Mohanlal Birthday: 60ನೇ ಹುಟ್ಟುಹಬ್ಬದ ಸಂಭ್ರದಲ್ಲಿ ಕಂಪ್ಲೀಟ್ ಆಕ್ಟರ್ ಮೋಹನ್ ಲಾಲ್​!

Happy Birthday MohanLal: ರಾಷ್ಟ್ರಪ್ರಶಸ್ತಿ ವಿಜೇತ ನಟ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ, ಹಿಂದಿಯಲ್ಲೂ ಅಭಿನಯಿಸಿ ಮಿಂಚಿದ್ದಾರೆ. ಕನ್ನಡದಲ್ಲಿ ಮೋಹನ್ ಲಾಲ್ ಮೊದಲ ಬಾರಿಗೆ ಅಭಿನಯಿಸಿದ್ದು ಆದಿತ್ಯ-ರಕ್ಷಿತಾ ಅಭಿನಯದ ‘ಲವ್ ಸಿನಿಮಾದಲ್ಲಿ.

ಮೋಹನ್ ಲಾಲ್.

ಮೋಹನ್ ಲಾಲ್.

 • Share this:
  ಭಾರತೀಯ ಚಿತ್ರರಂಗದ ‘ಕಂಪ್ಲೀಟ್ ಆಕ್ಟರ್' ಎಂದೇ ಹೆಸರಾದ ಮೋಹನ್ ಲಾಲ್ ಇಂದು 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಮೋಹನ್​ ಲಾಲ್​ಗೆ ಅಭಿಮಾನಿಗಳು ಪ್ರೀತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಬಿಟ್ಟಿದ್ದಾರೆ. ಮೋಹನ್ ಲಾಲ್ ಅವರ ಯಶಸ್ವೀ ವೃತ್ತಿಜೀವನದಲ್ಲಿ ಸುಮಾರು 300ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ ಮತ್ತು ದೊಡ್ಡ ಅಭಿಮಾನಿಗಳ ಬಳಗವನ್ನುಗಳಿಸಿದ್ದಾರೆ.

  ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಚಲನಚಿತ್ರೋದ್ಯಮದ ಪ್ರಸಿದ್ಧ ವ್ಯಕ್ತಿಗಳು ಲಾಲ್​ಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

  KGF CHAPTER 2: ಬಿಡುಗಡೆಗೆ ಮುನ್ನವೇ 100 ಕೋಟಿ ಕ್ಲಬ್​ಗೆ ಕೆ.ಜಿ.ಎಫ್-2..?

  ರಾಷ್ಟ್ರಪ್ರಶಸ್ತಿ ವಿಜೇತ ನಟ ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ, ಹಿಂದಿಯಲ್ಲೂ ಅಭಿನಯಿಸಿ ಮಿಂಚಿದ್ದಾರೆ. ಕನ್ನಡದಲ್ಲಿ ಮೋಹನ್ ಲಾಲ್ ಮೊದಲ ಬಾರಿಗೆ ಅಭಿನಯಿಸಿದ್ದು ಆದಿತ್ಯ-ರಕ್ಷಿತಾ ಅಭಿನಯದ ‘ಲವ್ ಸಿನಿಮಾದಲ್ಲಿ. ನಂತರ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ ‘ಮೈತ್ರಿ’ ಸಿನಿಮಾದಲ್ಲಿ. ಇವೆರಡೂ ಸಿನಿಮಾದಲ್ಲಿ ಅವರು ತಮ್ಮದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡಿರುವುದು ವಿಶೇಷ.

  Rana daggubati-Miheeka bajaj: ಬಲ್ಲಾಳದೇವನಿಗೆ ಸಿಕ್ಕಳು ಹೀರೋಯಿನ್: ಎಂಗೇಜ್ ಆದ ಆರಡಿ ಕಟೌಟ್!

  ಮೋಹನ್ ಲಾಲ್ ಅವರು ಜನಿಸಿದ್ದು 21 ಮೇ 1960 ಕೇರಳದಲ್ಲಿ. ಮೋಹನ್ ಲಾಲ್ ಚಿತ್ರರಂಗದಲ್ಲಿ ಕೇವಲ ನಾಯಕನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರಾಗಿ ಅನೇಕ ಚಿತ್ರಗಳನ್ನೂ ನಿರ್ಮಿಸಿ ಒಂದು ವಿಬ್ಬಿನ್ನ ರೀತಿಯಲ್ಲಿ ಹೆಸರನ್ನು ಮಾಡಿದ್ದರೆ. ಅಮಿತಾಭ್ ಬಚ್ಚನ್, ಡಾ. ರಾಜಕುಮಾರ್, ರಜನಿ ಕಾಂತ್, ಹೀಗೆ ಹಲವು ಚಿತ್ರರಂಗದ ನಟರ ಜೊತೆಯಲ್ಲಿ ಕೆಲಸ ಮಾಡಿದ್ದರೆ ಮೋಹನ್ ಲಾಲ್.
  Mohanlal Birthday @60
  Published by:Vinay Bhat
  First published: