Radhika Apte Birthday Special: ರಹಸ್ಯ ವಿವಾಹದಿಂದ ಎಂಎಂಸ್​ ಲೀಕ್​ ವಿವಾದದವರಗೆ..!

ರಾಧಿಕಾ ಆಪ್ಟೆ ಅವರ ಮೊದಲ ಸಿನಿಮಾ (Radhika Apte Debut) 2005ರಲ್ಲಿ ವಾಹ್​ ಲೈಸ್​ ಹೋ ತೋ ಐಸಿ ಮೂಲಕ ಬಾಲಿವುಡ್​ ಎಂಟ್ರಿ ಆಯಿತು. 2016ರಲ್ಲಿ ರಿಲೀಸ್​ ಆದ ಪಾರ್ಡ್ಚ್​ ಸಿನಿಮಾದಿಂದ ಅವರ ನಗ್ನ ವಿಡಿಯೋ ಲೀಕ್​ ಆಗಿ ವಿವಾದಕ್ಕೀಡಾಗಿದ್ದರು ಈ ನಟಿ. ಸಾಲದಕ್ಕೆ ಟ್ರೋಲಿಗರ ಟ್ರೋಲ್​ಗಳಿಗೆ ಬಲಿಯಾಗಿದ್ದರು.

ನಟಿ ರಾಧಿಕಾ ಆಪ್ಟೆ

ನಟಿ ರಾಧಿಕಾ ಆಪ್ಟೆ

  • Share this:
ಅಭಿನಯ ಹಾಗೂ ವಿವಾದಗಳಿಂದ ಸುದ್ದಿಯಲ್ಲಿರುವ ನಟಿ ರಾಧಿಕಾ ಆಪ್ಟೆ (Radhika Apte) ಅವರ ಜನ್ಮದಿನವಿಂದು. ಇಂದು 36ನೇ (36th Birthday) ವಸಂತಕ್ಕೆ ಕಾಲಿಟ್ಟಿರುವ ನಟಿ ರಾಧಿಕಾ ಆಪ್ಟೆ ಅವರು ತಮ್ಮಅಭಿನಯದ ಮೂಲಕವೇ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಮಾಂಜಿ: ದ ಮೌಂಟೇನ್ ಮ್ಯಾನ್​, ದ ಲಸ್ಟ್​ ಸ್ಟೋರೀಸ್​, ರಾತ್​ ಅಕೇಲಿ ಹೈ, ಪ್ಯಾಡ್ ​ಮ್ಯಾನ್​ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂನಲ್ಲೂ ನಟಿಸಿದ್ದಾರೆ ಈ ನಟಿ. ಇನ್ನು ದಕ್ಷಿಣ ಭಾರತದ ನಾಯಕ ಕುರಿತಾಗಿ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕವೂ ಈ ನಟಿ ಚರ್ಚೆಯಲ್ಲಿದ್ದರು.ನಟಿ ರಾಧಿಕಾ ಆಪ್ಟೆ ಅವರ ಜನನ 1985ರ ಸೆ.7ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಆಗಿದ್ದು. ​ರಾಧಿಕಾ ಅವರ ತಂದೆ ಡಾ. ಚಾರೂದದತ್​ ಆಪ್ಟೆ ಖ್ಯಾತ ನರ ತಜ್ಞರಾಗಿದ್ದಾರೆ.

ರಾಧಿಕಾ ಆಪ್ಟೆ ಅವರು ಹಿಂದಿ ಸಿನಿಮಾಗಳ ಜೊತೆಗೆ ಬಂಗಾಳಿ, ಮಲಯಾಳಂ, ಮರಾಠಿ, ತಮಿಳು ಹಾಗೂ ಇಂಗ್ಲಿಷ್​ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಧಿಕಾ ಆಪ್ಟೆ ಯಾವಾಗಲೂ ಕಮರ್ಷಿಯಲ್ ಹಾಗೂ ಕಲಾತ್ಮಕ ಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಯಾವುದೋ ಒಂದು ಕ್ಯಾಟಗರಿಗೆ ಸೀಮಿತರಾಗಿಲ್ಲ.

ರಾಧಿಕಾ  ಆಪ್ಟೆ


ರಾಧಿಕಾ ಆಪ್ಟೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಕಷ್ಟು ಸಲ ಈ ನಟಿ ವಿವಾದಕ್ಕೀಡಾಗಿದ್ದೂ ಇದೆ. ಈಗ ನಾವು ರಾಧಿಕಾ ಆಪ್ಟೆ ಅವರ ಸಿನಿಮಾ ಹಾಗೂ ವಿವಾದಗಳ ಬಗ್ಗೆ ಹೇಳಲಿದ್ದೇವೆ.

ಇದನ್ನೂ ಓದಿ: ಮಾದಕ ಲುಕ್​ನಿಂದ ಮತ್ತೇರಿಸಿದ ಕಣ್ಸನ್ನೆ ಹುಡುಗಿ Priya Prakash Varrier..!

ರಾಧಿಕಾ ಆಪ್ಟೆ ಅವರ ಮೊದಲ ಸಿನಿಮಾ (Radhika Apte Debut) 2005ರಲ್ಲಿ ವಾಹ್​ ಲೈಸ್​ ಹೋ ತೋ ಐಸಿ ಮೂಲಕ ಬಾಲಿವುಡ್​ ಎಂಟ್ರಿ ಆಯಿತು. 2016ರಲ್ಲಿ ರಿಲೀಸ್​ ಆದ ಪಾರ್ಡ್ಚ್​ ಸಿನಿಮಾದಿಂದ ಅವರ ನಗ್ನ ವಿಡಿಯೋ ಲೀಕ್​ ಆಗಿ ವಿವಾದಕ್ಕೀಡಾಗಿದ್ದರು ಈ ನಟಿ. ಸಾಲದಕ್ಕೆ ಟ್ರೋಲಿಗರ ಟ್ರೋಲ್​ಗಳಿಗೆ ಬಲಿಯಾಗಿದ್ದರು.

2017ರಲ್ಲಿ ರಾಧಿಕಾ ಆಪ್ಟೆ ಮತ್ತೊಂದು (Radhika Apte Controversy) ವಿವಾದಕ್ಕೆ ಸಿಲುಕಿಕೊಂಢಿದ್ದರು. ಅದು ಬಾತ್​ರೂಮ್​ನಲ್ಲಿ ಸ್ನಾನ ಮಾಡುವಾಗ ತೆಗೆದುಕೊಂಡಿ ಸೆಲ್ಫಿಗಳು ಲೀಕ್​ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಚಿತ್ರಗಳು ತನ್ನದಲ್ಲ. ನನ್ನಂತೆಯೇ ಕಾಣುವ ಬೇರೆ ಯಾವುದೋ ಮಹಿಳೇಯದ್ದು ಎಂದಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ Deepika Padukone..!

ರಾಧಿಕಾ ಆಪ್ಟೆ ಅವರ ನಗ್ನ ವಿಡಿಯೋ ಲೀಕ್​ (Radhika Apte Video Leak) ಆಗುವ ಘಟನೆಗಳು ಸಾಕಷ್ಟು ಸಲ ಆಗಿದೆ. 2017ರಲ್ಲಿ ಕ್ಲೀನ್ ಶೇವ್​ ಸಿನಿಮಾದ ವಿಡಿಯೋ ಸಹ ಲೀಕ್​ ಆಗಿತ್ತು. ಈ ವಿಡಿಯೋದಲ್ಲಿರುವುದು ತಾನಲ್ಲ ಎಂದು ಹೇಳಿದ್ದ ರಾಧಿಕಾ, ಇತ್ತೀಚೆಗೆ ಗ್ರಾಜಿಯಾ ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದಲ್ಲೂ ಇದನ್ನೇ ಹೇಳಿದ್ದರು. ರಾಧಿಕಾ ಆಪ್ಟೆ ಫೋಟೋಶೂಟ್​ (Radhika Apte Photoshoot) ಸಹ ಆಗಾಗ ಸುದ್ದಿಯಲ್ಲಿರುತ್ತವೆ. ನಟಿಯ ಬೋಲ್ಡ್​ ಹಾಗೂ ಹಾಟ್​ ಫೋಟೋಶೂಟ್​ಗಳು ಸಾಕಷ್ಟು ಸಲ ಟ್ರೋಲ್ ಆಗುವಂತೆ ಮಾಡಿದೆ.

ರಹಸ್ಯವಾಗಿ ಮದುವೆಯಾದ ನಟಿ

2012ರಲ್ಲಿ ರಾಧಿಕಾ ಆಪ್ಟೆ ರಹಸ್ಯವಾಗಿ ವಿವಾಹವಾಗಿದ್ದಾರೆ. ವಿದೇಶಿ ಮ್ಯೂಸಿಷಿಯನ್​ ಬೆನೆಡಿಕ್ಟ್​ ಟೇಲರ್​ ಎಂಬುವರ ಜೊತೆ ಮದುವೆಯಾದರು. ಈ ವಿಷಯ 2013ರಲ್ಲಿ ಬೆಳಕಿಗೆ ಬಂದಿತ್ತು. ರಾಧಿಕಾ ಮದುವೆಯಾದ ನಂತರವೂ ಹೆಚ್ಚಾಗಿ ಭಾರತದಲ್ಲೇ ಸಮಯ ಕಳೆಯುತ್ತಾರೆ. ಈ ವಿಷಯವಾಗಿಯೂ ಟ್ರೋಲ್​ ಆಗುತ್ತಿರುತ್ತಾರೆ ರಾಧಿಕಾ ಆಪ್ಟೆ.
Published by:Anitha E
First published: