Happy Birthday Ramya: 38ನೇ ವಸಂತಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ: ಸ್ಯಾಂಡಲ್​ವುಡ್ ಕ್ವೀನ್​ಗೆ ಶುಭಾಶಯಗಳ ಮಹಾಪೂರ

HBD Ramya: 2003ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ರಮ್ಯಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.

Happy Birthday Ramya

Happy Birthday Ramya

 • Share this:
  ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ ಅವಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ನ ಮಾಜಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ಉಸ್ತುವಾರಿಯಾದ ಮೋಹಕ ತಾರೆ ಇಂದು 38ನೇ ವರ್ಷಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.ಪೇಲವವಾಗಿದ್ದ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಹೊಸ ಹುರುಪು ನೀಡಿದ್ದು ಕನ್ನಡತಿ ದಿವ್ಯ ಸ್ಪಂದನ. ರಮ್ಯಾ ಎಂಬ ಹೆಸರಿನಲ್ಲಿಯೇ ಸಹಸ್ರಾರು ಅಭಿಮಾನಿಗಳ ಮನಸ್ಸುಕದ್ದ ಮೋಹಕ ತಾರೆ.

  ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅನಭಿಷಿಕ್ತ ನಾಯಕಿಯಾಗಿ ಆಳಿದವರು. ನಂತರ ಬದುಕಿನ ಹೊಸ ತಿರುವಿನಲ್ಲಿ ರಾಜಕೀಯದತ್ತ ಒಲವು ಹರಿದು, ಚೊಚ್ಚಲ ಸ್ಪರ್ಧೆಯಲ್ಲಿಯೇ(ಮಂಡ್ಯ, ಉಪಚುನಾವಣೆ) ಸಂಸದೆಯಾಗಿ ಜನಮನ ಗೆದ್ದವರು.

  2003ರಲ್ಲಿ ತೆರೆಕಂಡ ಅಭಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ರಮ್ಯಾ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ ಒಂದು ದಶಕ ರಮ್ಯಾ ಬೇಡಿಕೆಯ ನಟಿಯಾಗಿದ್ದರು.

  ದೇವದಾಸಿ ಚಿತ್ರದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿ ಸುದ್ದಿಯಾಗುತ್ತಿರುವ ಕನ್ನಡದ ಮತ್ತೋರ್ವ ಸಂಜನಾ!

  ರಾಜಕಾರಣದಲ್ಲಿ ಗುರುತಿಸಿಕೊಂಡ ಬಳಿಕ ಸಿನಿಮಾದಿಂದ ರಮ್ಯಾ ಅಂತರವನ್ನು ಕಾಯ್ದುಕೊಂಡಿದ್ದಾರೆ. ಸದ್ಯ ರಾಜಕೀಯದಿಂದಲೂ ರಮ್ಯಾ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಸದಾ ಆ್ಯಕ್ಟೀವ್ ಆಗಿರುವ ಇವರು ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.

  29.11.1982ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಲಕ್ಕಿ ಸ್ಟಾರ್ ಅವರ ಮೂಲ ಹೆಸರು ದಿವ್ಯ ಸ್ಪಂದನ. ರಮ್ಯಾ ಎರಡು ಸಲ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆರ್ಯನ್ ಚಿತ್ರದ ಬಳಿಕ ನಟಿ ರಮ್ಯಾ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಬಣ್ಣ ಹಚ್ಚಲಿಲ್ಲ.

  ರಮ್ಯಾ ನಟಿಸಿ ಚಂದನವನದಲ್ಲಿ ದೂಳೆಬ್ಬಿಸಿದ ಸೂಪರ್ ಹಿಟ್ ಸ್ವಮೇಕ್ ಚಿತ್ರಗಳಿವು:

  ಅಭಿ: ರಮ್ಯಾ ವೃತ್ತಿ ಜೀವನಕ್ಕೆ ಕಾಲಿಟ್ಟ ಮೊದಲ ಈ ಚಿತ್ರ 2003ರಲ್ಲಿ ಬಿಡುಗಡೆಯಾಗಿತ್ತು. ರಾಜ್ ಕುಮಾರ್ ಹೋಮ್ ಬ್ಯಾನರಿನಲ್ಲಿ ಮೂಡಿ ಬಂದ ಸಿನಿಮಾದಲ್ಲಿ ನಾಯಕನಾಗಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದರು. ದಿನೇಶ್ ಬಾಬು ಚಿತ್ರವನ್ನು ನಿರ್ದೇಶಿಸಿದ್ದರು.

  ಎಕ್ಸ್ ಕ್ಯೂಸ್ ಮಿ: ಜೋಗಿ ಪ್ರೇಮ್ ನಿರ್ದೇಶನದ ಮ್ಯೂಸಿಕಲ್ ಹಿಟ್ ಎಕ್ಸ್ ಕ್ಯೂಸ್ ಮಿ ಚಿತ್ರ 2003ರಲ್ಲಿ ಬಿಡುಗಡೆಯಾಗಿತ್ತು. ಅಜಯ್ ರಾವ್ ಮತ್ತು ಸುನಿಲ್ ರಾವ್ ನಿರ್ದೇಶನದ ಈ ಚಿತ್ರ ರಮ್ಯಾ ಹಿಟ್ ಚಿತ್ರಗಳ ಪೈಕಿ ಇದು ಕೂಡಾ.

  ಆಕಾಶ್: ರಾಜ್ ಕುಮಾರ್ ಬ್ಯಾನರಿನಲ್ಲಿ ಮೂಡಿ ಬಂದ ಮತ್ತೊಂದು ಸೂಪರ್ ಹಿಟ್ ಚಿತ್ರ. ಪುನೀತ್, ರಮ್ಯಾ, ಅವಿನಾಶ್, ಕಿಶೋರ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿ ಶತದಿನೋತ್ಸವ ಬಾರಿಸಿತ್ತು.

  Happy Birthday Ravi Shankar: ಹುಟ್ಟುಹಬ್ಬದ ಸಂಭ್ರಮದಲ್ಲಿ ರವಿಶಂಕರ್​: 3 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ ಆರ್ಮುಗಂ

  ಅರಸು: ರಾಜ್ ಬ್ಯಾನರಿನ ಮತ್ತೊಂದು ಸಿನಿರಸಿಕರ ಮನಗೆದ್ದ ಚಿತ್ರ. ಪುನೀತ್, ಮೀರಾ ಜಾಸ್ಮಿನ್, ರಮ್ಯಾ, ಕೋಮಲ್, ಶ್ರೀನಿವಾಸಮೂರ್ತಿ ಮತ್ತು ಅತಿಥಿ ಪಾತ್ರದಲ್ಲಿ ಬಂದು ಹೋದ ಶ್ರೇಯಾ ಶರಣ್ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರ 2007ರಲ್ಲಿ ಬಿಡುಗೊಡೆಗೊಂಡಿತ್ತು.

  ಮುಸ್ಸಂಜೆ ಮಾತು: ಈ ಚಿತ್ರ ನಿರ್ದೇಶಕ ಮಹೇಶ್ ಅವರಿಗೆ ಮುಸ್ಸಂಜೆ ಮಹೇಶ್ ಎಂದೇ ಬಿರುದು ಕೊಟ್ಟಿತ್ತು. ಯಾಕೆಂದರೆ ಈ ಚಿತ್ರ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ ಬರೆಯಿತು. ಸುದೀಪ್, ರಮ್ಯಾ, ಗಂಗಾವತಿ ಪ್ರಾಣೇಶ್, ಮಂಡ್ಯ ರಮೇಶ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು.

  ಸಂಜು ವೆಡ್ಸ್ ಗೀತಾ: ಇತರೆ ಭಾಷೆಯ ಸಿನಿ ಪ್ರಿಯರು ಈ ಸಿನಿಮಾವನ್ನು ಹಾಡಿಹೊಗಳಿದರು. ಜೆಸ್ಸಿ ಗಿಫ್ಟ್ ಸಂಗೀತ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ, ತಬಲ ನಾಣಿ, ಅವಿನಾಶ್ ಕಾಣಿಸಿಕೊಂಡಿದ್ದರು. ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು.
  Published by:Vinay Bhat
  First published: