HOME » NEWS » Entertainment » HAPPY BIRTHDAY PRIYANKA UPENDRA UGRAVATARA MOVIE MOTION POSTER RELEASED TODAY AE

Happy Birthday Priyanka Upendra: ಪೊಲೀಸ್​ ಅಧಿಕಾರಿಯಾಗಿ ಉಗ್ರಾವತಾರ ತಾಳಿದ ಪ್ರಿಯಾಂಕಾ ಉಪೇಂದ್ರ..!

ಎಂಕೆ ಪಿಕ್ಚರ್ಸ್​ ಬ್ಯಾನರ್​ ಅಡಿ ಸಿದ್ಧಗೊಳ್ಳುತ್ತಿರುವ ಉಗ್ರಾವತಾರ ಸಿನಿಮಾವನ್ನು ಗುರುಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಮುನಿಕೃಷ್ಣ ನಿರ್ಮಾಣದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

Anitha E | news18-kannada
Updated:November 12, 2020, 10:53 AM IST
Happy Birthday Priyanka Upendra: ಪೊಲೀಸ್​ ಅಧಿಕಾರಿಯಾಗಿ ಉಗ್ರಾವತಾರ ತಾಳಿದ ಪ್ರಿಯಾಂಕಾ ಉಪೇಂದ್ರ..!
ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ
  • Share this:
ನಗುಮುಖದ ಸುಂದರಿ ಪ್ರಿಯಾಂಕಾ ಉಪೇಂದ್ರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕುಟುಂಬದೊಂದಿಗೆ ಇಂದು 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದದಲ್ಲಿ ಕೇಕ್ ಕತ್ತರಿಸುವ ಮೂಲಕ  ಬರ್ತ್​ಡೇ ಯನ್ನು ಸಂಭ್ರಮಿಸಿದ್ದಾರೆ. ಪ್ರಿಯಾಂಕಾ ಹುಟ್ಟುಹಬ್ಬದ ಉಡುಗೊರೆಯಾಗಿಯೇ  ಖೈಮರಾ ಚಿತ್ರತಂಡ ಒಂದು ದಿನ ಮುಂಚಿತವಾಗಿ ಚಿತ್ರದ  ಟೈಟಲ್ ಮೋಷನ್ ಪೋಸ್ಟರ್ ಲಾಂಚ್ ಮಾಡಿದೆ. ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಸಹ ನೀಡಿದೆ ಖೈಮರಾ ಚಿತ್ರತಂಡ. ಇದರ ಜೊತೆಗೆ ಇಂದು ಬೆಳಿಗ್ಗೆ ಪ್ರಿಯಾಂಕಾ ಉಪೇಂದ್ರ ಅಭಿನಯದ ಹೊಸ ಸಿನಿಮಾದ ಮತ್ತೊಂದು ಮೋಷನ್​ ಪೋಸ್ಟರ್ ಸಹ ರಿಲೀಸ್​ ಮಾಡಲಾಯಿತು. ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಉಗ್ರಾವತಾರ ತಾಳಿದ್ದಾರೆ. ಈ ಸಿನಿಮಾಗಾಗಿ ಪ್ರಿಯಾಂಕಾ ಉಪೇಂದ್ರ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಜಿಮ್​ನಲ್ಲಿ ಬೆವರಿಳಿಸಿ, ಸಖತ್​ ವರ್ಕೌಟ್​ ಮಾಡಲಾರಂಭಿಸಿದ್ದರು. 

ಎಂಕೆ ಪಿಕ್ಚರ್ಸ್​ ಬ್ಯಾನರ್​ ಅಡಿ ಸಿದ್ಧಗೊಳ್ಳುತ್ತಿರುವ ಉಗ್ರಾವತಾರ ಸಿನಿಮಾವನ್ನು ಗುರುಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಮುನಿಕೃಷ್ಣ ನಿರ್ಮಾಣದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Ugravathara Motion Poster, Police office Priyanka Upendra, Priyanka Upendra, ಪ್ರಿಯಾಂಕ ಉಪೇಂದ್ರ, Happy Birthday Priyanka Upendra, Priyanka Upendra birthday, Priyanka Upendra age, Priyanka Upendra turns 44, Priyanka Upendra movies, Khaimara, Priyanka Upendra songs, Priyanka Upendra photos, Priyanka Upendra hot, Priyanka Upendra Malla, Priyanka Upendra with ravichandran, Priyanka Upendra son, Priyanka Upendra daughter, ಪ್ರಿಯಾಂಕಾ ಉಪೇಂದ್ರ, ಉಪೇಂದ್ರ, 43ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಉಪೇಂದ್ರ ಉಗ್ರಾವತಾರ ಮೋಷನ್​ ಪೋಸ್ಟರ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ, Happy Birthday Priyanka Upendra Ugravatara movie motion poster released today
ಉಗ್ರಾವತಾರ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ


ಪ್ರಿಯಾಂಕಾ ಉಪೇಂದ್ರ ಈ ಪಾತ್ರಕ್ಕಾಗಿ ಸಖತ್​ ಶ್ರಮಪಟ್ಟಿದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲು ಜಿಮ್​ ತರಬೇತುದಾರರನ ಬಳಿ ತರಬೇತಿ ಪಡೆದಿದ್ದಾರೆ. ಪೊಲೀಸ್​ ಅಧಿಕಾರಿಯ ಪಾತ್ರಕ್ಕಾಗಿ ಬೇಕಾದ ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ.

ಇನ್ನು, ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ  ಹೊಸ ಮಲ್ಟಿಸ್ಟಾರರ್‌ ಸಿನಿಮಾ 'ಖೈಮರಾ'. ಹೆಸರಾಂತ ನಿರ್ದೇಶಕ ಪಿ. ವಾಸು ಅವರ ಸಂಬಂಧಿ ಗೌತಮ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಚೊಚ್ಚಲ ಸಿನಿಮಾ. ಪ್ರಿಯಾಂಕಾ ಉಪೇಂದ್ರ ಅವರ ಜೊತೆಗೆ ಪ್ರಿಯಾಮಣಿ ಹಾಗೂ ಛಾಯಾ ಸಿಂಗ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ತಮಿಳಿನ ಖ್ಯಾತ ನಿರ್ಮಾಪಕ ಮತಿಯಾಳಗನ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಹಾಗೂ ನಿರ್ಮಾಪಕರಾಗಿಯೂ ಎಂಟ್ರಿ ಕೊಡುತ್ತಿದ್ದಾರೆ.ವಿಭಿನ್ನ ಟೈಟಲ್‌ನ ಖೈಮರಾ ಸಿನಿಮಾ ಸಸ್ಪೆನ್ಸ್‌ ಥ್ರಿಲ್ಲರ್‌ ಹಾಗೂ ಹಾರರ್‌ ಕಥಾಹಂದರ ಹೊಂದಿದ್ದು, ಡಿಸೆಂಬರ್‌ ತಿಂಗಳಿನಿಂದ ಶೂಟಿಂಗ್‌ ಪ್ರಾರಂಭವಾಗಲಿದೆ. ಬೆಂಗಳೂರು ಹಾಗೂ ಕೊಡಗಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಗುರುಕಿರಣ್‌ ಸಂಗೀತ ನೀಡಿದ್ದು, ವಿಷ್ಣು ರಾಮಕೃಷ್ಣನ್‌ ಛಾಯಾಗ್ರಹಣ, ಶ್ರೀಕಾಂತ್‌ ಸಂಕಲನ, ಮೋಹನ್‌ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್‌ ಸಾಹಸ ಸಂಯೋಜನೆ ಇರಲಿದೆ.
Published by: Anitha E
First published: November 12, 2020, 10:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories