Happy Birthday: ರಾಣಾ ದಗ್ಗುಬಾಟಿಗೆ 37ನೇ ಹುಟ್ಟುಹಬ್ಬದ ಸಂಭ್ರಮ: ಅವರ ಪ್ರಮುಖ ಚಿತ್ರಗಳತ್ತ ಒಂದು ನೋಟ..!

ಪ್ರಮುಖ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳವರೆಗೆ ವಿವಿಧ ಭಾಷೆಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ ಕೆಲವೇ ನಟರಲ್ಲಿ ರಾಣಾ ದಗ್ಗುಬಾಟಿ ಕೂಡ ಒಬ್ಬರು

ರಾಣಾ ದಗ್ಗುಬಾಟಿ

ರಾಣಾ ದಗ್ಗುಬಾಟಿ

  • Share this:
ತೆಲುಗು ನಟ ರಾಣಾ ದಗ್ಗುಬಾಟಿ (Rana Daggubati) ಇಂದು ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಬಾಹುಬಲಿ (Baahubali) ಮೂಲಕ ನಟನೆಯಲ್ಲಿ ಎಲ್ಲರ ಮನೆ ಮಾತಾಗಿರುವ ದಗ್ಗುಬಾಟಿ ಕಾಲಿವುಡ್, ಬಾಲಿವುಡ್‍ನಲ್ಲೂ ನಟನೆಗೆ ಅವಕಾಶ ಪಡೆದುಕೊಳ್ಳುವ ಮೂಲಕ ಫುಲ್ ಬ್ಯುಸಿ ನಟರಾಗಿದ್ದಾರೆ. ವಿರಾಟ ಪರ್ವಂ, ಅರಣ್ಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಭರವಸೆಯ ನಾಯಕ ನಟನಾಗಿ ಬೆಳೆಯುತ್ತಿರುವ ರಾಣಾ ದಗ್ಗುಬಾಟಿ 37ನೇ ಹುಟ್ಟುಹಬ್ಬ (Celebrating) ಆಚರಿಸಿಕೊಳ್ಳುತ್ತಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಟಾಲಿವುಡ್, ಕಾಲಿವುಡ್ (Tollywood, Kollywood) ನಟ ನಟಿಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈಗಾಗಲೇ ಬಾಲಿವುಡ್‍ನಲ್ಲಿ ತೆರೆ ಕಂಡಿರುವ ಇವರ ಅಭಿನಯದ ದಮ್ ಮಾರೋ ದಮ್ ಸಿನಿಮಾದಲ್ಲಿನ ಅವರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಟಾಪ್​ 10 ಸೌತ್ ಹೀರೋಗಳು ಇವ್ರೆ...

ಪ್ರಮುಖ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳವರೆಗೆ, ವಿವಿಧ ಭಾಷೆಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ಯಾನ್-ಇಂಡಿಯನ್ ಸಿನಿಮಾಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ ಕೆಲವೇ ನಟರಲ್ಲಿ ರಾಣಾ ದಗ್ಗುಬಾಟಿ ಕೂಡ ಒಬ್ಬರು ಎಂದು ಹೆಸರುವಾಸಿಯಾಗಿದ್ದಾರೆ.

ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ 2: ದಿ ಕನ್‍ಕ್ಲೂಷನ್‍ನಲ್ಲಿನ ಪಾತ್ರಗಳಿಗೆ ದಗ್ಗುಬಾಟಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದಾರೆ. ಹೌದು ಇವೆರಡರಲ್ಲೂ ಬಲ್ಲಾಳದೇವನಾಗಿ ಕಾಣಿಸಿಕೊಂಡಿದ್ದ ದಗ್ಗುಬಾಟಿ ಖಳನಾಯಕನಾಗಿ ಪ್ರಭಾಸ್ ಸರಿಸಮಾನಾಗಿಯೇ ಅಬ್ಬರಿಸಿದ್ದರು.ದಗ್ಗುಬಾಟಿ ಸಂಕಲ್ಪ್ ರೆಡ್ಡಿ ನಿರ್ದೇಶನದ, ಘಾಜಿ ಚಿತ್ರದಲ್ಲಿ ನಟಿಸಿದ್ದಾರೆ. ಅದು ಅವರ ಗೆಲುವಿನ ವೇಗವನ್ನು ಹೆಚ್ಚಿಸಿತು. ಚಿತ್ರವನ್ನು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. 2018ರಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಳೆದ ಆಗಸ್ಟ್ ತಿಂಗಳಿನಲ್ಲಿ ವಿಹಿಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ನೇನೆ ರಾಜು ನೇನೆ ಮಂತ್ರಿ
ರಾಣಾ ಅವರ ನೇನೆ ರಾಜು ನೇನೆ ಮಂತ್ರಿ ಇದರಲ್ಲೂ ದಗ್ಗುಬಾಟಿ ಮಿಂಚಿದ್ದಾರೆ. ರಾಣಾ ಜೊತೆಗೆ ಕಾಜಲ್ ಅಗರ್ವಾಲ್, ಕ್ಯಾಥರೀನ್ ತ್ರೇಸಾ, ನವದೀಪ್, ಮತ್ತು ಅಶುತೋಷ ರಾಣಾ ಒಳಗೊಂಡ ಚಿತ್ರವು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವಿಮರ್ಶೆಗಳನ್ನು ಪಡೆದುಕೊಂಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಕೂಡ ಆಯಿತು.

ಲೀಡರ್
ರಾಣಾ ಅವರಿಗೆ ಅತ್ಯಧಿಕ ಗಳಿಕೆ ತಂದುಕೊಂಡ ಸಿನಿಮಾಗಳಲ್ಲಿ ಲೀಡರ್ ಕೂಡ ಒಂದು ಮತ್ತು ಅವರ ಚೊಚ್ಚಲ ಚಿತ್ರವೂ ಕೂಡ ಹೌದು. ಈ ಸಿನಿಮಾದಲ್ಲಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇದನ್ನು ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಎಂದು ಪರಿಗಣಿಸಲಾಗಿದೆ. ರಾಜಕೀಯ ಡ್ರಾಮಾ ಚಿತ್ರವನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.

ಕೃಷ್ಣಂ ವಂದೇ ಜಗದ್ಗುರುಂ
ರಾಣಾ 2012ರಲ್ಲಿ ಬಿಡುಗಡೆಯಾದ ತೆಲುಗು ಚಲನಚಿತ್ರ ಕೃಷ್ಣಂ ವಂದೇ ಜಗದ್ಗುರುಂನೊಂದಿಗೆ ಪ್ರಾಮುಖ್ಯತೆ ಪಡೆದರು. ಕ್ರಿಶ್ ನಿರ್ದೇಶಿಸಿದ ಈ ಚಿತ್ರವು ಸುರಭಿಯ ಕಲಾ ಪ್ರಕಾರವನ್ನು ಮತ್ತು ಅಕ್ರಮ ಗಣಿಗಾರಿಕೆ ಆಧರಿಸಿದ ಸಾಹಸಮಯ ಚಿತ್ರಕ್ಕಾಗಿ ಸಾರ್ವತ್ರಿಕ ಮೆಚ್ಚುಗೆ ಪಡೆಯಿತು. ಚಿತ್ರವು ವಿಮರ್ಶಾತ್ಮಕವಾಗಿಯೂ ಹೆಚ್ಚು ಮೆಚ್ಚುಗೆ ಪಡೆಯಿತು ಮತ್ತು ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಸಿನಿಮಾ ಎಂದು ಘೋಷಿಸಲಾಯಿತು.

ಇದನ್ನೂ ಓದಿ: Rana Daggubati: ಕಿಡ್ನಿ ವೈಫಲ್ಯವಾಗಿದ್ದು ನಿಜ ಎಂದು ಕಣ್ಣೀರಿಟ್ಟ ರಾಣಾ ದಗ್ಗುಬಾಟಿ: ಇಲ್ಲಿದೆ ವಿಡಿಯೋ..!

ಟಾಲಿವುಡ್​ ಹಂಕ್​ ರಾಣಾ ದಗ್ಗುಬಾಟಿ

ಬಾಹುಬಲಿಯಂತಹ ಹಿಟ್ ಸಿನಿಮಾದಲ್ಲಿ ನಟಿಸಿರುವ ನಟ ರಾಣಾಗೆ ಒಂದು ಕಣ್ಣು ಕಾಣಿಸುವುದಿಲ್ಲವಂತೆ. ಹೌದು, ಹೀಗೆಂದು ರಾಣಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಬಾಹುಬಲಿ ಸಮಯದಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದಾಗ ರಾಣಾ ತಮಗಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲ್ಯದಲ್ಲೇ ಕಣ್ಣಿನ ಸಮಸ್ಯೆ ಇದ್ದು, ಯಾರೋ ಕಣ್ಣು ದಾನ ಮಾಡಿದ್ದರಂತೆ. ಆದರೆ ಆ ಕಣ್ಣಿನಿಂದಲೂ ನೋಡಲು ಸಾಧ್ಯವಿಲ್ಲ ಎಂದು ರಾಣಾ ಹೇಳಿಕೊಂಡಿದ್ದಾರೆ. ನಮ್ಮ ಸಮಸ್ಯೆಗಳು ನಮ್ಮ ಬೆಳವಣಿಗೆಗೆ ಯಾವತ್ತೂ ತೊಡಕಾಗಬಾರದು. ಅದನ್ನೆಲ್ಲ ಮೀರಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದಿದ್ದಾರೆ ರಾಣಾ.
Published by:vanithasanjevani vanithasanjevani
First published: