Kichcha Sudeep Birthday: ಸುದೀಪ್ ಮನವಿ ಮಾಡಿದ್ರೂ ಸಹ ಮನೆ ಬಳಿ ಜಮಾಯಿಸಿರೋ ಅಭಿಮಾನಿಗಳು

ಹುಟ್ಟುಹಬ್ಬಕ್ಕೆ ಕೆಲವು ದಿನಗಳು ಇರುವಾಗಲೇ ಸುದೀಪ್ ಅವರು ಅಭಿಮಾನಿಗಳಲ್ಲಿ ಪ್ರೀತಿಯಿಂದ ಮನವಿ ಮಾಡಿದ್ದರು. ಆದರೂ ಸಹ ಕಿಚ್ಚನ ಫ್ಯಾನ್ಸ್ ಅವರ​ ಮನೆ ಬಳಿ ಜಮಾಯಿಸಿದ್ದಾರೆ. 

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರೋ ನಟ ಕಿಚ್ಚ ಸುದೀಪ್ ಅವರು ಈ ಸಲ  ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸೋಕೆ ಆಗುತ್ತಿಲ್ಲ ಎಂದು ಈ ಹಿಂದೆಯೇ ಹೇಳಿದ್ದರು. ಅಲ್ಲದೆ ಯಾರೂ ಮನೆಯ ಬಳಿ ಬರಬಾರದು ಎಂದೂ ಮನವಿ ಮಾಡಿದ್ದರು. ಪ್ರತಿ ವರ್ಷ ಕಿಚ್ಚನ ಮನೆ ಮುಂದೆ ಅಭಿಮಾನಿಗಳ ಜಾತ್ರೆ ಇರ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಕಳೆದ ವರ್ಷದಂತೆ ಈ ಸಲವೂ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಕೊರೋನಾ ಮಾಹಾಮಾರಿಯ ಅಬ್ಬರದ ಹಿನ್ನೆಲೆ ಮನೆಯ ಬಳಿ ಬರಬೇಡಿ ಎಂದು ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು. ಇಂದು ಯಾರಿಗೂ ಸಿಗುವುದಿಲ್ಲ ಅನ್ನೋ ಸಂದೇಶವನ್ನೂ ರವಾನೆ ಮಾಡಿದ್ದರು. ಅಭಿಮಾನಿಗಳನ್ನು ಈಗ ಭೇಟಿ ಆಗುತ್ತಿಲ್ಲ, ಆದರೆ ಪರಿಸ್ಥಿತಿ ಸರಿಹೋದ ನಂತರ ಸಿಗೋಣ ಎಂದು ಸುದೀಪ್​ ಹೇಳಿದ್ದರು. ಅದಕ್ಕೆ ಅಭಿಮಾನಿಗಳಿಗಾಗಿ ಒಂದು ವಿಶೇಷ ಆನ್​ಲೈನ್​ ಕಾರ್ಯಕ್ರಮ ಸಹ ಹಮ್ಮಿಕೊಂಡಿದ್ದಾರೆ. ಆದರೂ ಅಭಿಮಾನಿಗಳು ಮಾತು ಕೇಳದೆ ಮನೆಯ ಬಳಿ ಬಂದು ಕಾಯಲಾರಂಭಿಸಿದ್ದಾರೆ.  

ಹುಟ್ಟುಹಬ್ಬಕ್ಕೆ ಕೆಲವು ದಿನಗಳು ಇರುವಾಗಲೇ ಸುದೀಪ್ ಅವರು ಅಭಿಮಾನಿಗಳಲ್ಲಿ ಪ್ರೀತಿಯಿಂದ ಮನವಿ ಮಾಡಿದ್ದರು. ಆದರೂ ಸಹ ಕಿಚ್ಚನ ಫ್ಯಾನ್ಸ್ ಅವರ​ ಮನೆ ಬಳಿ ಜಮಾಯಿಸಿದ್ದಾರೆ. ಕೋವಿಡ್ ಆತಂಕದ ಹಿನ್ನೆಲೆ ಅಭಿಮಾನಿಗಳ ಜತೆಗಿನ ಸೆಲೆಬ್ರೇಶನ್​ಗೆ ಬ್ರೇಕ್ ಹಾಕಿದ್ದರು ಕಿಚ್ಚ. ರಾಯಚೂರು, ಹುಬ್ಬಳ್ಳಿ, ಗುಲ್ಬರ್ಗದಿಂದ ಜೆಪಿ ನಗರ ತಲುಪಿರುವ ಅಭಿಮಾನಿಗಳು, ಕಿಚ್ಚನಿಗೆ ಜೈಕಾರ ಹಾಕಿ ಒಂದು ಸಾರಿ ಸುದೀಪ್ ಅವರನ್ನ ನೋಡಬೇಕು ಅಂತ ಕಾಯುತ್ತಿದ್ದಾರೆ.






ಪೊಲೀಸರು ಅಭಿಮಾನಿಗಳು ಸುದೀಪ್​ ಅವರ ಮನೆ ಬಳಿ ಬಾರದಂತೆ  ಬ್ಯಾರಿಕೆಡ್ ಹಾಕಿದ್ದಾರೆ. ಆದರೂ, ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​ಗೆ ಫ್ರೇಮ್​ ಹಾಕಿಸಿ ಉಡುಗೊರೆಯಾಗಿ ತಂದಿದ್ದಾರೆ. ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರ ಹರಾಸಾಹಸ ಪಡುತ್ತಿದ್ದಾರೆ. ಜೈಕಾರ ಕೂಗುತ್ತ ಸುದೀಪ್ ಅವರನ್ನ ನೋಡಲೇಬೇಕು ಅಂತ ಹಠ ಮಾಡುತ್ತಿದ್ದಾರೆ. ಪೊಲೀಸರು ಮಾತ್ರ ಮನೆಯ ಬಳಿ ಸೇರಿರುವ ಅಭಿಮಾನಿಗಳನ್ನು ಸುದೀಪ್ ಅವರ ಮನೆಯಿಂದ ದೂರ ಕಳಿಸುತ್ತಿದ್ದಾರೆ.

ಇದನ್ನೂ ಓದಿ: Happy Birthday Pawan Kalyan: ವಿವಾಹಿತ ನಟ ಪವನ್ ಕಲ್ಯಾಣ್​ ಮಗುವಿಗೆ ಗರ್ಭಿಣಿಯಾಗಿದ್ದ ನಟಿ​: ಇಲ್ಲಿವರೆಗೆ ಮೂರು ಮದುವೆಯಾಗಿದ್ದಾರೆ ಪವರ್​ ಸ್ಟಾರ್​

ಸುದೀಪ್​ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ವಿಕ್ರಾಂತ್ ರೋಣನ ಸಿನಿಮಾದ ಫಸ್ಟ್ ಟೀಸರ್ ಇನ್ನೇನು ಕೆಲವೇ ನಿಮಿಷಗಳಲ್ಲಿ ರಿಲೀಸ್​ ಆಗಲಿದೆ. ಅಭಿಮಾನಿಗಳು ವಿಕ್ರಾಂತ್ ರೋಣನ ಅವತಾರ ಕಣ್ತುಂಬಿಕೊಳ್ಳೋಕೆ‌ ಕಾತುರಿಂದ ಕಾಯ್ತಿದ್ದಾರೆ. ಈಗಾಗಲೇ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Happy Birthday Kichcha Sudeep: ಸುದೀಪ್​ಗೆ ನೇರವಾಗಿ ಶುಭ ಕೋರುವ ಅವಕಾಶ ಇಲ್ಲಿದೆ..!

ಇನ್ನು ನಿನ್ನೆ ಸುದೀಪ್​ ಅವರ ಅಭಿಮಾನಿಗಳು ಒಂದು ಹಾಡನ್ನು ರಿಲೀಸ್​ ಮಾಡಿದ್ದಾರೆ. ಬ್ಲೀಡ್​ ಫಾರ್​ ಕಿಚ್ಚ ಹಾಡನ್ನು ಆನಂದ್​ ಆಡಿಯೋದಲ್ಲಿ ನಿನ್ನೆಯೇ ಬಿಡುಗಡೆ ಮಾಡಲಾಗಿದೆ. ಇನ್ನು ಇವತ್ತೇ ಕೋಟಿಗೊಬ್ಬ 3 ಸಿನಿಮಾದ ರಿಲೀಸ್​ ದಿನಾಂಕ ಸಹ ಪ್ರಕಟಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

happy birthdayActor Sudeep's birthday, Sudeep coming live, Sudeep not celebrating birthday, September 02 evening, Nimmondige Nanu, ನಟ ಸುದೀಪ್ ಹುಟ್ಟುಹಬ್ಬ, ಲೈವ್ ಬರುತ್ತಿರುವ ಸುದೀಪ್, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಸುದೀಪ್, Happy Birthday Kichcha Sudeep fans came to meet him on his birthday ae
ಕಿಚ್ಚ ಸುದೀಪ್​ ಅವರ ಮನೆಯ ಬಳಿ ತೆಗೆದ ಚಿತ್ರ


'ವಿಕ್ರಾಂತ್ ರೋಣ' ಸಿನಿಮಾವನ್ನು ರಂಗಿತರಂಗ, ರಾಜರಥ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Published by:Anitha E
First published: