HOME » NEWS » Entertainment » HAPPY BIRTHDAY PUNEETH RAJKUMAR JAMES POSTER WILL BE UNVEILED TOMORROW AE

Puneeth Rajkumar Birthday Poster: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್​ ಚಿತ್ರದ ಕಡೆಯಿಂದ ಸಿಗಲಿದೆ ಭರ್ಜರಿ ಉಡುಗೊರೆ..!

James Movie Poster: ಹುಟ್ಟುಹಬ್ಬದ ದಿನ ಪುನೀತ್ ಅವರನ್ನು ನೋಡಲು ಆಗುವುದಿಲ್ಲ ಎಂದು ಬೇಸರದಿಂದ ಇದ್ದ ಅಭಿಮಾನಿಗಳಿಗೆ ಜೇಮ್ಸ್​​ ಚಿತ್ರತಂಡ ಸಂತಸದ ಸುದ್ದಿಯೊಂದನ್ನು ನೀಡಿದೆ. ಅದು ನಾಳೆ ಬೆಳಿಗ್ಗೆ ಜೇಮ್ಸ್ ಸಿನಿಮಾದಿಂದ ಪುನೀತ್​ ಅವರ ಪೋಸ್ಟರ್​ ಅನ್ನು ರಿಲೀಸ್​ ಮಾಡಲಾಗುತ್ತಿದೆ.

Anitha E | news18-kannada
Updated:March 16, 2021, 2:50 PM IST
Puneeth Rajkumar Birthday Poster: ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್​ ಚಿತ್ರದ ಕಡೆಯಿಂದ ಸಿಗಲಿದೆ ಭರ್ಜರಿ ಉಡುಗೊರೆ..!
ಪುನೀತ್​ ರಾಜ್​ಕುಮಾರ್​
  • Share this:
ನಾಳೆ (ಮಾ.17) ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ. ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಪುನೀತ್​ ರಾಜ್​ಕುಮಾರ್​ ಅವರು ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿಲ್ಲ. ಈ ಸಲವೂ ಸಹ ಹುಟ್ಟುಹಬ್ಬದಂದು ತಾನು ಮನೆಯಲ್ಲಿ ಇರುವುದಿಲ್ಲ ಎಂದು ಹೇಳುವ ಮೂಲಕ ಮತ್ತೆ ಅಭಿಮಾನಿಗಳಿಗೆ ಬೇಸರ ಮಾಡಿದ್ದಾರೆ. ದಯವಿಟ್ಟು ನಾಳೆ ಯಾರೂ ಮನೆಯ ಬಳಿ ಬರಬೇಡಿ, ತಾನು ಮನೆಯಲ್ಲಿ ಇರುವುದಿಲ್ಲ.  ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗಲಿದ್ದೇನೆ ಎಂದಿದ್ದಾರೆ. ಅಭಿಮಾನಿಗಳಿಗೆ ಬೇಸರ ಮಾಡಲು ಇಷ್ಟಪಡದ ಅಪ್ಪು, ನೀವು ನನ್ನ ಬಳಿ ಬರುವುದು ಬೇಡ, ತಾನೇ ನಿಮ್ಮ ಬಳಿ ಬರಲಿದ್ದೇನೆ ಅಂತ ಒಂದು ಖುಷಿಯ ವಿಷಯ ಹಂಚಿಕೊಟ್ಟಿದ್ದಾರೆ. ಕೊರೋನಾ ಕಾರಣದಿಂದಾಗಿ ಅಭಿಮಾನಿಗಳು ಪುನೀತ್ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲತಾಣದಲ್ಲಿ ಅದ್ಧೂರಿಯಾಗಿ ಆಚರಿಸಿಲು ನಿರ್ಧರಿಸಿದ್ದಾರೆ. ಈಗಾಗಲೇ ಪುನೀತ್​ ಅವರ ಹುಟ್ಟುಹಬ್ಬದ ಕಾಮನ್​ ಡಿಪಿ (ಸಿಡಿಪಿ) ರಿಲೀಸ್ ಮಾಡಲಾಗಿದೆ. 

ಹುಟ್ಟುಹಬ್ಬದ ದಿನ ಪುನೀತ್ ಅವರನ್ನು ನೋಡಲು ಆಗುವುದಿಲ್ಲ ಎಂದು ಬೇಸರದಿಂದ ಇದ್ದ ಅಭಿಮಾನಿಗಳಿಗೆ ಜೇಮ್ಸ್​​ ಚಿತ್ರತಂಡ ಸಂತಸದ ಸುದ್ದಿಯೊಂದನ್ನು ನೀಡಿದೆ. ಅದು ನಾಳೆ ಬೆಳಿಗ್ಗೆ ಜೇಮ್ಸ್ ಸಿನಿಮಾದಿಂದ ಪುನೀತ್​ ಅವರ ಪೋಸ್ಟರ್​ ಅನ್ನು ರಿಲೀಸ್​ ಮಾಡಲಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಈ ಪೋಸ್ಟರ್​ ರಿಲೀಸ್​ ಮಾಡಲು ಜೇಮ್ಸ್​ ಚಿತ್ರತಂಡ ನಿರ್ಧರಿಸಿದೆ.





ಚೇತನ್​ ಕುಮಾರ್​ ನಿರ್ದೇಶನದ ಜೇಮ್ಸ್​ ಸಿನಿಮಾದ ಚಿತ್ರೀಕರಣದ ಇತ್ತೀಚೆಗಷ್ಟೆ ಕಾಶ್ಮೀರದಲ್ಲಿ ನಡೆದಿತ್ತು. ಕಾಶ್ಮೀರದಲ್ಲಿ ಶೆಡ್ಯೂಲ್​ ಮುಗಿಸಿದ ನಂತರ ಮತ್ತೆ ಬೆಂಗಳೂರಿಗೆ ಮರಳಿರುವ ಈ ತಂಡ ಪುನೀತ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡುವ ತಯಾರಿಯಲ್ಲಿದೆ.









ಇನ್ನು ಪುನೀತ್​ ರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಯುವರತ್ನ ಬಗ್ಗೆ ಮಾತನಾಡುವುದಾದರೆ, ನಿನ್ನೆ ಸಂಜೆ ತಮ್ಮ ಫೇಸ್​ಬುಕ್ ಪುಟದಿಂದ ಲೈವ್​ ಬಂದಿದ್ದ ಪುನೀತ್ ರಾಜ್‍ಕುಮಾರ್ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮಕೊಟ್ಟ ನಟಿ ಮಯೂರಿ: ಇಲ್ಲಿದೆ ಮಗುವಿನ ಫೋಟೋ..!

ಮೊದಲಿಗೆ ಹುಟ್ಟುಹಬ್ಬದ ಆಚರಣೆ ಕುರಿತಂತೆ ಬೇಸರದ ಸುದ್ದಿ ಕೊಟ್ಟ ಅಪ್ಪು, ನಂತರ ಮೈಸೂರಿನಲ್ಲಿ ನಡೆಯಲಿರುವ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿಯೂ ತಿಳಿಸಿದ್ದಾರೆ. ಏಪ್ರಿಲ್ 1ರಂದು ಯುವರತ್ನ ಚಿತ್ರ ರಿಲೀಸ್ ಹಿನ್ನಲೆ ಇದೇ ತಿಂಗಳು ಅಂದರೆ ಮಾ. 20ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಪ್ರೀ ರಿಲೀಸ್ ಈವೆಂಟ್ ಯುವ ಸಂಭ್ರಮ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರಾಜ್ಯದ ಎಲ್ಲ ಭಾಗದ ಅಭಿಮಾನಿಗಳು ತಮ್ಮ ಊರುಗಳಿಗೆ ಬರುವಂತೆ ಮನವಿ ಮಾಡಿದ್ದಾರೆ. ಈ ಕಾರಣದಿಂದಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.



ಯುವಸಂಭ್ರಮ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುವುದನ್ನು ರದ್ದುಗೊಳಿಸಲಾಗಿದೆ. ಆದರೆ ಇದೇ ತಿಂಗಳು 21ರಿಂದ 23ರ ವರೆಗೆ ನಾವೇ ನಿಮ್ಮ ಊರುಗಳಿಗೆ ಬರುತ್ತೇವೆ. ನಾನೇ ನಿಮ್ಮನ್ನು ನೋಡಲು ನಿಮ್ಮ ನಿಮ್ಮ ಜಿಲ್ಲೆಗಳಿಗೆ ಬರುತ್ತೇವೆ. ನಿಮ್ಮ ಊರಿಗೆ ನಿಮ್ಮ ಅಪ್ಪು... ಹರಸಿ ಹಾಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಯುವರತ್ನ ಪುನೀತ್.

ಇದನ್ನೂ ಓದಿ: Puneeth Rajkumar: ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ಪುನೀತ್​ ರಾಜ್​ಕುಮಾರ್​: ನಿಮ್ಮ ಊರಿಗೆ ನಿಮ್ಮ ಅಪ್ಪು..!

ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಸಿನಿಮಾ ಯುವರತ್ನ ಈಗಾಗಲೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಈಗ ಪ್ರೀ-ರಿಲೀಸ್​ ಇವೆಂಟ್​ ತಯಾರಿಯಲ್ಲಿದೆ. ರಾಜಕುಮಾರ ಸಿನಿಮಾದ ನಂತರ ಸಂತೋಷ್​ ಆನಂದ್​ ರಾಮ್​ ಹಾಗೂ ಪುನೀತ್ ರಾಜ್​ಕುಮಾರ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ.
Published by: Anitha E
First published: March 16, 2021, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories