• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Puneeth Rajkumar Birthday: ಮರೆವೆನೆಂದರೂ ಮರೆಯಲಾಗದ 'ರಾಜರತ್ನ' ಅಪ್ಪು, ಕನ್ನಡಿಗರ ಮನೆದೇವರಾಗಿ ಕುಳಿತ ಪರಮಾತ್ಮ!

Puneeth Rajkumar Birthday: ಮರೆವೆನೆಂದರೂ ಮರೆಯಲಾಗದ 'ರಾಜರತ್ನ' ಅಪ್ಪು, ಕನ್ನಡಿಗರ ಮನೆದೇವರಾಗಿ ಕುಳಿತ ಪರಮಾತ್ಮ!

ಅಪ್ಪು

ಅಪ್ಪು

Appu Birthday: ಕರ್ನಾಟಕದ ಪ್ರತಿಯೊಬ್ಬರು ಈ ದಿನವನ್ನು 2 ವರ್ಷಗಳ ಹಿಂದೆ ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದರು. ಈಗಲೂ ಅದೇ ಸಂಭ್ರಮ ಇದೆ. ಆದರೆ  ಅಪ್ಪು ನಮ್ಮ ಜೊತೆ ಇಲ್ವಲ್ಲಾ ಅನ್ನೋ ನೋವು ಕೂಡ ಕಾಡ್ತಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಅಪ್ಪು (Appu), ಅಭಿ (Abhi), ಆಕಾಶ್(Akash)​, ವೀರ ಕನ್ನಡಿಗ (Veera Kannadiga), ಮೌರ್ಯ (Mourya), ಆಕಾಶ್ ​(Akash), ನಮ್ಮ ಬಸವ (Namma Basava), ಅಜಯ್ (Ajay)​, ಅರಸು (Arasu), ಮಿಲನ (Milana), ಬಿಂದಾಸ್ (Bindas)​​, ವಂಶಿ(Vamsi), ರಾಜ್ (Raaj)​, ಪೃಥ್ವಿ (Pruthvi), ರಾಮ್ ​(Ram), ಜಾಕಿ (Jackie), ಹುಡುಗರು (Hudugaru), ಪರಮಾತ್ಮ (Paramathma), ಅಣ್ಣಾ ಬಾಂಡ್ (Anna Bond), ಯಾರೇ ಕೂಗಾಡಲಿ (Yaree Koogadali), ನಿನ್ನಿಂದಲೇ  (Ninnindale), ಮೈತ್ರಿ (Mythri), ಪವರ್ (Power)​, ರಣ ವಿಕ್ರಮ (Rana Vikram), ಚಕ್ರವ್ಯೂಹ (Chakravyuha), ದೊಡ್ಮನೆ ಹುಡುಗ (Dodamane Huduga), ರಾಜಕುಮಾರ (Rajakumar), ಅಂಜನಿ ಪುತ್ರ (Anjani Putra), ನಟಸಾರ್ವಭೌಮ (Natasarvabouma), ಯುವರತ್ನ (Yuvarathna), ಜೇಮ್ಸ್ ​(James), ಗಂಧದಗುಡಿ (Gandhadagudi), ಮುಂದೆ ಬೇಕು ಅಂದರೂ ಸಿನಿಮಾ ಮಾಡೋಕೆ ಅಪ್ಪು ನಮ್ಮ ಜೊತೆ ಇಲ್ಲ, ಆದರೆ ಅಭಿಮಾನಿಗಳ ಹೃದಯ ಸಿಂಹಾಸನವೇರಿ ಕೂತಿದ್ದಾರೆ.


ರಾಜರತ್ನನಿಲ್ಲದೇ 2 ನೇ ವರ್ಷದ ಹುಟ್ಟುಹಬ್ಬ!


ಕರ್ನಾಟಕದ ಪ್ರತಿಯೊಬ್ಬರು ಈ ದಿನವನ್ನು 2 ವರ್ಷಗಳ ಹಿಂದೆ ವಿಜೃಂಭಣೆಯಿಂದ ಸಂಭ್ರಮಿಸುತ್ತಿದ್ದರು. ಈಗಲೂ ಅದೇ ಸಂಭ್ರಮ ಇದೆ. ಆದರೆ  ಅಪ್ಪು ನಮ್ಮ ಜೊತೆ ಇಲ್ವಲ್ಲಾ ಅನ್ನೋ ನೋವು ಕೂಡ ಕಾಡ್ತಿದೆ. ಪುನೀತ್ ರಾಜ್​ಕುಮಾರ್​  ನಮ್ಮನ್ನು ಅಗಲಿ ಒಂದೂವರೆ ವರ್ಷ ಕಳೆದು ಹೋಗಿದೆ. ಇಂದು ಅಪ್ಪು ಅವರ ಹುಟ್ಟುಹಬ್ಬ. ಅಪ್ಪು ನಮ್ಮೊಂದಿಗೆ ಇದಿದ್ದರೆ ಅವರು ಇಂದು 48ನೇ ವಸಂತಕ್ಕೆ ಕಾಲಿಡುತ್ತಿದ್ದರು.


ವಿ ಮಿಸ್​ಯೂ ಅಪ್ಪು ಅಂತಿದ್ದಾರೆ ಅಭಿಮಾನಿಗಳು!


ಅಕ್ಟೋಬರ್​ 29 2021 ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂತ ಘಟನೆ ನಡೆದು ಹೋಗಿತ್ತು. ದೊಡ್ಮನೆಯ ಕೊನೆಯ ಕುಡಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದರು. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆ. ನಿನ್ನೆ ತಡರಾತ್ರಿಯಿಂದಲೇ ಅಪ್ಪು ಮನೆ ಮುಂದೆ ಜನಸಾಗರ ಸೇರುತ್ತಿತ್ತು. ಆದರೆ, ದೈವ ಇಚ್ಛೆಯೇ ಬೇರೆಯಾಗಿತ್ತು. ಇಂದು ಅಪ್ಪು ನಮ್ಮ ಜೊತೆ ದೈಹಿಕವಾಗಿ ಇರದೇ ಹೋದರು, ನಮ್ಮ ಜೊತೆ ಇದ್ದೆ ಇರುತ್ತಾರೆ.


ಇಂದಿನಿಂದ ಒಟಿಟಿಯಲ್ಲಿ ಗಂಧದಗುಡಿ!


ಅಪ್ಪು ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಇದು ಉಡುಗೊರೆ ಎಂದರೆ ತಪ್ಪಾಗಲ್ಲ. ಅಪ್ಪು ಅವರ ಡ್ರೀಮ್​ ಪ್ರಾಜೆಕ್ಟ್​​ ಗಂಧದ ಗುಡಿ ಸಿನಿಮಾ ಇಂದಿನಿಂದ ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋದ ಒಂದು ವರ್ಷಕ್ಕೆ ಸರಿಯಾಗಿ ಗಂಧದಗುಡಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಇಂದಿನಿಂದ ಅಮೇಜಾನ್​ನಲ್ಲಿ ಲಭ್ಯವಿರುತ್ತದೆ.


ಇದನ್ನೂ ಓದಿ: ಅಪ್ಪು ಜನ್ಮ ದಿನಕ್ಕೆ ದೊಡ್ಮನೆಯ ಯುವರಾಜನ ಅಬ್ಬರ ಶುರು!


ಯುವರತ್ನ ರೀ ರಿಲೀಸ್!


ಇನ್ನೂ ಪುನೀತ್ ರಾಜ್​ಕುಮಾರ್ ಅವರ ಹುಟ್ಟುಹಬ್ಬಕ್ಕೆ ಯುವರತ್ನ ಸಿನಿಮಾ ರೀ ರಿಲೀಸ್ ಆಗಿದೆ. ಸಿದ್ದೇಶ್ವರ ಚಿತ್ರಮಂದಿರದಲ್ಲಿ ನಿನ್ನೆ ರಾತ್ರಿ ಅಪ್ಪು ಅಭಿಮಾನಿಗಳಿಗೆ  ವಿಶೇಷ ಪ್ರದರ್ಶನ ಇತ್ತು. ಇಂದಿನಿಂದಲೂ ಕೆಲ ಚಿತ್ರಮಂದಿರಲ್ಲೂ ಯುವರತ್ನ ಸಿನಿಮಾ ಪ್ರದರ್ಶನಯಾಗುತ್ತಿದೆ.


'ಕಬ್ಬ' ಸಿನಿಮಾ ಅಪ್ಪುಗೆ ಅರ್ಪಣೆ!


ಇನ್ನೊಂದು ಕಡೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಮಾರ್ಚ್ 17ಕ್ಕೆ ರಿಲೀಸ್ ಆgide. ಈಗಾಗಲೇ ಇಡೀ ಚಿತ್ರತಂಡ ಈ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡುವುದಾಗಿ ಅನೌನ್ಸ್ ಮಾಡಿದೆ. ಹಾಗಾಗಿ ಇಂದಿನಿಂದ ಚಿತ್ರಮಂದಿರದಲ್ಲಿ ಕಬ್ಜ ಅಬ್ಬರಿಸುತ್ತಿದೆ. ಮತ್ತೊಂದು ವಿಶೇಷ ಅಂದ್ರೆ ಕಬ್ಜ ಕಟೌಟ್​ನಲ್ಲಿ ಅಪ್ಪು ಅವರು ಕೂಡ ಇದ್ದಾರೆ.

Published by:ವಾಸುದೇವ್ ಎಂ
First published: