ಸೀತಾರಾಮ ಕಲ್ಯಾಣ ನಂತರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭಿನಯಿಸುತ್ತಿರುವ ಹೊಸ ಚಿತ್ರ ಅಂದರೆ ಅದು ರೈಡರ್. ಸ್ಯಾಂಡಲ್ವುಡ್ ಯುವರಾಜನ ಹೊಸ ಸಿನಿಮಾ ಅನೌನ್ಸ್ ಆಗಿ ಬಹಳ ಸಮಯವಾಯಿತು. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ಸಿನಿಮಾ ಕುರಿತಾದ ಅಪ್ಡೇಟ್ ಸಿಕ್ಕಿರಲಿಲ್ಲ. ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ರೈಡರ್ ಸಿನಿಮಾದ ಮುಹೂರ್ತ ಕೊರೋನಾ ಲಾಕ್ಡೌನ್ ಆರಂಭವಾಗುವ ಮುನ್ನವೇ ನಡೆದಿತ್ತು. ಆದರೆ ಲಹರಿ ಪ್ರೊಡಕ್ಷನ್ನ ಈ ಸಿನಿಮಾಗೆ ಟೈಟಲ್ ಏನು ಎಂಬುದು ಫಿಕ್ಸ್ ಆಗಿರಲಿಲ್ಲ. ಹಾಗಾಗಿ N4 ವರ್ಕಿಂಗ್ ಟೈಟಲ್ ನಲ್ಲೇ ಚಿತ್ರದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ಆರಂಭವಾಗಿದ್ದವು. ನಂತರ ಈ ಹೊಸ ಚಿತ್ರಕ್ಕೆ 'ರೈಡರ್' ಎಂಬ ಟೈಟಲ್ ಫಿಕ್ಸ್ ಮಾಡಲಾಗಿತ್ತು. ಈ ಹಿಂದೆ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಅದಕ್ಕೆ ಅಭಿಮಾನಿಗಳಿಂದ ಸಖತ್ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬದಂದು ರೈಡರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಇಂದು ಯುವರಾಜ ನಿಖಿಲ್ ಕುಮಾರಸ್ವಾಮಿ (Happy Birthday Nikhil Kumaraswamy) ಅವರ ಹುಟ್ಟುಹಬ್ಬ. ಅಕ್ಕಾಗಿಯೇ ಉಡುಗೊರೆಯಾಗಿ ರೈಡರ್ ಚಿತ್ರತಂಡ ಇಂದು ಸಿನಿಮಾದ ಟೀಸರ್ ರಿಲೀಸ್ ಮಾಡಿದೆ. ಸಿನಿಮಾದ ಟೈಟಲ್ ಟೀಸರ್ ನೋಡಿದಾಗಲೇ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ಸ್ಪಷ್ಟವಾಗಿತ್ತು. ಈಗ ಟೀಸರ್ ನೋಡಿದ ಮೇಲಂತೂ ಸಿನಿಮಾದ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
46 ಸೆಕೆಂಡ್ ಇರುವ ಈ ಟೀಸರ್ ಆರಂಭವಾಗೋದೆ ಆ್ಯಕ್ಷನ್ ಸೀಕ್ವೆನ್ಸ್ನಿಂದ. ಯುವರಾಜ ನಿಖಿಲ್ ಗೆ 'ರೈಡರ್' (Rider) ಕಮರ್ಷಿಯಲ್ ಸಕ್ಸಸ್ ನೀಡುವ ಎಲ್ಲಾ ಸೂಚನೆಯನ್ನ ಸಹ ಈ ಟೀಸರ್ ನೀಡುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಟೀಸರ್ನಲ್ಲಿ ಕೇವಲ ಆ್ಯಕ್ಷನ್ ಸೀನ್ಗಳಷ್ಟೆ ಇಡಲಾಗಿದೆ. ಕೇವಲ ಬ್ಯಾಗ್ರೌಂಡ್ನಲ್ಲೇ ಟೀಸರ್ ಅನ್ನು ತೋರಿಸಲಾಗಿದೆ. ಯಾವುದೇ ಡೈಲಾಗ್ ಅಥವಾ ಹಿನ್ನಲೆ ಧ್ವನಿ ಇಲ್ಲ. ಒಟ್ಟಾರೆ ಟೀಸರ್ ಅನ್ನು ತೆಲುಗು ಹಾಗೂ ಕನ್ನಡ ಪ್ರೇಕ್ಷಕರಿಬ್ಬರಿಗೂ ತಲುಪುವಂತೆ ಮಾಡಲಾಗಿದೆ.
ಇದನ್ನೂ ಓದಿ: ಸಿನಿಮಾದ ಹೆಸರು ಬದಲಿಸಿದ ಫ್ಯಾಂಟಮ್ ಚಿತ್ರತಂಡ: ಹೊಸ ಟೈಟಲ್ ಜೊತೆ ಮತ್ತೊಂದು ಅಪ್ಡೇಟ್ ಕೊಟ್ಟ ಕಿಚ್ಚ
ಅಂದಹಾಗೆ, ನಿಖಿಲ್ ಕುಮಾರಸ್ವಾಮಿ ರಾಜಕೀಯ ಹಾಗೂ ಚಿತ್ರರಂಗ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟನಾಗಿ ವೃತ್ತಿಜೀವನ ಆರಂಭಿಸಿದ ನಿಖಿಲ್ ಕುಮಾರ್ ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ಸಹ ಹೌದು. ಆದರೂ ನಟನಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದು, ಅವರ ಕೈಯಲ್ಲೀಗ ರೈಡರ್ ಸೇರಿ ನಾಲ್ಕು ಚಿತ್ರಗಳಿರೋದು ವಿಶೇಷ.
ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ರೈಡರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಿಖಿಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆದರೆ ಯುವರಾಜನ ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ರೈಡರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ