• Home
  • »
  • News
  • »
  • entertainment
  • »
  • Prarambha Trailer: ಮನೋರಂಜನ್​ ರವಿಚಂದ್ರನ್​ ಹುಟ್ಟುಹಬ್ಬದಂದೇ ರಿಲೀಸ್​ ಆಯ್ತು ಪ್ರಾರಂಭ ಸಿನಿಮಾದ ಟ್ರೇಲರ್​..!

Prarambha Trailer: ಮನೋರಂಜನ್​ ರವಿಚಂದ್ರನ್​ ಹುಟ್ಟುಹಬ್ಬದಂದೇ ರಿಲೀಸ್​ ಆಯ್ತು ಪ್ರಾರಂಭ ಸಿನಿಮಾದ ಟ್ರೇಲರ್​..!

ಮನೋರಂಜನ್​ ಅಭಿನಯದ ಪ್ರಾರಂಭ ಸಿನಿಮಾಗೆ ಜೊತೆಯಾದ ದರ್ಶನ್​

ಮನೋರಂಜನ್​ ಅಭಿನಯದ ಪ್ರಾರಂಭ ಸಿನಿಮಾಗೆ ಜೊತೆಯಾದ ದರ್ಶನ್​

Happy Birthday Manoranjan Ravichandran: ಕ್ರೇಜಿ ಸ್ಟಾರ್​ ರವಿಚಂದ್ರ ಅವರ ಮಗ ಮನೋರಂಜನ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಾರಂಭ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಇದರಲ್ಲಿ ವಿಶೇಷ ಅಂದ್ರೆ, ದರ್ಶನ್​ ಮತ್ತೊಮ್ಮೆ ಕಂಠದಾನ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಸದಾ ಹೊಸಬರ ಸಿನಿಮಾ ಬೆನ್ನುತಟ್ಟುವ ಕೆಲಸ ಮಾಡುವ ಡಿಬಾಸ್​ ದರ್ಶನ್, ಇಂದಿಗೂ​ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ರವಿಚಂದ್ರನ್​ ಮಗ ಮನೋರಂಜನ್​ ಅಭಿನಯದ ‘ಪ್ರಾರಂಭ’ ಚಿತ್ರದ ಬೆನ್ನಿಗೆ ಡಿ-ಬಾಸ್​ ನಿಂತಿದ್ದಾರೆ. ಕಳೆದ ವರ್ಷ ಆ.23ರಂದು ‘ಪ್ರಾರಂಭ’ ಚಿತ್ರದ ಟೀಸರ್​ ರಿಲೀಸ್​ ಆಗಿತ್ತು. ಈ ಟೀಸರ್​ಗೆ ದರ್ಶನ್​ ಧ್ವನಿ ನೀಡುವ ಮೂಲಕ ಹೊಸಬರ ಚಿತ್ರಕ್ಕೆ ಆಸರೆ ಆಗಿದ್ದರು.  ಚಿತ್ರದ ಟೀಸರ್​ ಖಡಕ್​ ಆಗಿ ಮೂಡಿ ಬಂದಿದ್ದು, ಖಡಕ್​ ಧ್ವನಿ ಇದ್ದರೆ ಉತ್ತಮ ಎನ್ನುವ ಕಾರಣಕ್ಕೆ ಚಿತ್ರತಂಡ ದರ್ಶನ್​ ಅವರನ್ನು ಸಂಪರ್ಕಿಸಿತ್ತು. ಅದಕ್ಕೆ ಸಂತಸದಿಂದ ಒಪ್ಪಿದ್ದ ದರ್ಶನ್​ ಕಂಠದಾನ ಮಾಡಿದ್ದರು. ಈಗಲೂ ಸಹ ಪ್ರಾರಂಭ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ. ಅದಕ್ಕೂ ದರ್ಶನ್​ ಕಂಠದಾನ ಮಾಡಿದ್ದಾರೆ. ಇಂದು ಮನೋರಂಜನ್​ ಅವರ ಹಟ್ಟುಹಬ್ಬ. ಅದರ ಪ್ರಯುಕ್ತ ಚಿತ್ರತಂಡ ಸಿನಿಮಾದ ಟ್ರೇಲರ್​ ರಿಲೀಸ್ ಮಾಡಿದೆ. 


ಕ್ರೇಜಿ ಸ್ಟಾರ್​ ರವಿಚಂದ್ರ ಅವರ ಮಗ ಮನೋರಂಜನ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಾರಂಭ ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಇದರಲ್ಲಿ ವಿಶೇಷ ಅಂದ್ರೆ, ದರ್ಶನ್​ ಮತ್ತೊಮ್ಮೆ ಕಂಠದಾನ ಮಾಡಿದ್ದಾರೆ.
ಪ್ರಾರಂಭ ಸಿನಿಮಾದಲ್ಲಿ ಮನೋರಂಜನ್​ ಮೂರು ರೀತಿಯ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಗೋವಾ ಸೇರಿ ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಗದೀಶ್​ ಕಲ್ಯಾಡಿ ನಿರ್ಮಾಣದ ಈ ಚಿತ್ರಕ್ಕೆ ಮನು ಕಲ್ಯಾಡಿ ನಿರ್ದೇಶನವಿದೆ.
2018ರಲ್ಲಿ ನಡೆಯುವ ಮಂಥನ್​ ಹಾಗೂ ಪ್ರಾಥನಾರ ಲವ್ ಸ್ಟೋರಿ ಈ ಪ್ರಾರಂಭ. ಸಖತ್​ ಖಡಕ್​ ಲುಕ್​ ಹಾಗೂ ಪಾಗಲ್​ ಪ್ರೇಮಿಯಾಗಿ ಮನೋರಂಜನ್​ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್​ನಲ್ಲಿ ಆ್ಯಕ್ಷನ್​, ರೊಮ್ಯಾನ್ಸ್​ ಜೊತೆಗೆ ಸಖತ್​ ಲವ್​ ಸ್ಟೋರಿ ಸಹ ಇದೆ. ಒಂದು ಚುಂಬನದ ದೃಶ್ಯ ಸಹ ಇದೆ.


ಇದನ್ನೂ ಓದಿ: Darshan: ಫ್ರೇಮಿನೊಳಗೆ ಒಂದಾದ ದರ್ಶನ್-ಸುದೀಪ್​: ರಾಮ-ಆಂಜಿನೇಯ ಅವತಾರದಲ್ಲಿ ಡಿ-ಬಾಸ್​-ಕಿಚ್ಚ..!


ಈ ಮೊದಲು ದರ್ಶನ್​ ಸಾಕಷ್ಟು ಹೊಸಬರ ಸಿನಿಮಾ ಬೆಂಬಲಕ್ಕೆ ನಿಂತಿದ್ದರು. ಆಡಿಯೋ ಹಾಗೂ ಟ್ರೈಲರ್​ ಲಾಂಚ್​ ಕಾರ್ಯಕ್ರಮಕ್ಕೆ ತೆರಳಿ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ.
ದರ್ಶನ್​ ಸಿನಿಮಾ ವಿಚಾರಕ್ಕೆ ಬರುವುದಾದರೆ ಅವರ ರಾಬರ್ಟ್​ ಸಿನಿಮಾದ ಶೂಟಿಂಗ್​ ಮುಗಿದಿದ್ದು, ಇನ್ನೇನು ತೆರೆ ಕಾಣುವ ಹಂತದಲ್ಲಿದೆ. ಜೊತೆಗೆ ಅವರ ಅಭಿನಯದ  'ರಾಜವೀರ ಮದಕರಿ ನಾಯಕ' ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.

Published by:Anitha E
First published: