Happy Birthday Mohanlal: ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದರು 'ದ ಕಂಪ್ಲೀಟ್ ಆ್ಯಕ್ಟರ್'..!

Happy Birthday Mohanlal: ಲಾಲ್ ಅಭಿನಯದ ಮರಕ್ಕರ್ ಚಿತ್ರವು ಕನ್ನಡದಲ್ಲಿ ಡಬ್​ ಆಗಿ ಬರಲಿದೆ. ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ಪಂಚಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

Happy Birthday Mohanlal, Mohanlal, Happy Birthday Mohanlal,mohanlal,Happy Birthday Mohanlal,Rajinikanth,lalettan,Shah Rukh Khan,amitabh bachchan

Happy Birthday Mohanlal, Mohanlal, Happy Birthday Mohanlal,mohanlal,Happy Birthday Mohanlal,Rajinikanth,lalettan,Shah Rukh Khan,amitabh bachchan

 • Share this:
  ಮೋಹನ್ ಲಾಲ್...ಭಾವನೆಗಳನ್ನು ಮುಖದಲ್ಲಿ ಅಭಿವ್ಯಕ್ತಿಸುತ್ತಲೇ, ಕಣ್ಣಲ್ಲೂ ಕೂಡ ಸಂಭಾಷಣೆ ಹೇಳುವ ಸಿನಿಪ್ರಿಯರ ಲಾಲೆಟ್ಟನ್​ಗೆ ಇಂದು 60ನೇ ಹುಟ್ಟುಹಬ್ಬ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ಮೋಹನ್ ಲಾಲ್ ನಿರ್ವಹಿಸದ ಪಾತ್ರವಿಲ್ಲ.

  ಅದು ಖಡಕ್ ಪೊಲೀಸ್ ಅಧಿಕಾರಿಯಾಗಿರಲಿ, ಅಡ್ವೋಕೇಟ್ ಪಾತ್ರವಿರಲಿ. ಇಲ್ಲ ಕಳ್ಳನಾಗಲಿ, ಕುಟುಂಬಸ್ಥನಾಗಿರಲಿ...ಆಟೋ ಡ್ರೈವರ್ ಆಗಿರಲಿ ಅಥವಾ ಪಕ್ಕಾ ಲೋಕಲ್ ರೌಡಿ ಆಗಿರಲಿ. ಲಾಲ್ ಅವರು ಮಾಡಿದ ಪಾತ್ರ ನೋಡಿದವರಿಗೆ ತಮ್ಮ ಸುತ್ತಮುತ್ತಲಿನ ಒಬ್ಬ ವ್ಯಕ್ತಿ ಅದು ಎಂದೆನಿಸದೇ ಇರದು. ಹೀಗಾಗಿಯೇ ಮಲಯಾಳಂನ ಮೇರು ನಟನನ್ನು ದ ಕಂಪ್ಲೀಟ್ ಆ್ಯಕ್ಟರ್ ಎಂದು ಕೊಂಡಾಡುವುದು. ಹಾಗೆಯೇ ಮನೋಜ್ಞ ಅಭಿನಯಕ್ಕೆ ನಾಮಕರಣ ಮಾಡುವುದಿದ್ರೆ ಮೋಹನ್ ಲಾಲ್ ಎಂದು ಹೆಸರಿಡಬಹುದು.

  Happy Birthday Mohanlal


  ಈ ಹಿಂದೆ ಕಾಲಿವುಡ್ ನಟ ಸೂರ್ಯ ಹೇಳಿದಂತೆ ಮೋಹನ್ ಲಾಲ್ ಅಭಿನಯಿಸಲು ನಿಂತರೆ ಅಂದರೆ ಅವರ ಬೆರಳುಗಳು ಕೂಡ ಪಾತ್ರದಲ್ಲಿ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಅಂತಹದೊಂದು ಪರ್ಫಾಮೆನ್ಸ್​ನ್ನು ಕ್ಯಾಮೆರಾ ಎದುರು ಲಾಲ್ ನೀಡುತ್ತಾರೆ. ಹೀಗಾಗಿಯೇ ದಕ್ಷಿಣ ಭಾರತದ ಈ ನಟನಿಗೆ 4 ಬಾರಿ ರಾಷ್ಟ್ರಪ್ರಶಸ್ತಿ ಒಲಿದು ಬಂದಿರುವುದು. ಇದರಲ್ಲಿ 3 ಬಾರಿ ಅಭಿನಯಕ್ಕಾಗಿ ನ್ಯಾಷನಲ್ ಅವಾರ್ಡ್ ಪಡೆದಿರುವುದು ವಿಶೇಷ. ಹಾಗೆಯೇ 13 ಬಾರಿ ರಾಷ್ಟ್ರೀಯ ಪ್ರಶಸ್ತಿ ಸುತ್ತಿನಲ್ಲಿ ಫೈನಲ್​ನಲ್ಲಿ ಲಾಲ್ ಹೆಸರು ಕಾಣಿಸಿಕೊಂಡಿದೆ.

  ಪಂಚಭಾಷಾ ಚಿತ್ರಗಳಲ್ಲಿ ಅಭಿನಯಿಸಿರುವ ಮೋಹನ್ ಲಾಲ್ ಕನ್ನಡದ ಎರಡು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಆದಿತ್ಯ-ರಕ್ಷಿತಾ ಅಭಿನಯದ 'ಲವ್' ಸಿನಿಮಾದ ಮೂಲಕ ಲಾಲ್ ಸ್ಯಾಂಡಲ್​ವುಡ್​ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ದುಬೈನ ಟ್ಯಾಕ್ಸಿ ಡ್ರೈವರ್​ ಪಾತ್ರದಲ್ಲಿ ಅಭಿನಯಿಸಿದ್ದ ಮೇರು ನಟ ಕನ್ನಡ ಸಿನಿಪ್ರಿಯರನ್ನು ಮೋಡಿ ಮಾಡಿದ್ದರು. ಆ ಬಳಿಕ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ 'ಮೈತ್ರಿ' ಸಿನಿಮಾದ ದ್ವಿತೀಯಾರ್ಧದಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಅಭಿನಯಿಸಿದ ಈ ಎರಡು ಚಿತ್ರಗಳಲ್ಲಿ ಮೋಹನ್ ಲಾಲ್ ಅವರು ತಮ್ಮದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡಿರುವುದು ವಿಶೇಷ.

  Happy Birthday Mohanlal


  ಸದ್ಯ ಲಾಲ್ ಅಭಿನಯದ ಮರಕ್ಕರ್ ಚಿತ್ರವು ಕನ್ನಡದಲ್ಲಿ ಡಬ್​ ಆಗಿ ಬರಲಿದೆ. ಐತಿಹಾಸಿಕ ಕಥೆ ಹೇಳಲಿರುವ ಈ ಸಿನಿಮಾದಲ್ಲಿ ದ ಕಂಪ್ಲೀಟ್ ಆ್ಯಕ್ಟರ್ ನಾವಿಕ/ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ಪಂಚಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
  First published: