HOME » NEWS » Entertainment » HAPPY BIRTHDAY PUNEETH RAJKUMAR JAMES RELEASED POSTER AND FEEL THE POWER SONG RELEASED FROM YUVARATHNAA AE

Yuvarathnaa-James: ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಸಿಕ್ತು ಯುವರತ್ನ-ಜೇಮ್ಸ್ ಚಿತ್ರತಂಡಗಳಿಂದ ಭರ್ಜರಿ ಗಿಫ್ಟ್​..!

Happy Birthday Puneeth Rajkumar: ಯುವರತ್ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ರಂಜಿಸುತ್ತಿದೆ. ಏ.1ರಂದು ರಿಲೀಸ್​ ಆಗಲಿರುವ ಯುವರತ್ನ ಸಿನಿಮಾದ ಫೀಲ್​ ದ ಪವರ್​ ಹಾಡು ಇಂದು ರಿಲೀಸ್​ ಆಗಿದೆ. ಈ ಹಾಡಿನಲ್ಲೂ ಪವರ್​ ಸ್ಟಾರ್​ ಫವರ್ ಫುಲ್​ ಸ್ಟೆಪ್ಸ್​ ಹಾಕಿದ್ದಾರೆ.

Anitha E | news18-kannada
Updated:March 17, 2021, 12:27 PM IST
Yuvarathnaa-James: ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಸಿಕ್ತು ಯುವರತ್ನ-ಜೇಮ್ಸ್ ಚಿತ್ರತಂಡಗಳಿಂದ ಭರ್ಜರಿ ಗಿಫ್ಟ್​..!
ಪುನೀತ್​ ರಾಜ್​ಕುಮಾರ್​
  • Share this:
ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಒಂದರ ಹಿಂದೆ ಒಂದರಂತೆ ಸಾಲು ಸಾಲು ಸರ್ಪ್ರೈಸ್​ಗಳು ಉಡುಗೊರೆಯಾಗಿ ಸಿಕ್ಕಿವೆ. ಪುನೀತ್​ ಹುಟ್ಟುಹಬ್ಬದಂದು ತಾನು ಮನೆಯಲ್ಲಿ ಇರುವುದಿಲ್ಲ ಅಭಿಮಾನಿಗಳು ಯಾರೂ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡುವ ಮೂಲಕ ಕಹಿ ಸುದ್ದಿ ನೀಡಿದ್ದರು. ಕೊರೋನಾ ಸೋಂಕಿನ ಆತಂಕದಿಂದಾಗಿ ಪುನೀತ್​ ಅಭಿಮಾನಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಒಂದು ಕಹಿ ಸುದ್ದಿ ಕೊಟ್ಟ ಪುನೀತ್​ ರಾಜ್​ಕುಮಾರ್​ ತಮ್ಮ ಅಭಿಮಾನಿ ದೇವರುಗಳಿಗಾಗಿ ಸಖತ್​ ಉಡುಗೊರೆಯನ್ನೇ ನೀಡಿದ್ದಾರೆ. ಪುನೀತ್ ಹಾಗೂ ದಿನಕರ್​ ತೂಗುದೀಪ ಅವರ ಕಾಂಬಿನೇಶನ್​ನಲ್ಇ ಮೂಡಿ ಬರಲಿದೆ ಹೊಸ ಸಿನಿಮಾ. ಪ್ರೊಡಕ್ಷನ್​ ನ. 24 ಹೆಸರಿನಲ್ಲಿ ಇಂದು ಈ ಸಿನಿಮಾ ಕುರಿತಾಗಿ ಅಧಿಕೃತ ಪ್ರಕಟಣೆಯಾಗಿದೆ. ಇದರ ಜೊತೆಗೆ ಪುನೀತ್​ ಅವರ ಯುವರತ್ನ ಸಿನಿಮಾದ ಫೀಲ್ ದ ಪವರ್​ ಹಾಡು ಹಾಗೂ ಜೇಮ್ಸ್​ ಚಿತ್ರದ  ಕಡೆಯಿಂದ ಬರ್ತ್​ ಡೇ ಪೋಸ್ಟರ್ ರಿಲೀಸ್​ ಮಾಡಲಾಗಿದೆ. ಹೀಗೆ ಅಪ್ಪು ಅಭಿಮಾನಿಗಳಿಗೆ ಉಡುಗೊರೆಯ ಸುರಿಮಳೆಯಾಗಿದೆ. 

ಯುವರತ್ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ರಂಜಿಸುತ್ತಿದೆ. ಏ.1ರಂದು ರಿಲೀಸ್​ ಆಗಲಿರುವ ಯುವರತ್ನ ಸಿನಿಮಾದ ಫೀಲ್​ ದ ಪವರ್​ ಹಾಡು ಇಂದು ರಿಲೀಸ್​ ಆಗಿದೆ. ಈ ಹಾಡಿನಲ್ಲೂ ಪವರ್​ ಸ್ಟಾರ್​ ಫವರ್ ಫುಲ್​ ಸ್ಟೆಪ್ಸ್​ ಹಾಕಿದ್ದಾರೆ.

Youtube Video


ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಈ ಸಿನಿಮಾದ ಫೀಲ್​ ದ ಪವರ್​ ಹಾಡಿಗೆ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ. ಈ ಹಾಡು ತೆಲುಗಿನಲ್ಲೂ ರಿಲೀಸ್ ಆಗಿದೆ. ತೆಲುಗಿನಲ್ಲಿ ಕಲ್ಯಾಣ್​ ಚಕ್ರವರ್ತಿ ಸಾಹಿತ್ಯಕ್ಕೆ ಗಾಯಕ ರೇವಂತ್​ ದನಿಯಾಗಿದ್ದಾರೆ.

Youtube Video


ಇನ್ನು ಚೇತನ್​ ಕುಮಾರ್ ನಿರ್ದೇಶನದ ಸಿನಿಮಾ ಜೇಮ್ಸ್​ ಶೂಟಿಂಗ್​ ಈಗಾಗಲೇ ಆರಂಭವಾಗಿದ್ದು ಇತ್ತೀಚೆಗಷ್ಟೆ ಚಿತ್ರತಂಡ ಕಾಶ್ಮೀರದಲ್ಲಿ ಶೂಟಿಂಗ್​ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದೆ. ಈಗ ಪುನೀತ್​ ಹುಟ್ಟುಹಬ್ಬಕ್ಕೆಂದು ಜೇಮ್ಸ್​ ಸಿನಿಮಾದ ಪೋಸ್ಟರ್​ ಅನ್ನು ರಿಲೀಸ್​ ಮಾಡಿದೆ.





ಕೈಯಲ್ಲಿ ಪಿಸ್ತೂಲ್​ ಹಿಡಿದು ಮಾಸ್​ ಲುಕ್​ನಲ್ಲಿ ಒಂದು ಕಡೆ ಮತ್ತೊಂದು ಕಡೆ ಸೂಟ್​ ಹಾಗೂ ಕೂಲಿಂಗ್​ ಗ್ಲಾಸ್​ ಹಾಕಿಕೊಂಡು ಸ್ಟೈಲಿಶ್ ಲುಕ್​ನಲ್ಲಿ ಹೀಗೆ ಎರಡು ಶೇಡ್​ಗಳಲ್ಲಿ ಪೋಸ್ಟರ್​ನಲ್ಲಿ ಮಿಂಚುತ್ತಿದ್ದಾರೆ ಪುನೀತ್​. ಈ ಪೋಸ್ಟರ್​ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.









ಪುನೀತ್​ ಹುಟ್ಟುಹಬ್ಬಕ್ಕೆ ಸಾಕಷ್ಟುಮಮಂದಿ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟಿರುವ ನಟ ಇಂದು ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Published by: Anitha E
First published: March 17, 2021, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories