Happy Birthday Kichcha Sudeep: ಇಂದು ಸುದೀಪ್​ 46ನೇ ಜನ್ಮದಿನ; ಅಭಿಮಾನಿಗಳಿಗೆ ಬೇಸರವಾಗಬಾರದೆಂದು ಕಿಚ್ಚ ಮಾಡಿದ್ದೇನು ಗೊತ್ತಾ?

ಸುದೀಪ್​ಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಸುದೀಪ್​ ಹಿಂಬಾಲಕರನ್ನು ಹೊಂದಿದ್ದಾರೆ. ಹಾಗಾಗಿ, ಸುದೀಪ್​ ಜನ್ಮದಿನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ.

Rajesh Duggumane | news18-kannada
Updated:September 2, 2019, 10:53 AM IST
Happy Birthday Kichcha Sudeep: ಇಂದು ಸುದೀಪ್​ 46ನೇ ಜನ್ಮದಿನ; ಅಭಿಮಾನಿಗಳಿಗೆ ಬೇಸರವಾಗಬಾರದೆಂದು ಕಿಚ್ಚ ಮಾಡಿದ್ದೇನು ಗೊತ್ತಾ?
ಇದರ ಬೆನ್ನಲ್ಲೇ ನೋವು ನಲಿವಿನ ಕಥೆ ಹೇಳಿದ್ದ 73 ಶಾಂತಿ ನಿವಾಸ, ಮಾಸ್ ಪ್ರೇಕ್ಷಕರಿಗಾಗಿ ವೀರ ಮದಕರಿ, ಯುವಪ್ರೇಮಿಗಳಿಗಾಗಿ ಜಸ್ಟ್ ಮಾತ್ ಮಾತಲ್ಲಿ ಚಿತ್ರ ನಿರ್ದೇಶಿಸಿ ಸುದೀಪ್ ಮೋಡಿ ಮಾಡಿದ್ದರು.
  • Share this:
ಕಿಚ್ಚ ಸುದೀಪ್​ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ನಿವಾಸದ ಬಳಿ ರಾತ್ರಿಯೇ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ತಡರಾತ್ರಿ ಮನೆಯಿಂದ ಹೊರ ಬಂದ ಸುದೀಪ್​, ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ಕಿಚ್ಚನನ್ನು ಕಂಡು ಅಭಿಮಾನಿಗಳ ಹರ್ಷೋದ್ಘಾರ ಮಾಡಿದರು.

ಸುದೀಪ್​ಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಸುದೀಪ್​ ಹಿಂಬಾಲಕರನ್ನು ಹೊಂದಿದ್ದಾರೆ. ಹಾಗಾಗಿ, ಸುದೀಪ್​ ಜನ್ಮದಿನ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಇಂದು ರಾಜ್ಯದ ನಾನಾ ಭಾಗಗಳಿಂದ ಸುದೀಪ್​ ಮನೆಗೆ ಆಗಮಿಸುವ ಫ್ಯಾನ್ಸ್​ ಕೇಕ್​ ಕತ್ತರಿಸಿ, ಹಾರ ಹಾಕಿ ಸಂಭ್ರಮಿಸಲಿದ್ದಾರೆ.

ಕಳೆದಬಾರಿ ಕೊಡಗಿನಲ್ಲಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಸರಳ ಹುಟ್ಟುಹಬ್ಬ ಆಚರಿಸುವಂತೆ ಸುದೀಪ್​ ಮನವಿ ಮಾಡಿಕೊಂಡಿದ್ದರು. 2017ರಲ್ಲೂ ಸುದೀಪ್​ ಇದೇ ರೀತಿ ಮಾಡಿದ್ದರು. ಈ ಬಾರಿ ಅವರು ಅಭಿಮಾನಿಗಳಿಗೆ ಬೇಸರ ಉಂಟಾಗಬಾರದು ಎನ್ನುವ ಕಾರಣಕ್ಕೆ ಸುದೀಪ್​ ಅಭಿಮಾನಿಗಳ ಜೊತೆ ಕೇಕ್​ ಕತ್ತರಿಸುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್​ ನಟನೆಯ 'ಪೈಲ್ವಾನ್​' ಚಿತ್ರ ಐದು ಭಾಷೆಗಳಲ್ಲಿ ಸೆ.12ರಂದು ತೆರೆಗೆ ಬರುತ್ತಿದೆ. ‘ಗಜಕೇಸರಿ’, ‘ಹೆಬ್ಬುಲಿ’ ಚಿತ್ರದ ನಿರ್ದೇಶಕ ಕೃಷ್ಣ ‘ಪೈಲ್ವಾನ್​’ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಹೆಬ್ಬುಲಿ’ನಂತರ ಅವರು ಮತ್ತೊಮ್ಮೆ ಸುದೀಪ್​ ಜೊತೆ ಕೈಜೋಡಿಸುತ್ತಿರುವುದು ವಿಶೇಷ. ಬಾಲಿವುಡ್​ ನಟರಾದ ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​, ಸುಶಾಂತ್​ ಸಿಂಗ್​ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಕಾಂಕ್ಷಾ ಚಿತ್ರಕ್ಕೆ ನಾಯಕಿ. ಇದಲ್ಲದೆ ಹಿಂದಿಯ ‘ದಬಂಗ್​ 3’ ಹಾಗೂ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ.

First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading