HBD Pawan Kalyan: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ ವಕೀಲ್​ ಸಾಬ್​ ಮೋಷನ್​ ಪೋಸ್ಟರ್​..!

Vakeel Saab Motion Poster: ಪವನ್​ ಕಲ್ಯಾಣ್​ ತುಂಬಾ ದೊಡ್ಡ ಗ್ಯಾಪ್​ನ ನಂತರ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವಕೀಲ್​ ಸಾಬ್​. ಈ ಚಿತ್ರತಂಡ ಪವರ್ ಸ್ಟಾರ್​ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಖತ್ ಉಡುಗೊರೆ ಕೊಟ್ಟಿದೆ. ಚಿತ್ರದ ಮೋಷನ್​ ಪೋಸ್ಟರ್ ರಿಲೀಸ್​ ಮಾಡಲಾಗಿದ್ದು, ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ವಕೀಲ್​ ಸಾಬ್​ ಮೋಷನ್ ಪೋಸ್ಟರ್​ನಲ್ಲಿ ಪವನ್ ಕಲ್ಯಾಣ್​

ವಕೀಲ್​ ಸಾಬ್​ ಮೋಷನ್ ಪೋಸ್ಟರ್​ನಲ್ಲಿ ಪವನ್ ಕಲ್ಯಾಣ್​

  • Share this:
ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟ ಬರ್ತ್​ಡೇಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪವನ್​ ಕಲ್ಯಾಣ್​ ಅವರಿಗೆ ಟಾಲಿವುಡ್​ನಲ್ಲಿ ಎಷ್ಟು ದೊಡ್ಡ ಮಟ್ಟದ ಫ್ಯಾನ್​​ ಫಾಲೋಯಿಂಗ್​ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಪವನ್​ ಕಲ್ಯಾಣ್​ ತುಂಬಾ ದೊಡ್ಡ ಗ್ಯಾಪ್​ನ ನಂತರ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವಕೀಲ್​ ಸಾಬ್​. ಈ ಚಿತ್ರತಂಡ ಪವರ್ ಸ್ಟಾರ್​ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಖತ್ ಉಡುಗೊರೆ ಕೊಟ್ಟಿದೆ. ಚಿತ್ರದ ಮೋಷನ್​ ಪೋಸ್ಟರ್ ರಿಲೀಸ್​ ಮಾಡಲಾಗಿದ್ದು, ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.


ಹಿಂದಿಯ ಪಿಂಕ್​ ಸಿನಿಮಾದ ತೆಲುಗು ರಿಮೇಕ್​ ಆಗಿರುವ ಈ ಚಿತ್ರದಲ್ಲಿ ಪವನ್​ ಕಲ್ಯಾಣ್​ ಅಮಿತಾಭ್​ ನಿರ್ವಹಿಸಿದ್ದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸದ್ಯ ರಿಲೀಸ್ ಆಗಿರುವ ಮೋಷನ್​ ಪೋಸ್ಟರ್​ನಲ್ಲಿ ಒಂದು ಕೈಯಲ್ಲಿ ಲಾಟಿ ಹಾಗೂ ಮತ್ತೊಂದು ಕೈಯಲ್ಲಿ ಕಾನೂನಿನ ಪುಸ್ತಕ ಹಿಡಿದಿರುವ ಪವನ್​ ಅವರ ಲುಕ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ.

Happy Birthday Pawan Kalyan Vakeel Saab Motion Poster is trending in twitter
ಟ್ವಿಟರ್​ ಟ್ರೆಂಡಿಂಗ್​


ಸದ್ಯ ಪವನ್​ ಕಲ್ಯಾಣ್​ ಅವರ ಹುಟ್ಟುಹಬ್ಬದ ವಿಷಯ ಹಾಗೂ ವಕೀಲ್​ ಸಾಬ್​ ಸಿನಿಮಾದ ಮೋಷನ್​ ಪೋಸ್ಟರ್​ ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ. ವಕೀಲ್​ ಸಾಬ್​ ಅಲ್ಲದೆ ಇನ್ನು ಸಾಕಷ್ಟು ಸಿನಿಮಾಗಳು ಪವನ್​ ಕಲ್ಯಾಣ್​ ಅವರ ಕೈಯಲ್ಲಿದೆ. ಈಗಾಗಲೇ ವಕೀಲ್​ ಸಾಬ್ ಚಿತ್ರೀಕರಣ ಆರಂಭವಾಗಿದ್ದು, ಲಾಕ್​ಡೌನ್​ನಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿದೆ.

Power Star Pawan Kalyans latest photo gone viral in social media ಸದ್ಯ ಪವನ್​ ಕಲ್ಯಾಣ್​ ಲೋಕ ಕಲ್ಯಾಣಕ್ಕಾಗಿ ವ್ರತ ಮಾಡುತ್ತಿದ್ದು, ಥೇಟ್​ ಸ್ವಾಮಿಜೀಯಂತೆ ಆಗಿದ್ದಾರೆ. ಈ ಹಿಂದಿ ನಟ ನಿತಿನ್​ ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡಿದ್ದ ಪವನ್​ ಅವರ ಫೋಟೋ ವೈರಲ್​ ಆಗಿತ್ತು. ಪವನ್​ ಕಲ್ಯಾಣ್​ ಇತ್ತೀಚೆಗೆ ನಡೆದ ತಮ್ಮ ಅಣ್ಣ ನಾಗಬಾಬು ಅವರ ಮಗಳು ನಿಹಾರಿಕಾ ಕೋಣಿದೇಲ ಅವರ ನಿರ್ಶಚಿತಾರ್ಥಕ್ಕೆ ಗೈರಾಗಿದ್ದರು. ಇದರಿಂದ ಸಾಕಷ್ಟು ಸುದ್ದಿಯಲ್ಲಿದ್ದರು ಪವರ್​ ಸ್ಟಾರ್.
Published by:Anitha E
First published: