Happy Birthday Pawan Kalyan: ಇಂದು ಪವನ್​ ಕಲ್ಯಾಣ್​ ಜನ್ಮದಿನ; ಅವರ ಈ ಐದು ಚಿತ್ರಗಳನ್ನು ಮಿಸ್​ ಮಾಡ್ಕೊಳ್ಳಲೇಬೇಡಿ

Pawan Kalyan Birthday: 1996ರಲ್ಲಿ ತೆರೆಕಂಡ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟವರು ಪವನ್ ಕಲ್ಯಾಣ್. ಇವರಿಗೆ ಹೆಸರು ತಂದುಕೊಟ್ಟಿದ್ದು 1998ರಲ್ಲಿ ತೆರೆಕಂಡ ಸುಸ್ವಾಗತಂ ಸಿನಿಮಾ.

ಪವನ್ ಕಲ್ಯಾಣ್

ಪವನ್ ಕಲ್ಯಾಣ್

  • Share this:
ಇಂದು ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಜನ್ಮದಿನ. ಅವರು 49ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಇನ್ನು, HBDPawalaKalyan ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.

ಕೊನಿಡೆಲ ಕಲ್ಯಾಣ್ ಬಾಬು ಪವನ್ ಕಲ್ಯಾಣ್ ಅವರ ಮೂಲ ಹೆಸರು. ನಂತರ ಪವನ್ ಕಲ್ಯಾಣ್ ಎಂದೇ ಖ್ಯಾತಿ ಪಡೆದರು. ಇವರ ಅಭಿಮಾನಿಗಳು ಪ್ರೀತಿಯಿಂದ ಪವರ್ ಸ್ಟಾರ್ ಎಂದು ಕರೆಯುತ್ತಾರೆ. ಇವರಿಗೆ ಸಾಕಷ್ಟು ಅವಾರ್ಡ್ಗಳು ಕೂಡ ಲಭ್ಯವಾಗಿವೆ.

1996ರಲ್ಲಿ ತೆರೆಕಂಡ ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟವರು ಪವನ್ ಕಲ್ಯಾಣ್. ಇವರಿಗೆ ಹೆಸರು ತಂದುಕೊಟ್ಟಿದ್ದು 1998ರಲ್ಲಿ ತೆರೆಕಂಡ ಸುಸ್ವಾಗತಂ ಸಿನಿಮಾ. ತೋಳಿ ಪ್ರೇಮ, ತಮ್ಮುಡು, ಬದ್ರಿ ಮತ್ತು ಕಾಶಿಯಂತ ಹಿಟ್ ಚಿತ್ರಗಳನ್ನು ನೀಡಿದರು. ಅವರ ಪ್ರಮುಖ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅತ್ತಾರಿಂಟಿಕಿ ದಾರೆದಿ:
ಪವನ್ ಕಲ್ಯಾಣ್, ಸಮಂತಾ ಹಾಗೂ ಪ್ರಣಿತಾ ಸುಭಾಷ್ ಅವರನ್ನೊಳಗೊಂಡ ಈ ಸಿನಿಮಾ ಬ್ಲಾಕ್ಬಾಸ್ಟರ್ ಆಗಿ ಹೊರ ಹೊಮ್ಮಿತ್ತು. ಈ ಚಿತ್ರಕ್ಕೆ 6 ಸೀಮಾ ಪ್ರಶಸ್ತಿ, 4 ಫಿಲ್ಮಂ ಫೇರ್ ಅವಾರ್ಡ್ ಕೂಡ ಲಭ್ಯವಾಗಿದ್ದವು.ಗಬ್ಬರ್ ಸಿಂಗ್:
ಪವನ್ ಕಲ್ಯಾಣ್ ಹಾಗೂ ಕಾಜಲ್ ಒಟ್ಟಾಗಿ ಕಾಣಿಸಿಕೊಂಡಿದ್ದ ಗಬ್ಬರ್ ಸಿಂಗ್ ಸಿನಿಮಾ ಟಾಲಿವುಡ್ನಲ್ಲಿ ಸಖತ್ ಹಿಟ್ ಆಗಿತ್ತು. ಇದು ಪವನ್ ಕಲ್ಯಾಣ್ ಸಿನಿ ಬದುಕಿನಲ್ಲೇ ಅತ್ಯಂತ ಅದ್ಭುತ ಚಿತ್ರ ಎಂಬುದು ಸಿನಿ ಪಂಡಿತರ ಅಭಿಪ್ರಾಯ.ಕುಷಿ:
ಎಸ್ಜೆ ಸೂರ್ಯ ನಿರ್ದೇಶನದ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಹೀರೋ ಆಗಿ ಕಾಣಿಸಿಕೊಂಡಿದ್ದರೆ ಭೂಮಿಕಾ ಚಾವ್ಲಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದ ಹಾಡುಗಳು ಆ ಕಾಲದಲ್ಲಿ ಭಾರೀ ಸದ್ದು ಮಾಡಿದ್ದವು.

ತೊಲಿ ಪ್ರೇಮ, ಸುಸ್ವಾಗತಂ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು.
Published by:Rajesh Duggumane
First published: