Happy Birthday Rakshit Shetty: ರಕ್ಷಿತ್ ಶೆಟ್ಟಿಗೆ ಇಂದು ಜನ್ಮ ದಿನದ ಸಂಭ್ರಮ; ವಿಶ್​ ಮಾಡ್ತಾರಾ ರಶ್ಮಿಕಾ ಮಂದಣ್ಣ?

ಸಾಮಾನ್ಯವಾಗಿ ಹೀರೋಗಳ ಜನ್ಮ ದಿನ ಎಂದರೆ ಸಿನಿಮಾ ತಂಡದಿಂದ ಒಂದು ಕೊಡುಗೆ ಇದ್ದೇ ಇರುತ್ತದೆ. ಅಂತೆಯೇ, ರಕ್ಷಿತ್​ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಿಂದ ಟೀಸರ್​ ಉಡುಗೊರೆಯಾಗಿ ಸಿಗುತ್ತಿದೆ.

Rajesh Duggumane | news18
Updated:June 6, 2019, 1:37 PM IST
Happy Birthday Rakshit Shetty: ರಕ್ಷಿತ್ ಶೆಟ್ಟಿಗೆ ಇಂದು ಜನ್ಮ ದಿನದ ಸಂಭ್ರಮ; ವಿಶ್​ ಮಾಡ್ತಾರಾ ರಶ್ಮಿಕಾ ಮಂದಣ್ಣ?
ರಕ್ಷಿತ್​ ಎಂಗೇಜ್​ಮೆಂಟ್​ ಫೋಟೋ
  • News18
  • Last Updated: June 6, 2019, 1:37 PM IST
  • Share this:
ಇಂದು ನಟ ರಕ್ಷಿತ್​ ಶೆಟ್ಟಿಗೆ 36ನೇ ವರ್ಷದ ಜನ್ಮ ದಿನದ ಸಂಭ್ರಮ. ‘ಸಿಂಪಲ್​ ಸ್ಟಾರ್​’ ಎಂದು ಫೇಮಸ್ ಆಗಿರುವ ಅವರಿಗೆ ಲಕ್ಷಾಂತರ ಅಭಿಮಾನಿಗಳು ಹಾಗೂ ಸೆಲೆಬ್ರಿಟಗಳು ವಿಶ್​​ ಮಾಡಿದ್ದಾರೆ.

ಸಾಮಾನ್ಯವಾಗಿ ಹೀರೋಗಳ ಜನ್ಮ ದಿನ ಎಂದರೆ ಸಿನಿಮಾ ತಂಡದಿಂದ ಒಂದು ಕೊಡುಗೆ ಇದ್ದೇ ಇರುತ್ತದೆ. ಅಂತೆಯೇ, ರಕ್ಷಿತ್​ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಿಂದ ಟೀಸರ್​ ಉಡುಗೊರೆಯಾಗಿ ಸಿಗುತ್ತಿದೆ. ಸಿನಿಮಾ ಹಾಗೂ ರಕ್ಷಿತ್​ ಪಾತ್ರ ಹೇಗಿರಲಿದೆ ಎನ್ನುವ ಸ್ಪಷ್ಟ ಚಿತ್ರಣ ಟೀಸರ್​ನಲ್ಲಿ ಸಿಗಲಿದೆ.

ರಕ್ಷಿತ್​ '777 ಚಾರ್ಲಿ' ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್​ ಕೂಡ ರಿಲೀಸ್​ ಆಗಿದೆ. ರಕ್ಷಿತ್​ ಹಾಗೂ ಶ್ವಾನದ ಕಾಂಬಿನೇಷನ್ ನೋಡಿ ಪ್ರಾಣಿ ಪ್ರಿಯರು ಫಿದಾ ಆಗಿದ್ದಾರೆ.ಇನ್ನು, ರಕ್ಷಿತ್​ ಅವರ ಈ ಜನ್ಮದಿನ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ! ಅದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ. ‘ಕಿರಿಕ್​ ಪಾರ್ಟಿ’ ತೆರೆಕಂಡ ನಂತರ ರಕ್ಷಿತ್​-ರಶ್ಮಿಕಾ ನಡುವೆ ಪ್ರೀತಿ ಮೊಳೆತಿತ್ತು. ಇಬ್ಬರೂ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

ಇದನ್ನೂ ಓದಿ: ಜನ್ಮದಿನಕ್ಕೆ ಅಭಿಮಾನಿಗಳಿಗೆ ರಕ್ಷಿತ್​ ಶೆಟ್ಟಿಯಿಂದ ಗಿಫ್ಟ್ ಮೇಲೆ ಗಿಫ್ಟ್​​​; ಸೋಷಿಯಲ್​ ಮೀಡಿಯಾಗೂ ರಿ ಎಂಟ್ರಿ

ಕಾರಣಾಂತರಗಳಿಂದ ಸಂಬಂಧ ಮುರಿದು ಬಿದ್ದಿದ್ದು ಹೌದು. ಆದರೆ, ನಾವಿಬ್ಬರೂ ಉತ್ತಮ ಗೆಳೆಯರಾಗಿರುತ್ತೇವೆ ಎಂದು ಇಬ್ಬರೂ ಹೇಳಿದ್ದರು. ಬ್ರೇಕಪ್​ ನಂತರ ಇದು ರಕ್ಷಿತ್​ಗೆ ಮೊದಲ ಜನ್ಮದಿನ. ಇಬ್ಬರೂ ಗೆಳೆಯರಾಗಿರುತ್ತೇವೆ ಎಂದು ಹೇಳಿಕೊಂಡಿರುವುದರಿಂದ ಕರ್ನಾಟಕ ಕ್ರಶ್​ ಕಡೆಯಿಂದ ಸಿಂಪಲ್​ ಸ್ಟಾರ್​ಗೆ ವಿಶ್​​ ಬರಲಿದೆಯೇ? ಅವರಿಬ್ಬರೂ ಗೆಳೆಯರಾಗಿದ್ದಾರಾ? ಎನ್ನುವ ಅನುಮಾನ ಕಾಡಿದೆ.‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ರಕ್ಷಿತ್​ ಪೊಲೀಸ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೊತೆಯಾಗಿ ಶಾನ್ವಿ ಶ್ರೀವಾತ್ಸವ್​ ಕಾಣಿಸಿಕೊಂಡಿದ್ದಾರೆ. ಸಚಿನ್​ ರವಿ ಚಿತ್ರದ ನಿರ್ದೇಶಕ. ಆಗಸ್ಟ್​ ತಿಂಗಳಲ್ಲಿ ಸಿನಿಮ ತೆರೆಗೆ ಬರುತ್ತಿದೆ.

ಇದನ್ನೂ ಓದಿ: 'ಪಡ್ಡೆಹುಲಿ' ಅಡ್ಡದಲ್ಲಿ ರಕ್ಷಿತ್​ ಶೆಟ್ಟಿ!; ಕರ್ಣನ ಕಡೆಯಿಂದ ಸರ್ಪ್ರೈಸ್​ ಉಡುಗೊರೆ​​

First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ