HOME » NEWS » Entertainment » HAPPY BIRTHDAY MEGHANA RAJ ACTRESS SHARED AN ADORABLE VIDEO OF HER SON JUNIOR CHIRU AE

Happy Birthday Meghana Raj: ಮೇಘನಾ ರಾಜ್​ ಹುಟ್ಟುಹಬ್ಬದಂದೇ ವೈರಲ್​ ಆಯ್ತು ಜೂನಿಯರ್​ ಚಿರು ಹೊಸ ವಿಡಿಯೋ..!

Junior Chiru Video: ಮೇಘನಾ ರಾಜ್​ ತಮ್ಮ ಹುಟ್ಟುಹಬ್ಬದಂದು ಮಗ ಜೂನಿಯರ್​ ಚಿರು ಜತೆಗಿನ ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಮೇಘನಾ ಮಗನನ್ನು ಎತ್ತಿಕೊಂಡು ಗಂಡ ಚಿರು ಫೋಟೋ ಮುಂದೆ ನಿಂತಿದ್ದರೆ, ಮಗು ಅಪ್ಪನ ಫೋಟೋ ಮೇಲೆ ಕೈ ಇಡುತ್ತಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Anitha E | news18-kannada
Updated:May 3, 2021, 5:02 PM IST
Happy Birthday Meghana Raj: ಮೇಘನಾ ರಾಜ್​ ಹುಟ್ಟುಹಬ್ಬದಂದೇ ವೈರಲ್​ ಆಯ್ತು ಜೂನಿಯರ್​ ಚಿರು ಹೊಸ ವಿಡಿಯೋ..!
ಹುಟ್ಟುಹಬ್ಬದ ಸಂಭ್ರಮದಲ್ಲಿ ಮೇಘನಾ ರಾಜ್​
  • Share this:
ನಟಿ ಮೇಘನಾ ರಾಜ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿಯ ಹುಟ್ಟುಹಬ್ಬಕ್ಕೆ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಮೇಘನಾ ಈ ಹಿಂದೆ ಪತಿ ಚಿರಂಜೀವಿ ಸರ್ಜಾ, ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದರು. ಆದರೆ ಚಿರು ಅಗಲಿಕೆ ನಂತರ ಮೇಘನಾ ಪಾಲಿನ ಮೊದಲ ಹುಟ್ಟುಹಬ್ಬ ಇದಾಗಿದೆ.  ಮೇಘನಾ ಅವರಿಗೆ ಹುಟ್ಟುಹಬ್ಬದಂದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್​ ವಿಶೇಷವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶ್​ ಮಾಡಿದ್ದಾರೆ. ಈ ವರ್ಷ ಜೀವನ ಖುಷಿಯಿಂದ ತುಂಬಿರಲೆಂದು ಹಾರೈಸಿದ್ದಾರೆ. ಉಳಿದಂತೆ ನಟಿ ಮಾನ್ವಿತಾ, ಸ್ನೇಹಿತರಾದ ಪನ್ನಾಗಭರಣ ಸೇರಿದಂತೆ ಇತರರು ಮೇಘನಾ ರಾಜ್​ ಅವರಿಗೆ ವಿಶ್​ ಮಾಡಿದ್ದಾರೆ. ಪತಿಯ ನೆನಪಿನ ಜೊತೆಗೆ ಮುದ್ದು ಮಗನೊಂದಿಗೆ ಮೇಘನಾ ಈ ಸಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

ಮೇಘನಾ ರಾಜ್​ ತಮ್ಮ ಹುಟ್ಟುಹಬ್ಬದಂದು ಮಗ ಜೂನಿಯರ್​ ಚಿರು ಜತೆಗಿನ ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಮೇಘನಾ ಮಗನನ್ನು ಎತ್ತಿಕೊಂಡು ಗಂಡ ಚಿರು ಫೋಟೋ ಮುಂದೆ ನಿಂತಿದ್ದರೆ, ಮಗು ಅಪ್ಪನ ಫೋಟೋ ಮೇಲೆ ಕೈ ಇಡುತ್ತಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.








View this post on Instagram






A post shared by Meghana Raj Sarja (@megsraj)






ಮೇಘನಾ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಚಿರು ಅವರನ್ನು ಮದುವೆಯಾಗಿದ್ದರು. ಮೇ. 3ಕ್ಕೆ ಮೇಘನಾ ಹುಟ್ಟುಹಬ್ಬವಾದರೆ, ಮೇ 2ರಂದು ಚಿರು-ಮೇಘನಾ ಮದುವೆಯಾಗಿತ್ತು.








View this post on Instagram






A post shared by Meghana Raj Sarja (@megsraj)






ಚಿರು ಅಕಾಲಿಕವಾಗಿ ಅಗಲಿದಾಗ ಮೇಘನಾ ಅವರ ಜೀವನದಲ್ಲಿ ಖುಷಿ ಹಾಗೂ ಭರವಸೆಯಾಗಿ ಬಂದಿದ್ದೇ ಅವರ ಮಗ. ಮೇಘನಾ ಮಗನನ್ನ ಜೂನಿಯರ್ ಚಿರು ಎಂದು ಕರೆಯುತ್ತಾರೆ. ಮನೆಯಲ್ಲಿ ತಾತ -ಅಜ್ಜಿ ಮಗುವನ್ನು ಚಿಂಟು ಎಂದು ಕರೆಯುತ್ತಾರೆ.








View this post on Instagram






A post shared by Meghana Raj Sarja (@megsraj)






ಮೇಘನಾ ಹುಟ್ಟುಹಬ್ಬಕ್ಕೆ ಸ್ನೇಹಿತರಾದ ಪನ್ನಾಗಭರಣ, ಧ್ರುವ ಪತ್ನಿ ಪ್ರೇರಣಾ, ನಟಿ ಮಾನ್ವಿತಾ ಕಾಮತ್​ ಶುಭ ಕೋರಿದ್ದಾರೆ. ಪ್ರೇರಣಾ ಶಂಕರ್​ ವಿಶೇಷವಾದ ವಿಡಿಯೋ ಮೂಲಕ ವಿಶ್​ ಮಾಡಿದ್ದಾರೆ.







ಮೇಘನಾ ಮಗನಿಗೆ ಇನ್ನು ನಾಮಕರಣ ಮಾಡಿಲ್ಲ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಜೂನಿಯರ್​ ಚಿರುಗೆ ಹೆಸರು ಆಯ್ಕೆ ಮಾಡಲಾಗಿದ್ದು, ಸದ್ಯದಲ್ಲೇ ನಾಮಕರಣ ಮಾಡಲಿದ್ದಾರಂತೆ.
Published by: Anitha E
First published: May 3, 2021, 5:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories