಿಲ್ವಾಲೆ, ಅಂದಾಜ್​ ಅಪ್ನಾ ಅಪ್ನಾ ಹಾಗೂ ದುಲ್ಹೆ ರಾಜ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ತಮಗಿಂತ ಹಿರಿಯ ಕಲಾವಿದರ ಜೊತೆ ಸಹ ಕೆಲಸ ಮಾಡಿದ್ದಾರೆ.

ಇದನ್ನೂ  ಓದಿ: HBD Raveena Tandon: ಕುಟುಂಬದೊಂದಿಗೆ 46ನೇ ಹುಟ್ಟುಹಬ್ಬ ಆಚರಿಸಿಕೊಂಡ ರವೀನಾ ಟಂಡನ್​..!

1974ರ ಅ.26ರಂದು ರವೀನಾ ಅವರ ಜನನ ಮುಂಬೈನಲ್ಲಿ ಆಗಿತ್ತು. ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದ ಕುಟುಂಬದಲ್ಲೇ ಜನಿಸಿದ ಈ ನಟಯ ತಂದೆ ರವಿ ಟಂಡನ್​ ಅವರು ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರು. ಅವರು ನಜರಾನಾ, ಏಕ್​ ಮೈ ಔರ್ ಏಕ್​ ತೂ, ಖೇಲ್​, ಖುದ್ದಾರ್​, ವಕ್ತ್​ ಕಿ ದಿವಾರ್​ನಂತತ ಸಿನಿಮಾಗಳನ್ನು ಮಾಡಿದ್ದಾರೆ. ಈ ನಟಿ ಖ್ಯಾತ ಪೋಷಕರ ಕಲಾವಿದ ಮ್ಯಾಕ್​ ಮೋಹನ್​ ಅವರ ಸಂಬಂಧಿಯೂ ಹೌದು. ಮನೆಯ ವಾತಾವರಣ ಹೀಗಿರುವಾಗ ರವೀನಾ ಅವರಿಗೆ ಸಿನಿಮಾಗಳತ್ತ ಒಲವು ಮೂಡಿದ್ದರಲ್ಲಿ ಯಾವುದೇ ಅನುಮಾನವಿಲ್ಲ. 17 ವರ್ಷದವರಾಗಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

1995ರಲ್ಲಿ ರವೀನಾ ಅವರ ಸಿನಿ ಜೀವನ ಕೊಂಚ ಮಂಕಾಗಿತ್ತು. ಆಗಲೇ ರವೀನಾ ಕತ್ರೋಂಕೆ ಕಿಲಾಡಿ ಸಿನಿಮಾದ ಮೂಲಕ ರವೀನಾ ಮತ್ತೆ ಬಾಕ್ಸಾಫಿಸ್​ನಲ್ಲಿ ಹಿಟ್​ ಕೊಡುವ ಮೂಲಕ ಸದ್ದು ಮಾಡಿದ್ದರು. 1998ರಲ್ಲಿ ರಿಲೀಸ್​ ಆದ ಬಡೆ ಮಿಯಾ ಚೋಟೆ ಮಿಯಾ ಸಹ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ಆ ವರ್ಷದಲ್ಲಿ ಹೆಚ್ಚು ಗಳಿಕೆ ಮಾಡಿದ ಮತ್ತೊಂದು ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇತ್ತೀಚೆಗಷ್ಟೆ ಈ ಸಿನಿಮಾ 23ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿದೆ.

ಇದನ್ನೂ  ಓದಿ: Raveena Tandon: 16ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಟಿಪ್​ ಟಿಪ್​ ಹುಡುಗಿ ರವೀನಾ ಟಂಡನ್​ ಮಗಳು ರಾಶಾ ತದಾನಿ..!

1999ರಲ್ಲಿ ರಿಲೀಸ್​ ಆದ ಶೂಲ್​ ಚಿತ್ರದಲ್ಲಿ ರವೀನಾ ಅವರ ಗ್ಲಾಮರಸ್​ ಅಲ್ಲದ ಪಾತ್ರದಲ್ಲಿನ ಅಭಿನಯವನ್ನು ನೋಡಲು ಅವಕಾಶ ಸಿಕ್ಕಿತ್ತು. ನಂತರ 2001ರಲ್ಲಿ ಕಲ್ಪನಾ ಲಾಜ್ಮಿ ಅವರ ದಮನ್ ಸಿನಿಮಾದಲ್ಲೂ ಈ ನಟಿ ತಮ್ಮ ಅಭಿನಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಹ ಪಡೆದುಕೊಂಡರು. 2003ರಲ್ಲಿ ಸತ್ತಾ ಹಾಗೂ 2004ರಲ್ಲಿ ದೋಬಾರಾ ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡರು.

ಕೆಲ ಸಮಯ ಸಿನಿಮಾ ರಂಗದಿಂದ ಅಂತ ಕಾಯ್ದುಕೊಂಡಿದ್ದ ನಟಿ, ತಮ್ಮ ಕುಟುಂಬದ ಜೊತೆ ಕಾಲ ಕಳೆಯಲಾರಂಭಿಸಿದ್ದರು. ಗ್ಯಾಪ್​ನ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಲಾರಂಭಿಸಿದ ನಟಿ ಅಭಿನಯದ ವಿಷಯದಲ್ಲಿ ತಮ್ಮನ್ನು ಸಾಬೀತು ಮಾಡಿಕೊಂಡಿದ್ದರು. 2017ರಲ್ಲಿ ಮಾತೃ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು.




21ನೇ ವರ್ಷಕ್ಕೆ ಇಬ್ಬರು ಮಕ್ಕಳ ಅಮ್ಮನಾದ ನಟಿ

ರವೀನಾ ಟಂಡನ್​ ಅವರು ತಮ್ಮಿಷ್ಟದಂತೆಯೇ ಜೀವನ ಸಾಗಿಸುತ್ತಾರೆ. 21 ವರ್ಷದವರಿದ್ದಾಗಲೇ ಅವರು ಸಿಂಗಲ್​ ಮದರ್​ ಆಗುವ ನಿರ್ಧಾರಕ್ಕೆ ಬಂದಿದ್ದರು. ಪೂಜಾ ಹಾಗೂ ಛಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡರು. ಆಗ ಈ ಇಬ್ಬರು ಹೆಣ್ಣು ಮಕ್ಕಳ ವಯಸ್ಸು ಕ್ರಮವಾಗಿ 11 ಹಾಗೂ 8 ವರ್ಷವಿತ್ತು. ನಂತರದಲ್ಲಿ ಇಬ್ಬರೂ ಮಕ್ಕಳಿಗೆ ಮದುವೆ ಮಾಡಿದರು. ರವೀನಾ ಈಗ 2 ಮಕ್ಕಳಿಗೆ ಅಜ್ಜಿಯೂ ಆಗಿದ್ದಾರೆ. 2004ರಲ್ಲಿ ರವೀನಾ ಅವರು ಅನಿಲ್ ತದಾನಿ ಅವರ ಜೊತೆ ಮದುವೆಯಾದರು. ಒಂದು ಮಗ ಹಾಗೂ ಮಗಳ ಜೊತೆ ಈಗ ರವೀನಾ ಕಾಲ ಕಳೆಯುತ್ತಿದ್ದಾರೆ. ಈಗಲೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ ರವೀನಾ ಅವರು ಕನ್ನಡದ ಕೆಜಿಎಫ್​ ಚಾಪ್ಟರ್ 2ನಲ್ಲಿ ರಮಿಕಾ ಸೇನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
Published by:Anitha E
First published: