Puneeth Rajkumar: `ರಾಜರತ್ನ’ನಿಲ್ಲದೇ ಮೊದಲ ಹುಟ್ಟುಹಬ್ಬ.. ನಮ್ಮಿಂದ ದೂರಾದರೂ 'ಜೇಮ್ಸ್​' ಅವತಾರದಲ್ಲಿ ರಂಜಿಸಿದ ಅಪ್ಪು!

ಅಕ್ಟೋಬರ್​ 29ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂತ ಘಟನೆ ನಡೆದು ಹೋಗಿತ್ತು. ದೊಡ್ಮನೆಯ ಕೊನೆಯ ಕುಡಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆ.

ನಟ ಪುನೀತ್​​ ರಾಜ್​ಕುಮಾರ್​

ನಟ ಪುನೀತ್​​ ರಾಜ್​ಕುಮಾರ್​

  • Share this:
ಅಪ್ಪು (Appu), ಅಭಿ (Abhi), ಆಕಾಶ್(Akash)​, ವೀರ ಕನ್ನಡಿಗ (Veera Kannadiga), ಮೌರ್ಯ (Mourya), ಆಕಾಶ್ ​(Akash), ನಮ್ಮ ಬಸವ (Namma Basava), ಅಜಯ್ (Ajay)​, ಅರಸು (Arasu), ಮಿಲನ (Milana), ಬಿಂದಾಸ್ (Bindas)​​, ವಂಶಿ(Vamsi), ರಾಜ್ (Raaj)​, ಪೃಥ್ವಿ (Pruthvi), ರಾಮ್ ​(Ram), ಜಾಕಿ (Jackie), ಹುಡುಗರು (Hudugaru), ಪರಮಾತ್ಮ (Paramathma), ಅಣ್ಣಾ ಬಾಂಡ್ (Anna Bond), ಯಾರೇ ಕೂಗಾಡಲಿ (Yaree Koogadali), ನಿನ್ನಿಂದಲೇ  (Ninnindale), ಮೈತ್ರಿ (Mythri), ಪವರ್ (Power)​, ರಣ ವಿಕ್ರಮ (Rana Vikram), ಚಕ್ರವ್ಯೂಹ (Chakravyuha), ದೊಡ್ಮನೆ ಹುಡುಗ (Dodamane Huduga), ರಾಜಕುಮಾರ (Rajakumar), ಅಂಜನಿ ಪುತ್ರ (Anjani Putra), ನಟಸಾರ್ವಭೌಮ (Natasarvabouma), ಯುವರತ್ನ (Yuvarathna), ಜೇಮ್ಸ್ ​(James), ಮುಂದೆ ಮತ್ತೆ ಇನ್ನು ಯಾವುದಾದರೂ ಸಿನಿಮಾ ಬಂದು ಬಿಡಲಿ ಅಂತ ನೀವು ಅಂದುಕೊಂಡಿಲ್ಲ ಅಂತ ಮನಸ್ಸು ಮುಟ್ಟಿಕೊಂಡು ಹೇಳಿ. ನೀವು ಮಾತ್ರ ಅಲ್ಲ, ರಾಜ್ಯದ ಪ್ರತಿಯೊಬ್ಬರು ಕೂಡ ಅಂದುಕೊಂಡಿರುತ್ತಾರೆ. ಯಾಕೆಂದರೆ ನಮಗ್ಯಾರಿಗೂ ಅಪ್ಪು ನಮ್ಮ ಜೊತೆ ಇಲ್ಲ ಎಂದು ನೆನೆಪಿಸಿಕೊಳ್ಳುವುದಕ್ಕೂ ಇಷ್ಟವಿಲ್ಲ. ಪವರ್​ ಸ್ಟಾರ್ ​(Power Star) ಪುನೀತ್​ ರಾಜ್​ಕುಮಾರ್​ ಇನ್ನೂ ನಮ್ಮ ಜೊತೆಯೆ ಇದ್ದಾರೆ. ಅಭಿಮಾನಿಗಳ ಹೃದಯ ಸಿಂಹಾಸನವೇರಿ ಕೂತಿದ್ದಾರೆ. ಇಂದು ‘ರಾಜರತ್ನ’ನಿಗೆ ಜನ್ಮದಿನದ ಸಂಭ್ರಮ.

‘ಯುವರತ್ನ’ನಿಲ್ಲದ ಮೊದಲ ಹುಟ್ಟುಹಬ್ಬ!

ಅಕ್ಟೋಬರ್​ 29ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂತ ಘಟನೆ ನಡೆದು ಹೋಗಿತ್ತು. ದೊಡ್ಮನೆಯ ಕೊನೆಯ ಕುಡಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆ. ನಿನ್ನೆ ತಡರಾತ್ರಿಯಿಂದಲೇ ಅಪ್ಪು ಮನೆ ಮುಂದೆ ಜನಸಾಗರ ಸೇರುತ್ತಿತ್ತು. ಆದರೆ, ದೈವ ಇಚ್ಛೆಯೇ ಬೇರೆಯಾಗಿತ್ತು. ಇಂದು ಅಪ್ಪು ನಮ್ಮ ಜೊತೆ ದೈಹಿಕವಾಗಿ ಇರದೇ ಹೋದರು, ನಮ್ಮ ಜೊತೆ ಇದ್ದೆ ಇರುತ್ತಾರೆ. ಇಂದು ಅಪ್ಪು ಇದ್ದಿದ್ದರೆ 47ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅಪ್ಪು ಇಲ್ಲದೇ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಾ, ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಅಭಿಮಾನಿಗಳು.

ಜೇಮ್ಸ್​ ಮೂಲಕ ರಂಜಿಸಿದ ಅಪ್ಪು!

ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಮ್ಮಿಂದ ದೂರಾಗಿದ್ದರೂ, ಇಂದು ನಮ್ಮನ್ನೆಲ್ಲ ರಂಜಿಸುತ್ತಿದ್ದಾರೆ. ಜೇಮ್ಸ್​ ಸಿನಿಮಾದ ಮೂಲಕ ಇಂದು ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿರುವ ಅಪ್ಪು ನೋಡಿ ಎಲ್ಲರೂ ಮತ್ತೆ ಕಣ್ಣೀರಿಡುತ್ತಿದ್ದಾರೆ. ಅಪ್ಪು ಅವರ ಅಭಿನಯ, ಡ್ಯಾನ್ಸ್, ಫೈಟ್​ ಎಲ್ಲವೂ ಜೇಮ್ಸ್​ ಸಿನಿಮಾದಲ್ಲಿ ಅದ್ಭುತವಾಗಿದೆ. ಅದನ್ನೆಲ್ಲ ಕಂಡು ಅಪ್ಪು ಅಭಿಮಾನಿಗಳು ಚಿತ್ರಮಂದಿರದಲ್ಲೇ ಕೊರಗುತ್ತಿದ್ದಾರೆ. ಅಪ್ಪು ಪ್ಲೀಸ್​​ ವಾಪಸ್​ ಬಂದು ಬಿಡಿ ಅಂತ ಬೆಳ್ಳೆ ಪರದೆ ಬಳಿ ಕಿರುಚಾಡುತ್ತಿದ್ದಾರೆ.

ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೂ ಮುನ್ನ ಡಬಲ್ ಗಿಫ್ಟ್​! `ಪವರಿಸಮ್’ - `ಮಹಾನುಭಾವ’ ಸಾಂಗ್ ರಿಲೀಸ್

2000 ಸಾವಿರ ಸ್ಕ್ರೀನ್​​ಗಳಲ್ಲಿ ರಿಲೀಸ್ ಆಯ್ತು ಜೇಮ್ಸ್​!

ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಪುಲ್​​ ಬೋರ್ಡ್(Houseful Board) ರಾರಾಜಿಸುತ್ತಿದೆ. ಒಂದೇ ದಿನ ಸುಮಾರು 2000 ಸ್ಕ್ರೀನ್​​ಗಳಲ್ಲಿ‘ಜೇಮ್ಸ್’ ರಿಲೀಸ್ ಆಗಿದೆ. ಅಪ್ಪುಇಲ್ಲದ ನೋವಿನ ನಡುವೆಯೂ ಪವರ್ ಸ್ಟಾರ್ ಹುಟ್ಟು ಹಬ್ಬ(Power Star Puneeth Rajkumar Birthday)ಕ್ಕೆ ‘ಜೇಮ್ಸ್’ ರಿಲೀಸ್ ಆಗಿರುವ ಕಾರಣ ಡಿಮ್ಯಾಂಡ್​ ಹೆಚ್ಚಾಗಿದೆ. ಅಲ್ಲದೆ ಫಸ್ಟ್ ಟೈಂ ಪುನೀತ್ ರಾಜ್​​ಕುಮಾರ್ ಅಭಿನಯದ ಸಿನಿಮಾ ಕೆಜಿ ರಸ್ತೆಯಲ್ಲಿ ಎರಡು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದೆ. ಮೆಜೆಸ್ಟಿಕ್​ನ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಿ ಅಬ್ಬರಸುತ್ತಿದೆ.

ಇದನ್ನೂ ಓದಿ: ಸೈಡಿಗ್​ ಹೋಗು.. ಸೈಡಿಗ್​ ಹೋಗು `ಜೇಮ್ಸ್​’ ಬರ್ತವ್ರೆ.. ರೆಕಾರ್ಡ್​ಗಳನ್ನೆಲ್ಲ ಉಡೀಸ್​​ ಮಾಡ್ತಾರೆ!

ಪುನೀತ್ ರಾಜ್​ಕುಮಾರ್​ಗೆ ಸರಿಸಾಟಿ ಯಾರು ಇಲ್ಲ!

ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಅಬ್ಬರ ಕಂಡು ಎಲ್ಲರು ದಂಗಾಗಿ ಹೋಗಿದ್ದಾರೆ. ಅಪ್ಪು ಅಭಿನಯದಲ್ಲೇ ಬೆಸ್ಟ್​ ಪರ್ಫಾಮೆನ್ಸ್​ ಅಂತಿದ್ದಾರೆ ಅಭಿಮಾನಿಗಳು. ಈ ಕ್ಷಣದಲ್ಲಿ ನಮ್ಮ ಜೊತೆ ಬಾಸ್​ ಇಲ್ವಲ್ಲಾ ಅಂತ ಎದೆ ಒಡೆದು ಕೊಂಡು ಕಣ್ಣೀರಿಡುತ್ತದ್ದಾರೆ. ಇಡೀ ಕರುನಾಡಿನ  ಮುಂದೆ ದೇವರು ಬಂದು ಏನು ವರ ಬೇಕು ಎಂದು ಕೇಳಿದರೆ, ಎಲ್ಲರೂ ಅಪ್ಪುನಾ ವಾಪಸ್ ಕಳಿಸಿ ಎಂದು ಬೇಡಿಕೊಳ್ಳುತ್ತಾರೆ. ಅದೇನೆ ಇರಲಿ ಅಪ್ಪು ಇಂದಿಗೂ ಜೀವಂತ ಎಂದೆಂದಿಗೂ ಜೀವಂತ.. ಅಪ್ಪು ಹುಟ್ಟುಹಬ್ಬದ ಶುಭಾಶಯಗಳು.. ವಿ ಮಿಸ್​ ಯೂ..
Published by:Vasudeva M
First published: