Anitha EAnitha E
|
news18-kannada Updated:November 18, 2020, 2:12 PM IST
ನೆಟ್ರಿಕನ್ ಸಿನಿಮಾದಲ್ಲಿ ನಯನತಾರಾ
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಇನ್ನು ನಯನತಾರಾ ಅದೃಷ್ಟ ಚೆನ್ನಾಗಿದೆ ಮುಟ್ಟಿದ್ದೆಲ್ಲ ಚಿನ್ನ ಆಗುತ್ತಿದೆ. ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ನಯನತಾರಾ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇವುಗಳ ಜೊತೆಗೆ ನಯನತಾರಾ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರಂತೆ. ಸಿನಿಮಾಗಳಲ್ಲಿ ಇಷ್ಟು ಬ್ಯುಸಿಯಾಗಿರುವ ನಯನತಾರಾ ಒಂದು ಸಮಯದಲ್ಲಿ ಚಿತ್ರರಂಗದಿಂದ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ ನಯನತಾರಾ ಅದೃಷ್ಟ ಚೆನ್ನಾಗಿತ್ತು. ಅವರ ಕಮ್ಬ್ಯಾಕ್ ನಿಜಕ್ಕೂ ಹೆಸರಿನ ಜೊತೆಗೆ ಯಶಸ್ಸನ್ನೂ ತಂದುಕೊಟ್ಟಿತ್ತು. ಈಗ ನಯನತಾರಾ ಕಾಲಿವುಡ್ನ ಬ್ಯುಸಿಯೆಸ್ಟ್ ನಟಿ. ಇಂತಹ ನಟಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅವರ ನಿರ್ದೇಶಕ ವಿಘ್ನೇಶ್ ಶಿವನ್ ಸಖತ್ ಟೀಸರ್ ರಿಲೀಸ್ ಮಾಡಿದ್ದಾರೆ.
ನಯನತಾರಾ ಕಣ್ಣು ಕಾಣದ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ ನೆಟ್ರಿಕನ್. ತಮಿಳಿನ ಈ ಸಿನಿಮಾವನ್ನು ಮಿಲಿಂದ್ ರಾವ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕನಾಗಿ ಹಣ ಹೂಡಿರುವುದು ವಿಘ್ನೇಶ್ ಶಿವನ್. ಈಗ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಗಿರೀಶ್ ಗೋಪಾಲಕೃಷ್ಣನ್ ಸಂಗೀತ ನೀಡಿರುವ ಈ ಚಿತ್ರದ ಟೀಸರ್ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ನಯನತಾರಾ ಕಣ್ಣು ಕಾಣದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಚಿತ್ರದ ಬಗ್ಗೆ ಇರುವ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಇದು ಕೊರಿಯನ್ ಸಿನಿಮಾ ಬ್ಲೈಂಡ್ನ ರಿಮೇಕ್ ಆಗಿದೆ.
ಸಿನಿಮಾದ ಪೋಸ್ಟರ್ನಲ್ಲೂ ದೊಡ್ಡ ಕಣ್ಣಿನ ಚಿತ್ರವಿದೆ. ಜೊತೆಗೆ ನಯನತಾರಾ ಸರ್ವೀಸ್ ಡಾಗ್ ಹಿಡಿದುಕೊಂಡು ನಡೆಯುತ್ತಿರುವ ಚಿತ್ರವಿದೆ. ವಿಘ್ನೇಶ್ ಶಿವನ್ ತಮ್ಮ ಪ್ರೊಡಕ್ಷನ್ ಹೌಸ್ ಹೆಸರನ್ನು ರೌಡಿ ಎಂದು ಇಟ್ಟಿದ್ದಾರೆ. ಅದು ಸಹ 2015ರಲ್ಲಿ ನಾನುಮ್ ರೌಡಿತಾನ್ ಚಿತ್ರವನ್ನು ನಿರ್ದೇಶಿಸಿದ್ದರು ವಿಘ್ನೇಶ್. ಈ ಚಿತ್ರದ ನೆನಪಿನಲ್ಲೇ ಪ್ರೊಡಕ್ಷನ್ ಹೌಸ್ಗೆ ಈ ಹೆಸರು ಇಟ್ಟಿದ್ದಾರೆ. ಇದರಲ್ಲಿ ನಯನತಾರಾ ಹಾಗೂ ವಿಜಯ್ಸೇತು ಪತಿ ನಟಿಸಿದ್ದಾರೆ. ನಿನ್ನೆಗೆ ಈ ಚಿತ್ರ ತೆರೆಕಂಡು 5 ವರ್ಷವಾಗಿದೆ
Published by:
Anitha E
First published:
November 18, 2020, 2:12 PM IST