ಸ್ಯಾಂಡಲ್ ವುಡ್ ಪವರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 45ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ರಾಜರತ್ನೋತ್ಸವ ಇಲ್ಲದಿರುವುದೊಂದನ್ನು ಬಿಟ್ಟು ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಇದರ ಹೊರತಾಗಿಯೂ ಅಪ್ಪು ಅಭಿಮಾನಿಗಳಿಗೆ 'ಯುವರತ್ನ'ನ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದ್ದು, ಅಪ್ಪು-ಡಾಲಿ ಜುಗಲ್ ಬಂದಿಯಲ್ಲಿ ಮೂಡಿ ಬಂದಿರುವ ಬರ್ತ್ ಡೇ ಡೈಲಾಗ್ ಟೀಸರ್ ಈಗಾಗಲೇ ಪವರ್ ಫ್ಯಾನ್ಸ್ ನ ಮೋಡಿ ಮಾಡಿದೆ.
ಹಾಗೆಯೇ ಇಂದು ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಲಿದ್ದು, ಅಪ್ಪುವಿನ ಮತ್ತೊಂದು ಝಲಕ್ ತೋರಿಸಲುನಿರ್ದೇಶಕ ಬಹದ್ದೂರ್ ಚೇತನ್ ರೆಡಿಯಾಗಿದ್ದಾರೆ. ಇಷ್ಟೇ ಅಲ್ಲದೇ ಪವರ್ ಸ್ಟಾರ್ ಅಭಿನಯಿಸಲಿರುವ ಒಂದಷ್ಟು ಚಿತ್ರಗಳೂ ಕೂಡ ಅನೌನ್ಸ್ ಆಗಲಿದೆ ಎನ್ನಲಾಗಿದೆ.
ಇವೆಲ್ಲದರ ನಡುವೆ ವರುಣ್ ಸ್ಟುಡಿಯೋಸ್ ಬಿಡುಗಡೆ ಮಾಡಿರುವ ಪವರ್ ಸ್ಟಾರ್ ಬರ್ತ್ ಡೇ ವಿಶೇಷ ವಿಡಿಯೋ ಅಭಿಮಾನಿಗಳನ್ನು ಸೆಳೆಯುತ್ತಿದೆ. ದೊಡ್ಮನೆಯ ಮಾಸ್ಟರ್ ಲೋಹಿತ್ ಅದೇಗೆ ಪವರ್ ಸ್ಟಾರ್ ಆಗಿ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಕಿಂಗ್ ಆದರು ಎಂದು ತಿಳಿಸುವ ಈ ವಿಶೇಷ ವಿಡಿಯೋ ನೀವು ನೋಡಲೇಬೇಕು...
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ