ಅಪ್ಪು ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ

ಅಪ್ಪು ಹುಟ್ಟುಹಬ್ಬಕ್ಕೆ ದಿನ ಗಣನೆ ಶುರುವಾಗಿದೆ. ಆಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಅಬ್ಬರವೂ ಆರಂಭವಾಗಿದೆ. ಪ್ರೀತಿಯ ನಟನಿಗೆ ಹುಟ್ಟುಹಬ್ಬಕ್ಕೆ ಏನೆಲ್ಲ ಉಡುಗೊರೆಯನ್ನು ಯಾರ್ಯಾರು ನೀಡುತ್ತಿದ್ದಾರೆ ಗೊತ್ತಾ..?

Anitha E | news18
Updated:March 15, 2019, 5:17 PM IST
ಅಪ್ಪು ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ
ಪುನೀತ್ ಹುಟ್ಟುಹಬ್ಬದಂದೇ 'ಯುವರತ್ನ' ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ
Anitha E | news18
Updated: March 15, 2019, 5:17 PM IST
- ಅನಿತಾ ಈ, 

ಸ್ಟಾರ್​ ನಟ ಹುಟ್ಟುಹಬ್ಬ ಎಂದರೆ ಸಾಕು ಅದರ ಆಚರಣೆ ಹಾಗೂ ಸಂಭ್ರಮಕ್ಕೆ ಕಿಕ್​ ಸ್ಟಾರ್ಟ್​ ಸಿಗೋದೇ ಸಾಮಾಜಿಕ ಜಾಲತಾಣದಲ್ಲಿ. ಅಭಿಮಾನಿಗಳು ತಿಂಗಳು ಮುಂಚಿತವಾಗಿಯೇ ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಗೂ ವಿಡಿಯೋಗಳನ್ನು ಪ್ರಕಟಿಸೋಕೆ ಆರಂಭಿಸುತ್ತಾರೆ.

ಇದನ್ನೂ ಓದಿ: #Karthi19: ಕಾಲಿವುಡ್​ಗೆ ಕಾಲಿಟ್ಟ ಕಿರಿಕ್​ ಹುಡುಗಿ: ಸೆಟ್ಟೇರಿತು ಕಾರ್ತಿ-ರಶ್ಮಿಕಾರ ತಮಿಳು ಸಿನಿಮಾ

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಮಾರ್ಚ್ 17ಕ್ಕೆ ಅದ್ಧೂರಿಯಾಗಿ ಅಪ್ಪು ಬರ್ತ್‍ಡೇ ಆಚರಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಇದಕ್ಕೆ ತಕ್ಕಂತೆ ನಿರ್ದೇಶಕ ಪವನ್ ಒಡೆಯರ್ ಕೂಡ ವಿಶೇಷ ಉಡುಗೊರೆ ನೀಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ನಟಸಾರ್ವಭೌಮ ಸಿನಿಮಾದ ಟೈಟಲ್ ಟ್ರ್ಯಾಕ್ ಎಲ್ಲರಿಗೂ ಹಿಡಿಸಿದೆ. ಇದೇ ಹಾಡಿಗೆ ಬೇರೆ ಸಾಹಿತ್ಯ ಬರೆದು ಅಪ್ಪು ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಿದ್ದಾರೆ. ಅದು ಸಹ ನಾಳೆ (ಮಾ.16) ಮಧ್ಯ ರಾತ್ರಿ ಎಂದು ಪವನ್​ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಪುನೀತ್​ ಹುಟ್ಟುಹಬ್ಬಕ್ಕಾಗಿ ವಿಶೇಷ ವಿಡಿಯೋ ಒಂದನ್ನು ಸಿದ್ದಪಡಿಸಿಕೊಂಡಿದ್ದು, ಅದನ್ನು ಮಾ.16ರಂದು ಸಂಜೆ ಬಿಡುಗಡೆ ಮಾಡಲಿದ್ದಾರೆ.

 ಇನ್ನು ರಾಜ್ಯದ ಮೂಲೆಗಳಿಂದ ಬರಲಿರುವ ಅಭಿಮಾನಿಗಳು ನೆಚ್ಚಿನ ಅಪ್ಪುಗಾಗಿ ಪ್ರೀತಿಯ ಉಡುಗೊರೆಯನ್ನು ತರಲಿದ್ದಾರೆ. ಅದರಂತೆ ಪುನೀತ್​ ಸಹ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.

PHOTOS: ತಮಿಳು ನಟ ಕಾರ್ತಿಗೆ #Karthi19 ಸಿನಿಮಾ ಸೆಟ್​ನಲ್ಲಿ ಜೊತೆಯಾದ ರಶ್ಮಿಕಾ ಮಂದಣ್ಣ..!


 
First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ