Happy Birthday Kiccha Sudeep: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್: ಶುಭಕೋರಿದ ಸೆಲೆಬ್ರಿಟಿಗಳು..!
HBD Kiccha Sudeep: ಕಿಚ್ಚ ಸುದೀಪ್ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ನಟನ ಹುಟ್ಟುಹಬ್ಬಕ್ಕಾಗಿ ಚಂದನವನದ ಸೆಲೆಬ್ರಿಟಿಗಳೂ ವಿಶ್ ಮಾಡುತ್ತಿದ್ದಾರೆ. ನಟ ಜಗ್ಗೇಶ್, ಪುನೀತ್ರಾಜ್ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಶುಭ ಕೋರಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್
- News18 Kannada
- Last Updated: September 2, 2020, 11:45 AM IST
ಪ್ರತಿವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ನಟ ಸುದೀಪ್ ಅವರು ಈ ಸಲ ಸರಳವಾಗಿ ಮನೆಯಲ್ಲೇ ಬರ್ತ್ಡೇ ಮಾಡಿಕೊಳ್ಳಲಿದ್ದಾರೆ. ಕೊರೋನಾ ಕಾರಣದಿಂದಾಗಿ ಈ ಸಲ ಸಂಭ್ರಮದ ಆಚರಣೆಗೆ ಬ್ರೇಕ್ ಬಿದ್ದಿದೆ. ಇನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಮೇಡ್ ಪೋಸ್ಟರ್ ಹಾಗೂ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ನಟನ ಹುಟ್ಟುಹಬ್ಬಕ್ಕಾಗಿ ಚಂದನವನದ ಸೆಲೆಬ್ರಿಟಿಗಳೂ ವಿಶ್ ಮಾಡುತ್ತಿದ್ದಾರೆ. ನಟ ಜಗ್ಗೇಶ್, ಪುನೀತ್ರಾಜ್ಕುಮಾರ್ ಸೇರಿದಂತೆ ಸಾಕಷ್ಟು ಮಂದಿ ಶುಭ ಕೋರಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಆತ್ಮೀಯ ಕಲಾಬಂಧುವಿಗೆ....
ನೂರ್ಕಾಲ ಸುಖವಾಗಿ ಬಾಳಿಶುಭಮಸ್ತು..... pic.twitter.com/2z5QpZyyCB
— ನವರಸನಾಯಕ ಜಗ್ಗೇಶ್ (@Jaggesh2) September 2, 2020
Happy Birthday @KicchaSudeep ✨
— Puneeth Rajkumar (@PuneethRajkumar) September 2, 2020
ನಟನೆಯಲ್ಲಿ ನಂದಿ..
ನಿರ್ದೇಶನಕ್ಕೆ ಕೆಂಪೇಗೌಡ ..
ನಿರ್ಮಾಣದಲ್ಲಿ ಸ್ವಾತಿಮುತ್ತು..
ಗಾಯನದಲ್ಲಿ ಟೈಗರ್..
ನಿರೂಪಣೆಯಲ್ಲಿ ಬಿಗ್ ಬಾಸ್..
ಕ್ರಿಕೆಟ್ ನಲ್ಲಿ ನಂ 7 ಹಾಗೂ ಕ್ಯಾಪ್ಟನ್..
ಸ್ನೇಹದಲ್ಲಿ ಹುಚ್ಚ
ಅಭಿಮಾನಿಗಳ ಕಿಚ್ಚ @KicchaSudeep
ರವರಿಗೆ ಹುಟ್ಟುಹಬ್ಬದ ಶುಭಾಶಯಗಳು ..
— ಸುನಿ/SuNi (@SimpleSuni) September 2, 2020
Happy birthday @KicchaSudeep sir. Keep inspiring us. Stay blessed sir. 🥳🥳🥳🥳🥳
— Pavan Wadeyar (@PavanWadeyar) September 1, 2020
ನಿರ್ಮಾಪಕ ಹಾಗೂ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರೂ ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ದೇವರು ಶಕ್ತಿ ನೀಡಲಿ.@KicchaSudeep
— H D Kumaraswamy (@hd_kumaraswamy) September 2, 2020
ಸುದೀಪ್ ಹುಟ್ಟುಹಬ್ಬದಂದು ಅಭಿಮಾನಿಗಳಿಗಾಗಿ ಸಾಕಷ್ಟು ಸರ್ಪ್ರೈಸ್ ಕಾದಿದೆ. ಫ್ಯಾಂಟಮ್ ಸಿನಿಮಾದ ಕಡೆಯಿಂದ ಪೋಸ್ಟರ್ ಅಥವಾ ವಿಡಿಯೋ ತುಣುಕು ರಿಲೀಸ್ ಆಗುವ ಸಾಧ್ಯತೆ ಇದೆ. ಇನ್ನು ಕೋಟಿಗೊಬ್ಬ 3 ಚಿತ್ರದ ಕಡೆಯಿಂದ ಹೊಸ ಟೀಸರ್ ಹೀಗೆ ಹಲವಾರು ಉಡುಗೊರೆ ಅಭಿಮಾನಿಗಳಿಗಾಗಿ ಹೊರ ಬೀಳಲಿದೆ.