Vikrant Rona Glimpse: ರಿಲೀಸ್ ಆಯ್ತು ಡೆಡ್​ ಮ್ಯಾನ್ಸ್ ಆ್ಯಂಥಮ್​: ಕಿಚ್ಚನ ಸ್ಟೈಲಿಶ್ ಲುಕ್​​ಗೆ ಅಭಿಮಾನಿಗಳು ಫಿದಾ..!

ಕಿಚ್ಚನ ಬರ್ತ್​ ಡೇ ಗಿಫ್ಟ್​ ಆಗಿ ವಿಕ್ರಾಂತ್ ರೋಣ ಸಿನಿಮಾದಿಂದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಿದೆ. ಈ ವಿಡಿಯೋ ತುಣುಕಿನಲ್ಲಿ ಸಖತ್​ ಆ್ಯಕ್ಷನ್​ ಇದ್ದು, ಸ್ಟೈಲಿಶ್​ ಲುಕ್​ನಲ್ಲಿ ಸುದೀಪ್ ಮಿಂಚಿದ್ದಾರೆ.  

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್​

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್​

  • Share this:
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ವಿಕ್ರಾಂತ್ ರೋಣನ ಅವತಾರ ಕಣ್ಣು ತುಂಬಿಳ್ಳೋಕೆ‌ ಕಾತುರಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಖುಷಿಯಾಗಿದೆ.  ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಂದು ಸಂಜೆ ಆನ್​ಲೈನ್​ನಲ್ಲಿ ಸುದೀಪ್​ ಅವರು ಅಭಿಮಾನಿಗಳ ಜೊತೆ ಸಂವಾದ ನಡೆಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ  ರಿಲೀಸ್  ಆಗಿರುವ​ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್​, ವಿಡಿಯೋ ತುಣುಕುಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್​ ಅವರು ಮಾತು ಕೊಟ್ಟಂತೆಯೇ ಅಭಿಮಾನಿಗಳಿಗೆ ಸಖತ್ ಉಡುಗೊರೆ ನೀಡಿದ್ದಾರೆ.

ಕಿಚ್ಚನ ಬರ್ತ್​ ಡೇ ಗಿಫ್ಟ್​ ಆಗಿ ವಿಕ್ರಾಂತ್ ರೋಣ ಸಿನಿಮಾದಿಂದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಿದೆ. ಈ ವಿಡಿಯೋ ತುಣುಕಿನಲ್ಲಿ ಸಖತ್​ ಆ್ಯಕ್ಷನ್​ ಇದ್ದು, ಸ್ಟೈಲಿಶ್​ ಲುಕ್​ನಲ್ಲಿ ಸುದೀಪ್ ಮಿಂಚಿದ್ದಾರೆ.





ಡೆಸ್​ ಮ್ಯಾನ್ಸ್​ ಆ್ಯಂಥಮ್​ ವಿಡಿಯೋದಲ್ಲಿ ಸುದೀಪ್ ಅವರು ಸಖತ್ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಕೇಳಿಸುವ ಹಿನ್ನಲೆ ಧ್ವನಿ ನಿಜಕ್ಕೂ ಗಮನ ಸೆಳೆಯುತ್ತದೆ. ಸುದೀಪ್​ ಅವರ ಆ್ಯಕ್ಷನ್​ ಸೀನಗಳು ಅಭಿಮಾನಿಗಳಿಗೆ ಸಖತ್ ಮನರಂಜಿಸುತ್ತವೆ. ಒಟ್ಟಾರೆ ಕಿಚ್ಚನ ಹುಟ್ಟುಹಬ್ಬದಂದು ಈ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿರುವುದಂತೂ ಸತ್ಯ.

ಇದನ್ನೂ ಓದಿ: Sidharth Shukla Passes Away: ಬಿಗ್ ಬಾಸ್​ ಸೀಸನ್ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ನಿಧನ

ಇನ್ನು ನಿನ್ನೆ ಸುದೀಪ್​ ಅವರ ಅಭಿಮಾನಿಗಳು ಒಂದು ಹಾಡನ್ನು ರಿಲೀಸ್​ ಮಾಡಿದ್ದಾರೆ. ಬ್ಲೀಡ್​ ಫಾರ್​ ಕಿಚ್ಚ ಹಾಡನ್ನು ಆನಂದ್​ ಆಡಿಯೋದಲ್ಲಿ ನಿನ್ನೆಯೇ ಬಿಡುಗಡೆ ಮಾಡಲಾಗಿದೆ. ಇನ್ನು ಇವತ್ತೇ ಕೋಟಿಗೊಬ್ಬ 3 ಸಿನಿಮಾದ ರಿಲೀಸ್​ ದಿನಾಂಕ ಸಹ ಪ್ರಕಟಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Kichcha Sudeep Birthday: ಸುದೀಪ್ ಮನವಿ ಮಾಡಿದ್ರೂ ಸಹ ಮನೆ ಬಳಿ ಜಮಾಯಿಸಿರೋ ಅಭಿಮಾನಿಗಳು

'ವಿಕ್ರಾಂತ್ ರೋಣ' ಸಿನಿಮಾವನ್ನು ರಂಗಿತರಂಗ, ರಾಜರಥ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಮನವಿ ಮಾಡಿದರೂ ಮನೆ ಬಳಿ ಜಮಾಯಿಸಿದ ಅಭಿಮಾನಿಗಳು

ಹುಟ್ಟುಹಬ್ಬಕ್ಕೆ ಕೆಲವು ದಿನಗಳು ಇರುವಾಗಲೇ ಸುದೀಪ್ ಅವರು ಅಭಿಮಾನಿಗಳಲ್ಲಿ ಪ್ರೀತಿಯಿಂದ ಮನವಿ ಮಾಡಿದ್ದರು. ಆದರೂ ಸಹ ಕಿಚ್ಚನ ಫ್ಯಾನ್ಸ್ ಅವರ​ ಮನೆ ಬಳಿ ಜಮಾಯಿಸಿದ್ದಾರೆ. ಕೋವಿಡ್ ಆತಂಕದ ಹಿನ್ನೆಲೆ ಅಭಿಮಾನಿಗಳ ಜತೆಗಿನ ಸೆಲೆಬ್ರೇಶನ್​ಗೆ ಬ್ರೇಕ್ ಹಾಕಿದ್ದರು ಕಿಚ್ಚ. ರಾಯಚೂರು, ಹುಬ್ಬಳ್ಳಿ, ಗುಲ್ಬರ್ಗದಿಂದ ಜೆಪಿ ನಗರ ತಲುಪಿರುವ ಅಭಿಮಾನಿಗಳು, ಕಿಚ್ಚನಿಗೆ ಜೈಕಾರ ಹಾಕಿ ಒಂದು ಸಾರಿ ಸುದೀಪ್ ಅವರನ್ನ ನೋಡಬೇಕು ಅಂತ ಕಾಯುತ್ತಿದ್ದಾರೆ.

ಇದನ್ನೂ ಓದಿ: Happy Birthday Pawan Kalyan: ವಿವಾಹಿತ ನಟ ಪವನ್ ಕಲ್ಯಾಣ್​ ಮಗುವಿಗೆ ಗರ್ಭಿಣಿಯಾಗಿದ್ದ ನಟಿ​: ಇಲ್ಲಿವರೆಗೆ ಮೂರು ಮದುವೆಯಾಗಿದ್ದಾರೆ ಪವರ್​ ಸ್ಟಾರ್​

ಪೊಲೀಸರು ಅಭಿಮಾನಿಗಳು ಸುದೀಪ್​ ಅವರ ಮನೆ ಬಳಿ ಬಾರದಂತೆ ಬ್ಯಾರಿಕೆಡ್ ಹಾಕಿದ್ದಾರೆ. ಆದರೂ, ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​ಗೆ ಫ್ರೇಮ್​ ಹಾಕಿಸಿ ಉಡುಗೊರೆಯಾಗಿ ತಂದಿದ್ದಾರೆ. ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರ ಹರಾಸಾಹಸ ಪಡುತ್ತಿದ್ದಾರೆ. ಜೈಕಾರ ಕೂಗುತ್ತ ಸುದೀಪ್ ಅವರನ್ನ ನೋಡಲೇಬೇಕು ಅಂತ ಹಠ ಮಾಡುತ್ತಿದ್ದಾರೆ. ಪೊಲೀಸರು ಮಾತ್ರ ಮನೆಯ ಬಳಿ ಸೇರಿರುವ ಅಭಿಮಾನಿಗಳನ್ನು ಸುದೀಪ್ ಅವರ ಮನೆಯಿಂದ ದೂರ ಕಳಿಸುತ್ತಿದ್ದಾರೆ.
Published by:Anitha E
First published: