Happy Birthday Kichcha Sudeep: ಸುದೀಪ್​ಗೆ ನೇರವಾಗಿ ಶುಭ ಕೋರುವ ಅವಕಾಶ ಇಲ್ಲಿದೆ..!

ಕಿಚ್ಚ ಸುದೀಪ್​ ಅವರಿಗೆ ಅಭಿಮಾನಿಗಳು ನೇರವಾಗಿ ಹುಟ್ಟುಹಬ್ಬದ ಶುಭ ಕೋರಬಹುದಾಗಿದೆ. ಹೌದು, ಆನ್​ಲೈನ್​ನಲ್ಲಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಕಿಚ್ಚನ ಜೊತೆ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಇಂದು ಕಿಚ್ಚ ಸುದೀಪ್  (Kichcha Sudeep) ​ಅವರ 50ನೇ ಹುಟ್ಟುಹಬ್ಬ (5oth Birthday). ಆದರೆ, ಕೊರೋನಾ (Covid-19) ಕಾರಣದಿಂದಾಗಿ ಅವರ ಬರ್ತ್​ ಡೇ ಅನ್ನು ಅಭಿಮಾನಿಗಳೊಂದಿಗೆಆಚರಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿಯೇ ಸುದೀಪ್ ಅವರು ಕೆಲವು ದಿನಗಳು ಮುಂಚಿತವಾಗಿಯೇ ಅಭಿಮಾನಿಗಳ ಬಳಿ ಕ್ಷಮೆ ಕೇಳುವುದರ ಜತೆಗೆ ನೀವು ಇರುವ ಸ್ಥಳದಿಂದಲೇ ಶುಭಕೋರಿ ಎಂದು ಮನವಿ ಮಾಡಿದ್ದರು. ಕಳೆದ ವರ್ಷವೂ ಕೊರೋನಾ ಕಾರಣದಿಂದಾಗಿ ಕಿಚ್ಚ ಅಭಿಮಾನಿಗಳನ್ನು ತಮ್ಮ ಹುಟ್ಟುಹಬ್ಬದಂದು ಭೇಇ ಮಾಡಿರಲಿಲ್ಲ. ಇದು ಈ ವರ್ಷವೂ ಮುಂದುವರೆದಿದೆ. ಕಿಚ್ಚನನ್ನು ನೇರವಾಗಿ ನೋಡಲು ಸಾಧ್ಯವಾಗದೇ ಹೋದರೇನಂತೆ, ಅದಕ್ಕೊಂದು ಪರ್ಯಾಯ ಮಾರ್ಗವನ್ನು ಸುದೀಪ್​ ಕಂಡುಕೊಂಡಿದ್ದಾರೆ. ಹೌದು, ಇಂದು ಅಭಿಮಾನಿಗಳು ನೇರವಾಗಿ ಸುದೀಪ್​ ಅವರಿಗೆ ಹುಟ್ಟುಹಬ್ಬದ ಶುಭ ಕೋರಬಹುದಾಗಿದೆ. 

ಕಿಚ್ಚ ಸುದೀಪ್​ ಅವರಿಗೆ ಅಭಿಮಾನಿಗಳು ನೇರವಾಗಿ ಹುಟ್ಟುಹಬ್ಬದ ಶುಭ ಕೋರಬಹುದಾಗಿದೆ. ಹೌದು, ಆನ್​ಲೈನ್​ನಲ್ಲಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಕಿಚ್ಚನ ಜೊತೆ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಫೇಸ್​ಬುಕ್​, ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಇಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಮೂಲಕ ನೇರವಾಗಿ ಕಿಚ್ಚ ಸುದೀಪ್​ ಅವರಿಗೆ ವಿಶ್​ ಮಾಡಬಹುದಾಗಿದೆ. ಈ ಕಾರ್ಯಕ್ರಮಕ್ಕೆ ನಿಮ್ಮೊಂದಿಗೆ ನಾನು ಎಂದು ಹೆಸರಿಡಲಾಗಿದ್ದು, ಇದನ್ನು ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರಂತೆ.


ಇನ್ನು ನಿನ್ನೆಯಿಂದಲೇ ಸುದೀಪ್ ಹುಟ್ಟುಹಬ್ಬಕ್ಕೆ ಶುಭಾಶಯಗಳು ಹರಿದು ಬರುತ್ತಿವೆ.  ಚಿನ್ನದ ಹುಡುಗ ನೀರಜ್ ಚೋಪ್ರಾ (Neeraj Chopra). ಸಹ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೀರಜ್​ ಚೋಪ್ರಾ ವಿಡಿಯೋ ನೋಡಿದ ಕಿಚ್ಚ ಸುದೀಪ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಸಿಹಿಯಾದ ಧನ್ಯವಾದಗಳು ಸಹೋದರ ಎಂದಿದ್ದಾರೆ.

ಇದನ್ನೂ ಓದಿ: Baiju Bawra: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ರಣವೀರ್​ ಸಿಂಗ್​-ಆಲಿಯಾ ಭಟ್​..!

ಸೆ. 2ರಂದು ಅಂದರೆ ಇಂದು ಬೆಳಿಗ್ಗೆ 11.5ಕ್ಕೆ ಸುದೀಪ್​ ಹುಟ್ಟುಹಬ್ಬದ ಉಡುಗೊರೆಯಾಗಿ ವಿಕ್ರಾಂತ್ ರೋಣ ಚಿತ್ರದ ಗ್ಲಿಂಪ್ಸ್​ ದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಲಿದೆ. ಈ ವಿಷಯವನ್ನು ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನು ನಿನ್ನೆ ಸುದೀಪ್​ ಅವರ ಅಭಿಮಾನಿಗಳು ಒಂದು ಹಾಡನ್ನು ರಿಲೀಸ್​ ಮಾಡಿದ್ದಾರೆ. ಬ್ಲೀಡ್​ ಫಾರ್​ ಕಿಚ್ಚ ಹಾಡನ್ನು ಆನಂದ್​ ಆಡಿಯೋದಲ್ಲಿ ನಿನ್ನೆಯೇ ಬಿಡುಗಡೆ ಮಾಡಲಾಗಿದೆ. ಇನ್ನು ಇವತ್ತೇ ಕೋಟಿಗೊಬ್ಬ 3 ಸಿನಿಮಾದ ರಿಲೀಸ್​ ದಿನಾಂಕ ಸಹ ಪ್ರಕಟಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ಕೊರೋನಾ ಕಾರಣದಿಂದಾಗಿ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗಲು ಆಗುತ್ತಿಲ್ಲ ಎಂದು ಕಿಚ್ಚ ಸುದೀಪ್​ ಹೇಳಿದ್ದರು. ಕೊರೋನಾ ನಿಯಮಗಳನ್ನು ಪಾಲಿಸುತ್ತಾ ಮನೆಯಗಳಲ್ಲೇ ಇದ್ದು ಅಲ್ಲಿಂದಲೇ ಶುಭ ಕೋರಿ ಎಂದು ಸುದೀಪ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಈಗ ಈ ಸಂಬಂಧ ಮತ್ತೊಂದು ಪೋಸ್ಟ್​ ಮಾಡಿರುವ ಸುದೀಪ್​, ಎಲ್ಲ ಸರಿಹೋದ ನಂತರ ಅಭಿಮಾನಿಗಳನ್ನು ಭೇಟಿಯಾಗುವುದಾಗಿಯೂ ಹಾಗೂ ಈ ಸಲ ಹುಟ್ಟುಹಬ್ಬದಂದು ಸಿಗಲು ಆಗದ ಕಾರಣಕ್ಕೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.ವಿಕ್ರಾಂತ್ ರೋಣ' ಸಿನಿಮಾದ ಜೊತೆಗೆ ಕೋಟಿಗೊಬ್ಬ 3 ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ. 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಸುದೀಪ್ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದರು. ಜನವರಿ ತಿಂಗಳಲ್ಲಿ ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿತ್ತು.

'ವಿಕ್ರಾಂತ್ ರೋಣ' ಸಿನಿಮಾವನ್ನು ರಂಗಿತರಂಗ, ರಾಜರಥ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Published by:Anitha E
First published: