Vikrant Rona Glimpse: ಕಿಚ್ಚ ಸುದೀಪ್​ ಹುಟ್ಟುಹಬ್ಬದಂದು ವಿಕ್ರಾಂತ್​ ರೋಣನ ಕಡೆಯಿಂದ ಸಿಗಲಿದೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್​

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾದ ಕಡೆಯಿಂದ ಕಿಚ್ಚನ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಉಡುಗೊರೆ.

ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್​

ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್​

  • Share this:
ಕಿಚ್ಚ ಸುದೀಪ್​ ಅವರು ಈ ಸಲವೂ ಸಹ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಾಗಿನಿಂದ ಫ್ಯಾನ್ಸ್​ಗಳಿಗೆ ಕೊಂಚ ಬೇಸರವಾಗಿತ್ತಾದರೂ, ಆ ನಿರ್ಧಾರದ ಹಿಂದೆ ಒಂದೊಳ್ಳೆ ಉದ್ದೇಶ ಇದೆ ಅನ್ನೋದು ಅರ್ಥವಾಗಿತ್ತು. ಅಭಿಮಾನಿಗಳಿಗೆ ಕೊಂಚ ಬೇಸರ ಮಾಡಿದರೂ, ಕಿಚ್ಚ ಸುದೀಪ್​ ಅವರು ಈಗ ಕೊಟ್ಟಿರುವ ಸಿಹಿ ಸುದ್ದಿಯಿಂದಾಗಿ ಅವರು ಫುಲ್ ಖುಷಿಯಾಗಿದ್ದಾರೆ. ಹೌದು, ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬ. ಅಭಿಮಾನಿಗಳು ನೆಚ್ಚಿನ ನಟನ ಬರ್ತ್​ ಡೇ ಅನ್ನು ಆಚರಿಸಿಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಂದಿನಂತೆ ಕೇಕ್ ಕತ್ತರಿಸುವುದರ ಜತೆಗೆ  ಒಂದಿಷ್ಟು ದಾನ, ಪೂಜೆ  ಎಲ್ಲವೂ ನಡೆಯಲಿದೆ. ಇಂತಹ ಅಭಿಮಾನಿಗಳಿಗಾಗಿ ಸುದೀಪ್​ ಹಾಗೂ ಅವರ ವಿಕ್ರಾಂತ್ ರೋಣ ಚಿತ್ರತಂಡ ಸೆ.2ರಂದು ಸಖತ್ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಂಡಿದೆ. 

ಹೌದು, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾದ ಕಡೆಯಿಂದ ಕಿಚ್ಚನ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಉಡುಗೊರೆ.




ಸೆ. 2ರಂದು ಬೆಳಿಗ್ಗೆ 11.5ಕ್ಕೆ ಸುದೀಪ್​ ಹುಟ್ಟುಹಬ್ಬದ ಉಡುಗೊರೆಯಾಗಿ ವಿಕ್ರಾಂತ್ ರೋಣ ಚಿತ್ರದ ಗ್ಲಿಂಪ್ಸ್​ ದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಲಿದೆ. ಈ ವಿಷಯವನ್ನು ಕೆಲವೇ ನಿಮಿಷಗಳ ಹಿಂದೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Shilpa Shetty: ತಪ್ಪು ಮಾಡಿದ್ದೇನೆ... ಪರವಾಗಿಲ್ಲ ಎಂದ ಶಿಲ್ಪಾ ಶೆಟ್ಟಿ ಮಾಡಿರುವ ಆ ಮಿಸ್ಟೇಕ್​ ಆದರೂ ಏನು ಗೊತ್ತಾ..!

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಕಿಚ್ಚ

ಕೊರೋನಾ ಕಾರಣದಿಂದಾಗಿ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗಲು ಆಗುತ್ತಿಲ್ಲ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಕೊರೋನಾ ನಿಯಮಗಳನ್ನು ಪಾಲಿಸುತ್ತಾ ಮನೆಯಗಳಲ್ಲೇ ಇದ್ದು ಅಲ್ಲಿಂದಲೇ ಶುಭ ಕೋರಿ ಎಂದು ಸುದೀಪ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಈಗ ಈ ಸಂಬಂಧ ಮತ್ತೊಂದು ಪೋಸ್ಟ್​ ಮಾಡಿರುವ ಸುದೀಪ್​, ಎಲ್ಲ ಸರಿಹೋದ ನಂತರ ಅಭಿಮಾನಿಗಳನ್ನು ಭೇಟಿಯಾಗುವುದಾಗಿಯೂ ಹಾಗೂ ಈ ಸಲ ಹುಟ್ಟುಹಬ್ಬದಂದು ಸಿಗಲು ಆಗದ ಕಾರಣಕ್ಕೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: Happy Birthday Vihaan: ಮತ್ತೊಂದು ಸಿನಿಮಾದಲ್ಲಿ ಗಣೇಶ್​ ಮಗ ವಿಹಾನ್​: ರಿಲೀಸ್ ಆಯ್ತು ಪೋಸ್ಟರ್​..!

ವಿಕ್ರಾಂತ್ ರೋಣ' ಸಿನಿಮಾದ ಜೊತೆಗೆ ಕೋಟಿಗೊಬ್ಬ 3 ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ. 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಸುದೀಪ್ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಜನವರಿ ತಿಂಗಳಲ್ಲಿ ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿತ್ತು.

'ವಿಕ್ರಾಂತ್ ರೋಣ' ಸಿನಿಮಾವನ್ನು ರಂಗಿತರಂಗ, ರಾಜರಥ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.



ಇದನ್ನೂ ಓದಿ: Nabha Natesh: ವಜ್ರಕಾಯ ಬೆಡಗಿ ನಭಾ ನಟೇಶ್​ ಹೊಸ ಅವತಾರಕ್ಕೆ ಮನಸೋತ ಅಭಿಮಾನಿಗಳು

ವಿಕ್ರಾಂತ್ ರೋಣ ಸಿನಿಮಾ ಎಲ್ಲ ಸರಿಯಾಗಿ ಇದ್ದಿದ್ದರೆ ಈಗಾಗಲೇ ರಿಲೀಸ್​ ಆಗಿರುತ್ತಿತ್ತು. ಆಗ. 19ರಂದು ವಿಶ್ವದಾದ್ಯಂತ ರಿಲೀಸ್​ ಆಗಲಿದೆ ಎಂದು ಪ್ರಕಟಿಸಲಾಗಿತ್ತು. ಕೊರೋನಾ ಲಾಕ್​ಡೌನ್​ನಿಂದಾಗಿ ಈ ದಿನಾಂಕವನ್ನು ಮುಂದೂಡಲಾಯಿತು. ಇನ್ನು ಈ ಸಿನಿಮಾದಲ್ಲಿ ವಿಶೇಷ ಪಾತ್ರ ಹಾಗೂ ಹಾಡಿನಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್ ಸಹ ನಟಿಸಿದ್ದಾರೆ. ಇನ್ನು ಈ ಹಾಡಿನ ಪ್ರಚಾರಕ್ಕಾಗಿ ಸಖತ್​ ಫೋಟೋಶೂಟ್​ ಸಹ ಮಾಡಿಸಲಾಗಿದೆ.
Published by:Anitha E
First published: